»   » ಬೆಳ್ಳಿತೆರೆಗೆ ಸುರೇಶ್ ಹೆಬ್ಳೀಕರ್ ಪುತ್ರ ಅಕ್ಷಯ್

ಬೆಳ್ಳಿತೆರೆಗೆ ಸುರೇಶ್ ಹೆಬ್ಳೀಕರ್ ಪುತ್ರ ಅಕ್ಷಯ್

Posted By:
Subscribe to Filmibeat Kannada

ಖ್ಯಾತ ಚಿತ್ರ ನಿರ್ದೇಶಕ, ನಟ ಹಾಗೂ ಪರಿಸರವಾದಿ ಸುರೇಶ್ ಹೆಬ್ಳೀಕರ್ ಅವರ ಮಗ ಅಕ್ಷಯ್ ಹೆಬ್ಳೀಕರ್ ಕಡೆಗೂ ಬೆಳ್ಳಿತೆರೆಗೆ ಅಡಿಯಿಡಲು ನಿರ್ಧರಿಸಿದ್ದಾರೆ. ಚಿತ್ರರಂಗಕ್ಕೆ ಅಡಿಯಿಡಿವುದಿಲ್ಲ ಎಂದು ಅಕ್ಷಯ್ ಸುದೀರ್ಘ ಸಮಯದಿಂದ ಪಟ್ಟು ಹಿಡಿದಿದ್ದರು. ಬೆಳ್ಳಿತೆರೆಗೆ ಅಡಿಯಿಡುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ.

ಅಕ್ಷಯ್ ಗೆ ಚಿತ್ರರಂಗಕ್ಕಿಂತಲೂ ಪರಿಸರದ ಬಗ್ಗೆ ಹೆಚ್ಚು ಕಾಳಜಿ. ಈ ಹಿಂದೆ ಸಾಕಷ್ಟು ಚಿತ್ರಗಳು ಅಕ್ಷಯ್ ಅವರನ್ನು ಹುಡುಕಿಕೊಂಡು ಬಂದಿದ್ದವು. ಆದರೆ ಸಿನಿಮಾ ಎಂದರೆ ಮೂಗು ಮುರಿಯುತ್ತಿದ್ದ ಅಕ್ಷಯ್ ಬಂದ ಯಾವ ಚಿತ್ರವನ್ನೂ ಒಪ್ಪಿಕೊಳ್ಳಲಿಲ್ಲ. ಬಹಳಷ್ಟು ಸಿನಿಮಾ ತಾರೆಗಳ ಮಕ್ಕಳು ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಆದರೆ ಸುರೇಶ್ ಹೆಬ್ಳೀಕರ್ ತಮ್ಮ ಮಗನನ್ನು ಚಿತ್ರರಂಗದಲ್ಲಿ ತೊಡಗಿಕೊಳ್ಳುವಂತೆ ಎಂದೂ ಬಲವಂತ ಮಾಡಿರಲಿಲ್ಲ.

'ಬಿಲಿಯನ್ ಡಾಲರ್ ಬೇಬಿ' ಹಾಗೂ 'ಮೈಲಾರಿ' ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಸುರೇಶ್ ಹೆಬ್ಳೀಕರ್ ಗೆ ಅಕ್ಷಯ್ ಸಹಾಯ ಮಾಡುತ್ತ್ತಿದ್ದರು. ಕಡೆಗೆ ಚಿತ್ರರಂಗಕ್ಕೆ ಧುಮುಕಲು ತೀರ್ಮಾನಿಸಿದ್ದಾರೆ. ಕನ್ನಡದ ಜೊತೆಗೆ ಮಲಯಾಳಂ ಚಿತ್ರಗಳ ಬಗೆಗೂ ಅಕ್ಷಯ್ ಗೆ ಆಸಕ್ತಿಯಿದೆ. ನೃತ್ಯ ಹಾಗೂ ತಬಲಾ ಕಲಾವಿದರೂ ಅಗಿರುವ ಅಕ್ಷಯ್ ಮಹತ್ವಾಕಾಂಕ್ಷೆಯ ಚಿತ್ರವೊಂದನ್ನು ಕನ್ನ್ನಡದಲ್ಲಿ ಮಾಡಲು ತೀರ್ಮಾನಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada