»   » ಕಾಲೇಜಿನಲ್ಲಿ 'ರಾಧ' ಫ್ಯಾಷನ್ ಶೋ

ಕಾಲೇಜಿನಲ್ಲಿ 'ರಾಧ' ಫ್ಯಾಷನ್ ಶೋ

Posted By:
Subscribe to Filmibeat Kannada

ಕಾಲೇಜು ಜ್ಞಾನದೇಗುಲ, ವಿಧ್ಯಾರ್ಥಿಗಳ ಭವಿಷ್ಯದ ಬುನಾದಿ ಕೂಡ. ಕಾಲೇಜು ಕೇವಲ ವಿದ್ಯೆ ಕಲಿಸುವಿಕೆಗಷ್ಟೇ ಮೀಸಲಾಗದೇ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಹೆಸರು ಪಡೆಯುತ್ತಿದೆ. ಇಂಥ ಕಾಲೇಜಿನಲ್ಲೊಬ್ಬ ಪ್ರತಿಭಾವಂತ ವಿದ್ಯಾರ್ಥಿ. ಓದಿನೊಂದಿಗೆ ಮಾಡ್‌ಲಿಂಗ್‌ನಲ್ಲೂ ಖ್ಯಾತಿ ಪಡೆದಾತ ಅವನು. ಆಗಷ್ಟೇ ಕಾಲೇಜು ಸೇರಿದ ಹುಡುಗಿಯೊಬ್ಬಳಿಗೆ ಈತನ ಜೊತೆ ಸ್ನೇಹ ಬೆಳೆಸಬೇಕೆಂಬ ಹಂಬಲವಿರುತ್ತದೆ. ಕೊನೆಗೆ ಆಕೆಯ ಆಸೆ ಸಾಕಾರಗೊಂಡು ಸ್ನೇಹಿತರಾಗುತ್ತಾರೆ.

ಹಲವು ಫ್ಯಾಷನ್ ಶೋಗಳಲ್ಲೂ ಭಾಗವಹಿಸುತ್ತಾರೆ. ಈ ಸನ್ನಿವೇಶವನ್ನು 'ರಾಧ' ಚಿತ್ರಕ್ಕಾಗಿ ಬೆಂಗಳೂರಿನ ಎಂ.ಎಸ್.ಪಾಳ್ಯ ಬಡಾವಣೆಯ ಸಂಭ್ರಮ ಕಾಲೇಜಿನಲ್ಲಿ ನಿರ್ದೇಶಕ ಹರಿಕಿರಣ್ ಚಿತ್ರೀಕರಿಸಿಕೊಂಡರು. ಶೇಖರ್ ಹಾಗೂ ಮಧುವಿಕಾ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿದ್ದರು. ದ್ವಿತೀಯ ಹಂತದ ಚಿತ್ರೀಕರಣ ಭರದಿಂದ ಸಾಗಿದ್ದು, 5 ಹಾಡುಗಳ ಚಿತ್ರೀಕರಣ ಬಾಕಿಯಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಜಿ ಎಲ್ ಕೆ ಫಿಲಂಸ್ ಲಾಂಛನದಲ್ಲಿ ರವಿಕಮಲ್ ಹಾಗೂ ಶ್ರೀಧರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸತ್ಯಬಾಬು ಅವರ ಛಾಯಾಗ್ರಹಣವಿದೆ. ರವಿಅಲಾ ಸಂಗೀತ, ಬಾಬು ಸಂಕಲನ, ಮುರಳಿ ಸಂಭಾಷಣೆ ಹಾಗೂ ತಾಂತ್ರಿಕ ನಿರ್ದೇಶನ ಹಾಗೂ ಡಿಫರೆಂಟ್‌ಡ್ಯಾನಿ ಸಾಹಸವಿರುವ ಚಿತ್ರದ ತಾರಾಬಳಗದಲ್ಲಿ ವಿಜಯರಾಘವೇಂದ್ರ, ಶೇಖರ್, ಮಧುವಿಕಾ, ವಿಜಯರಂಗರಾಜು, ನಟರಾಜ್, ಎಂ.ಎಸ್.ನಾರಾಯಣ್, ಜಯಪ್ರಕಾಶ್‌ರೆಡ್ಡಿ, ಭವ್ಯ, ಸವಿತಾಕೃಷ್ಣಮೂರ್ತಿ, ನಕುಲ್‌ಬಾಲಚಂದರ್, ಸುನೀಲ್ ಬೀರೂರ್ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X