»   » ಸ್ಥಿರಚಿತ್ರ ಛಾಯಾಗ್ರಾಹಕ ನಾಗದೇವ್ ನಿಧನ

ಸ್ಥಿರಚಿತ್ರ ಛಾಯಾಗ್ರಾಹಕ ನಾಗದೇವ್ ನಿಧನ

Subscribe to Filmibeat Kannada

ಕನ್ನಡ ಚಿತ್ರರಂಗದ ಸ್ಥಿರಚಿತ್ರ ಛಾಯಾಗ್ರಾಹಕ ನಾಗದೇವ್(40) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕನ್ನಡ ಚಿತ್ರೋದ್ಯಮದಲ್ಲಿ ಅವರನ್ನು ಪ್ರೀತಿಯಿಂದ ಅಪ್ಪು ಎಂದೇ ಕರೆಯುತ್ತಿದ್ದರು. ಕಳೆದ 20 ವರ್ಷಗಳಿಂದ ಅವರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರಾಜಾಜಿನಗರ 6ನೇ ಬ್ಲಾಕ್ ನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ. ಕನ್ನಡದ 200ಕ್ಕೂ ಹೆಚ್ಚು ಸ್ಥಿರ ಚಿತ್ರಗಳಿಗೆ ಅಪ್ಪು ಅವರು ಕೆಲಸ ಮಾಡಿದ್ದಾರೆ.ಮುಂಗಾರು ಮಳೆ, ತಾಕತ್, ವಾಯುಪುತ್ರ ಅವರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಇತ್ತೀಚಿನ ಕೆಲವು ಚಿತ್ರಗಳು. ದಿವಂಗತ ಶಂಕರನಾಗ್ ಅವರ 'ನಿಗೂಢ ರಹಸ್ಯ' ಚಿತ್ರದ ಮೂಲಕ ಅಪ್ಪು ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಉಪೇಂದ್ರ ಸೇರಿದಂತೆ ಅನೇಕ ನಾಯಕ ನಟರ ಜೊತೆ ಕೆಲಸ ಮಾಡಿದ್ದರು.

ಅಪ್ಪು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಕೃಷ್ಣ ನೀ ಲೇಟಾಗಿ ಬಾರೋ, ಪ್ರೀತಿಯ ಹಂಗಾಮ, ಶಿವಕಾಶಿ ಚಿತ್ರಗಳು ತೆರೆಕಾಣಬೇಕಾದ ಚಿತ್ರಗಳು. ಅಪ್ಪು ಅವರು ಹೆಚ್ಚಾಗಿ ನವರಸ ನಾಯಕ ಜಗ್ಗೇಶ್ ಅವರ ಚಿತ್ರಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

ದಿವಂಗತ ನಾಗದೇವ್ ಅವರ ಭಾವಚಿತ್ರ ದಟ್ಸ್ ಕನ್ನಡದ ಫೋಟೋ ಬ್ಯಾಂಕಿನಲ್ಲಿ ಇಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ. ಹಾಗಾಗಿ, ಅವರು ಕ್ಲಿಕ್ಕಿಸಿದ್ದ ಗಣೇಶ್ ಅವರ ಭಂಗಿಯೊಂದನ್ನು ಅಪ್ಪು ಅವರ ಕ್ಯಾಮರಾ ಕಲಾತ್ಮಕತೆಗೆ ನಿದರ್ಶನವಾಗಿ ಪ್ರಕಟಿಸಲಾಗಿದೆ- ಸಂಪಾದಕ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada