»   » ರಜನಿಕಾಂತ್ ಮಗಳು ಸೌಂದರ್ಯ ನಿಶ್ಚಿತಾರ್ಥ

ರಜನಿಕಾಂತ್ ಮಗಳು ಸೌಂದರ್ಯ ನಿಶ್ಚಿತಾರ್ಥ

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಹಿರಿಯ ಮಗಳು ಸೌಂದರ್ಯ ರಜನಿಕಾಂತ್ ಅವರ ನಿಶ್ಚಿತಾರ್ಥ ಅಶ್ವಿನ್ ಕುಮಾರ್ ಜೊತೆ ಚೆನ್ನೈಯಲ್ಲಿ ಬುಧವಾರ (ಫೆ.17)ನೆರವೇರಿತು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿರುವ ರಾಮ್ ಕುಮಾರ್ ಮಗ ಅಶ್ವಿನ್ ಕುಮಾರ್ ನಿಶ್ಚಿತಾರ್ಥ ಚೆನ್ನೈನ ಹೋಟೆಲ್ ಪಾರ್ಕ್ ಶೆರಟಾನ್ ನಲ್ಲಿ ಅದ್ದೂರಿಯಾಗಿ ನಡೆಯಿತು.

ನವವಧು ಸೌಂದರ್ಯ ರಜನಿಕಾಂತ್ ಹಾಗೂ ಅಶ್ವಿನ್ ಕುಮಾರ್ ಒಬ್ಬರಿಗೊಬ್ಬರು ಉಂಗುರ ತೊಡಿಸಿಕೊಳ್ಳುವ ಮೂಲಕ ಇವರಿಬ್ಬರ ನಿಶ್ಚಿತಾರ್ಥ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಸಾಕ್ಷಿಯಾಗಿ ನಡೆಯಿತು. ಕಮಲ್ ಹಾಸನ್, ಅಜಿತ್ ಕುಮಾರ್, ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸೇರಿದಂತೆ ವಿವಿಐಪಿಗಳು ನಿಶ್ಚಿತಾರ್ಥಕ್ಕೆ ಆಗಮಿಸಿದ್ದರು.

ಅಶ್ವಿನ್ ಕುಮಾರ್ ಅವರು ಅಮೆರಿಕಾದ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಅಪ್ಪನ ರಿಯಲ್ ಎಸ್ಟೇಟ್ ಉದ್ಯಮವನ್ನು ಅಶ್ವಿನ್ ನೋಡಿಕೊಳ್ಳುತ್ತಿದ್ದಾರೆ. ಮದುವೆ ದಿನಾಂಕವನ್ನು ರಜನಿಕಾಂತ್ ಇನ್ನೂ ಪ್ರಕಟಿಸಿಲ್ಲ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada