»   »  ರಜನಿ ಆಯ್ತು ಈಗ ರಜನಿ ಸೂಪರ್ ಸ್ಟಾರ್ ಚಿತ್ರ

ರಜನಿ ಆಯ್ತು ಈಗ ರಜನಿ ಸೂಪರ್ ಸ್ಟಾರ್ ಚಿತ್ರ

Subscribe to Filmibeat Kannada
Upendra
'ರಜನಿ-ಸೂಪರ್ ಸ್ಟಾರ್' ಎಂಬ ಹೆಸರಿನ ಮತ್ತೊಂದು ಕನ್ನಡ ಚಿತ್ರವನ್ನು ಗುರು ದೇಶಪಾಂಡೆ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ರಾಮು ನಿರ್ಮಿಸುತ್ತಿರುವ ಚಿತ್ರಕ್ಕೂ 'ರಜನಿ' ಎಂದು ಹೆಸರಿಡಲಾಗಿದೆ. ಥ್ರಿಲ್ಲರ್ ಮಂಜು ನಿರ್ದೇಶಿಸುತ್ತಿರುವ 'ರಜನಿ' ಚಿತ್ರಕ್ಕೆ ಉಪೇಂದ್ರ ನಾಯಕ ನಟ. ಹಾಗಾಗಿ ಕನ್ನಡ ಪ್ರೇಕ್ಷಕರ ಪಾಲಿಗೆ ಎರಡು ರಜನಿ ಚಿತ್ರಗಳು ಲಭ್ಯವಾಗಲಿವೆ!

ಈ ಎರಡೂ ರಜನಿ ಚಿತ್ರಗಳಿಗೂ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಗೂ ಸುತಾರಾಂ ಸಂಬಂಧವಿಲ್ಲ. ಶೀರ್ಷಿಕೆಯನ್ನು ಹಾಗಿಟ್ಟಿದ್ದೇವೆ ಅಷ್ಟೆ ಎನ್ನುತ್ತಾರೆ ರಜನಿ ಚಿತ್ರಗಳನಿರ್ಮಾಪಕರು. ಗುರು ದೇಶಪಾಂಡೆ ಅವರ 'ರಜನಿ ಸೂಪರ್ ಸ್ಟಾರ್' ಚಿತ್ರ ನವಿರಾದ ಪ್ರೇಮ ಕತೆಯನ್ನು ಹೊಂದಿದೆಯಂತೆ. ಈ ಹಿಂದೆ ಅವರು ವಾರಸ್ದಾರ ಚಿತ್ರವನ್ನು ನಿರ್ದೇಶಿಸಿದ್ದರು.

ರಜನಿ-ಸೂಪರ್ ಸ್ಟಾರ್ ಚಿತ್ರವನ್ನು ಸ್ಟಾರ್ ಕ್ರಿಯೇಟರ್ಸ್ ಬ್ಯಾನರಿನಡಿ ಶಿಲ್ಪಾ ದೇಶಪಾಂಡೆ ನಿರ್ಮಿಸುತ್ತಿದ್ದಾರೆ. ಕತೆ, ಚಿತ್ರಕಥೆ, ಸಂಭಾಷಣೆ ಗುರು ದೇಶಪಾಂಡೆ ಅವರದು. ಈ ಚಿತ್ರಕ್ಕೆ ಶಂಕರ್ ಸಂಗೀತ, ಪಟ್ರೆ ಲವ್ಸ್ ಪದ್ಮ ಖ್ಯಾತಿಯ ಸಿನಿಟೆಕ್ ಸೂರಿ ಛಾಯಾಗ್ರಹಣವಿದೆ. ಏಪ್ರಿಲ್ ನಿಂದ ಚಿತ್ರೀಕರಣ ಆರಂಭವಾಗಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಉಪೇಂದ್ರ
ಮರಸುತ್ತೊ ಪ್ರೇಮಿಗಳಾಗಿ ಉಪ್ಪಿ, ಪ್ರಿಯಾಂಕ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada