»   »  'ಕರಿ ಚಿರತೆ'ಗೆ ಜತೆಯಾದ ಶರ್ಮಿಳಾ ಮಾಂಡ್ರೆ

'ಕರಿ ಚಿರತೆ'ಗೆ ಜತೆಯಾದ ಶರ್ಮಿಳಾ ಮಾಂಡ್ರೆ

Subscribe to Filmibeat Kannada

'ಸಜನಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ನಟಿ ಶರ್ಮಿಳಾ ಮಾಂಡ್ರೆ. ಈಗ ಆಕೆ 'ಕರಿ ಚಿರತೆ' ಎಂಬ ಹೊಸ ಚಿತ್ರಕ್ಕೆ ನಾಯಕಿ. ನಟ ವಿಜಯ್ 'ಕರಿ ಚಿರತೆ'ಯಾಗಿ ಕಾಣಿಸಿಕೊಳ್ಳಲಿದ್ದಾರೆ. 'ಗಜ' ಮತ್ತು 'ರಾಮ್' ಚಿತ್ರಗಳ ಖ್ಯಾತಿಯ ಮಾದೇಶ ಈ ಚಿತ್ರದ ನಿರ್ದೇಶಕರು.

ಕಳೆದ ವರ್ಷವೇ ವಿಜಯ್ ಈ ಚಿತ್ರಕ್ಕೆ ಸಹಿ ಹಾಕಿದ್ದರು. ಕಾರಣಾಂತರಗಳಿಂದ ಚಿತ್ರ ಈಗ ಸೆಟ್ಟೇರುತ್ತಿದೆ. ಕರಿ ಚಿರತೆಯನ್ನು ಮೋಹನ್ ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ವಿಜಯ್ ಅಭಿನಯದ 'ದೇವ್ರು' ಚಿತ್ರ ಬಿರುಸಿನ ಚಿತ್ರೀಕರಣದಲ್ಲಿದೆ. ಈಗ ಕರಿ ಚಿರತೆಯಾಗಿ ಎರಗಲು ವಿಜಯ್ ಸಿದ್ಧತೆ ನಡೆಸಿದ್ದಾರೆ.

ಶರ್ಮಿಳಾ ಮಾಂಡ್ರೆ ಮತ್ತು ರಮೇಶ್ ಅಭಿನಯದ 'ವೆಂಕಟ ಇನ್ ಸಂಕಟ' ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಶ್ರೀಮುರಳಿ ಜತೆ ನಟಿಸಿದ ಶಿವಮಣಿ, ದರ್ಶನ್ ರ ನವಗ್ರಹ, ಗೋಲ್ಡನ್ ಸ್ಟಾರ್ ಗಣೇಶ್ ರ ಕೃಷ್ಣ ಚಿತ್ರಗಳಲ್ಲಿ ಶರ್ಮಿಳಾ ನಟಿಸಿದ್ದರು. ಇದೇ ಮೊದಲ ಬಾರಿಗೆ ವಿಜಯ್ ಜತೆ ನಟಿಸುವ ಅವಕಾಶ ಶರ್ಮಿಳಾ ಪಾಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada