»   »  ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಗಳ ಪಟ್ಟಿ ಪ್ರಕಟ

ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಗಳ ಪಟ್ಟಿ ಪ್ರಕಟ

Posted By:
Subscribe to Filmibeat Kannada
B R Lakshman Rao
ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಡಿ.ವಿ.ಸುಧೀಂದ್ರ ಅವರು ತಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25ವರ್ಷ ತುಂಬಿದ ಸುಸಂದರ್ಭದಲ್ಲಿ ಅನ್ನದಾತರಾದ ನಿರ್ಮಾಪಕರಿಗೆ ಮತ್ತು ದಾರಿದೀಪವಾದ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಎರಡು ಪ್ರಶಸ್ತಿಯೊಂದಿಗೆ ಆರಂಭವಾದ ಈ ಸಮಾರಂಭಕ್ಕೆ ಆಗಮಿಸಿದ ಗಣ್ಯರು ನಮ್ಮ ಸಂಸ್ಥೆಯ ಮೂಲಕ ಪ್ರಶಸ್ತಿ ನೀಡಲು ಮುಂದಾದರು. ಈಗ ಪ್ರಶಸ್ತಿಗಳ ಸಂಖ್ಯೆ 15ಕ್ಕೇರಿದೆ.

ಸಂಸ್ಥೆಯ 32ನೇ ವಾರ್ಷಿಕೋತ್ಸವ ಹಾಗೂ 8ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಮೇ 31ರಂದು ಸಂಜೆ 5ಕ್ಕೆ ನಗರದ ದಿ.ಬೆಲ್ ಹೋಟಲ್(ರೈಲ್ವೇ ನಿಲ್ದಾಣದ ಪಕ್ಕ)ನಲ್ಲಿ ನಡೆಯಲಿದೆ. ಚಿತ್ರರಂಗದ ಗಣ್ಯರು ಅಂದಿನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಈ ಬಾರಿಯ ವಿಶೇಷವೆನೆಂದರೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಸಾವಿರಕ್ಕೂ ಅಧಿಕ ಚಿತ್ರಗಳಿಗೆ ಪ್ರಚಾರ ನೀಡಿದ ಸಂಭ್ರಮದಲ್ಲಿದೆ. ಈ ಸಮಯದಲ್ಲಿ ಸುಧೀಂದ್ರ ಅವರ ಬದುಕನ್ನು ಕುರಿತು ಪತ್ರಕರ್ತ ಮಹೇಶ್ ದೇವಶೆಟ್ಟಿ ಹಾಗೂ ವಿನಾಯಕರಾಮ ಕಲಗಾರು ಬರೆದಿರುವ 'ಸುದ್ದಿಸೇತು ಸಾಧಕ' ಎಂಬ ಕೃತಿ ಪತ್ರಕರ್ತ ರವಿ ಬೆಳಗೆರೆ ಅವರಿಂದ ಲೋಕಾರ್ಪಣೆಯಾಗಲಿದೆ.

ಪ್ರಶಸ್ತಿಗಳ ವಿವರ
ದಿವಂಗತ ಎಲ್.ಅಬ್ಬಾಯಿನಾಯ್ಡು ಸ್ಥಾಪಿತ ಮಧು ಆರ್ಟ್ ಫಿಲಂಸ್ ಸಂಸ್ಥೆಗೆ ಮತ್ತು ಬಿ.ವಿ.ವೈಕುಂಠರಾಜು ಹಿರಿಯ ಚಲನಚಿತ್ರ ಪತ್ರಕರ್ತರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ. ಖ್ಯಾತ ಹಿನ್ನೆಲೆ ಗಾಯಕಿ ಬಿ.ಕೆ.ಸುಮಿತ್ರ (ಡಾ:ರಾಜ್‌ಕುಮಾರ್ ಪ್ರಶಸ್ತಿ), ನಿರ್ದೇಶಕ ಭಾರ್ಗವ (ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ), ಖ್ಯಾತ ಕಲಾದರಾದ ಹರಿಣಿ (ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ) ನೀಡಲಾಗುತ್ತದೆ.

ಪ್ರಶಸ್ತಿ ಪಟ್ಟಿಯಲ್ಲಿ ಸಿನಿಮಾ ಪತ್ರಕರ್ತರಾದ ಸುರೇಶ್ ಮತ್ತು ಸಂದೀಪ್ ನಾಯಕ ಅವರು ಇದ್ದಾರೆ. ಎಸ್ ಮಹೇಂದರ್, ಯೋಗರಾಜ್ ಭಟ್, ಸುಮನಾ ಕಿತ್ತೂರು, ಆರ್ ರಾಜಗೋಪಾಲ್ ಅವರು ಸ್ಥಾನ ಪಡೆದಿದ್ದಾರೆ. ಆಕ್ಸಿಡೆಂಟ್' ಚಿತ್ರದ 'ಬಾ ಮಳೆಯೆ ಬಾ' ಗೀತರಚನೆಗಾಗಿ ಬಿ ಆರ್ ಲಕ್ಷ್ಮಣರಾವ್ ಅವರಿಗೆ ನಾಡಿಗೇರ್ ಕೃಷ್ಣರಾವ್ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬಾಲಿವುಡ್ ನಟ ಅಕ್ಷಯ್ ಕುಮಾರ್ ಬಂಧನ
ಬೆಳ್ಳಿತೆರೆಗೆ ಶ್ರುತಿ, ಮಹೇಂದರ್ ತೆರೆಮರೆಯ ಕತೆ!
ಮಕದ್ದರ್ ಕಾ ಸಿಕಂದರ್ ಖ್ಯಾತಿಯ ಮೆಹ್ರಾ ನಿಧನ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada