»   » ಈ ವಾರ 'ಸ್ವಯಂವರ' ಜೊತೆಗೆ 'ದಿಲ್ದಾರ'

ಈ ವಾರ 'ಸ್ವಯಂವರ' ಜೊತೆಗೆ 'ದಿಲ್ದಾರ'

Posted By:
Subscribe to Filmibeat Kannada

ಸ್ವಯಂವರ
ಚಿತ್ರೀಕರಣ ಹಂತದಿಂದಲೂ ಕುತೂಹಲ ಕೆರಳಿಸಿರುವ 'ಸ್ವಯಂವರ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಅನಂತರಾಜು ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಚಂದ್ರು ನಿರ್ಮಿಸಿದ್ದಾರೆ. ಶ್ರೀನಗರ ಕಿಟ್ಟಿ ಹಾಗೂ ದಿಗಂತ್ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ಶರ್ಮಿಳಾಮಾಂಡ್ರೆ.

ತಾರಾ, ಓಂಪ್ರಕಾಶ್‌ರಾವ್, ಅರುಣ್‌ಸಾಗರ್ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಚಿತ್ರದ ಧ್ವನಿಸುರುಳಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಎಚ್.ಸಿ.ವೇಣು ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ತುಷಾರ ರಂಗನಾಥ್ ಸಂಭಾಷಣೆ, ಹರ್ಷ ನೃತ್ಯ ಹಾಗೂ ಪಳನಿರಾಜ್ ಅವರ ಸಾಹಸ 'ಸ್ವಯಂವರ ಚಿತ್ರಕ್ಕಿದೆ.

ದಿಲ್ದಾರ
ಕನಸು ಕ್ರಿಯೇಟರ‍್ಸ್ ಲಾಂಛನದಲ್ಲಿ ಧನಂಜಯಗೌಡ ಅವರು ನಿರ್ಮಿಸಿರುವ 'ದಿಲ್ದಾರ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಸಹ ನಿರ್ಮಾಪಕರಾದ ಅಮನ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ನಿಷ್ಮಾ ಚೆಂಗಪ್ಪ. ರಂಗಾಯಣ ರಘು, ಕಿಶೋರ್, ಎಂ.ಎನ್.ಲಕ್ಷ್ಮೀದೇವಿ, ಬಿರಾದಾರ್, ಮೈಕೋ ನಾಗರಾಜ್,ಪ್ರಣವಮೂರ್ತಿ, ವಿಶ್ವ, ಕೆಂಪೇಗೌಡ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಖ್ಯಾತ ನಿರ್ದೇಶಕರ ಬಳಿ ಸಹಾಯಕರಾಗಿದ್ದ ಅಮರ್ ಈ ಚಿತ್ರದ ನಿರ್ದೇಶಕರು. ರವಿಕಿರಣ್ ಅವರ ಛಾಯಾಗ್ರಹಣವಿರುವ ಚಿತ್ರಕ್ಕೆ ಶಿವರಾಜ್ ಮೇಹು ಅವರ ಸಂಕಲನವಿದೆ. ಜಡೇಶ್ ಎಸ್.ವಿ ಕಥೆ, ಹರ್ಷ-ರಘು ನೃತ್ಯ, ಡಿಫರೆಂಟ್ ಡ್ಯಾನಿ ಸಾಹಸ, ನಾಗೇಂದ್ರ ಪ್ರಸಾದ್, ಸೂರ್ಯ, ವಿ.ಮನೋಹರ್ ಹಾಗೂ ಪುನೀತ್ ಆರ್ಯ ಅವರ ಗೀತರಚನೆ ಈ ಚಿತ್ರಕ್ಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada