For Quick Alerts
ALLOW NOTIFICATIONS  
For Daily Alerts

2009-10ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಪ್ರಕಟಿಸಿದ ಸಿಎಂ

By Rajendra
|

2009 -10ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಬುಧವಾರ (ಅ.19) ಮುಖ್ಯಮಂತ್ರಿ ಸದಾನಂದಗೌಡ ಅವರು ವಿಧಾನಸೌಧದಲ್ಲಿ ಪ್ರಕಟಿಸಿದರು. ಮೊದಲ ಅತ್ಯುತ್ತಮ ಚಿತ್ರವಾಗಿ ಋತ್ವಿಕ್ ಸಿಂಹ ಚೊಚ್ಚಿಲ ನಿರ್ದೇಶನದ 'ರಸಋಷಿ ಕುವೆಂಪು' ಆಯ್ಕೆಯಾಗಿದೆ.

ಎರಡನೇ ಅತ್ಯುತ್ತಮ ಚಿತ್ರವಾಗಿ ಯೋಗರಾಜ್ ಭಟ್ ನಿರ್ದೇಶನದ 'ಮನಸಾರೆ' ಹಾಗೂ ಮೂರನೆ ಅತ್ಯುತ್ತಮ ಚಿತ್ರವಾಗಿ ಪ್ರಶಾಂತ್ ರಾಜ್ ನಿರ್ದೇಶನದ 'ಲವ್ ಗುರು' ಚಿತ್ರಗಳು ಆಯ್ಕೆಯಾಗಿವೆ. ಉತ್ತಮ ಸಾಮಾಜಿಕ ಚಿತ್ರ ಪ್ರಶಸ್ತಿಯನ್ನು ಬರಗೂರು ರಾಮಚಂದ್ರಪ್ಪನವರ 'ಶಬರಿ' ಚಿತ್ರ ಪಡೆದುಕೊಂಡಿದೆ.

'ಆಪ್ತರಕ್ಷಕ' ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ದಿವಂಗತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ನೀಡಲಾಗಿದೆ. 'ಪರೀಕ್ಷೆ' ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಉತ್ತಮ ನಟಿ ಪ್ರಶಸ್ತಿ ಅನುಪ್ರಭಾಕರ್ ಪಾಲಾಗಿದೆ. 'ಪರೀಕ್ಷೆ' ಚಿತ್ರವನ್ನು ಸೀತಾರಾಂ ಕಾರಂತ್ ನಿರ್ದೇಶಿಸಿದ್ದಾರೆ.

ನಟ ನೀನಾಸಂ ಅಶ್ವತ್ಥ್ ಅವರು ಉತ್ತಮ ಪೋಷಕ ನಟರಾಗಿ ಆಯ್ಕೆಯಗಿದ್ದರೆ ವೇಣು ಅತ್ಯುತ್ತಮ ಕಲಾ ನಿರ್ದೇಶಕರಾಗಿ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಒಲವೇ ಜೀವನ ಲೆಕ್ಕಾಚಾರ' ಚಿತ್ರಕ್ಕೆ ಅತ್ಯುತ್ತಮ ಕತೆ ಪ್ರಶಸ್ತಿಗಳು ಲಭಿಸಿವೆ. ದ್ವಾರಕೀಶ್ ನೇತೃತ್ವದ ಆಯ್ಕೆ ಸಮಿತಿ ಈ ಚಿತ್ರಗಳನ್ನು ಆಯ್ಕೆ ಮಾಡಿದೆ.

ಡಾ.ರಾಜ್ ಕುಮಾರ್ ಪ್ರಶಸ್ತಿಗೆ ಹಿರಿಯ ನಟ ಆರ್ ಎನ್ ಸುದರ್ಶನ್ (ರು.2 ಲಕ್ಷ ನಗದು ಹಾಗೂ ಚಿನ್ನಲೇಪಿತ ಫಲಕ), ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಹಿರಿಯ ನಿರ್ದೇಶಕ ಹಾಗೂ ಗೀತರಚನೆಕಾರ ಸಿ ವಿ ಶಿವಶಂಕರ್ (ರು.2 ಲಕ್ಷ ನಗದು ಚಿನ್ನಲೇಪಿತ ಫಲಕ) ಹಾಗೂ ಜೀವಮಾನ ಸಾಧನೆಗಾಗಿ ನೀಡುವ ಡಾ.ವಿಷ್ಣುವರ್ಧನ್ ಪ್ರಶಸ್ತಿಗೆ ಎಸ್ ಡಿ ಅಂಕಲಗಿ (ರು.2 ಲಕ್ಷ ನಗದು ಹಾಗೂ ಚಿನ್ನಲೇಪಿತ ಫಲಕ) ನೀಡಲಾಗಿದೆ. ವಿವಿಧ ವಿಭಾಗಳಲ್ಲಿ ಪ್ರಶಸ್ತಿ ಪಡೆದವರ ವಿವರಗಳು ಹೀಗಿವೆ.

ಅತ್ಯುತ್ತಮ ಮಕ್ಕಳ ಚಿತ್ರ: ಕಿನ್ನರ ಬಾಲೆ

ಅತ್ಯುತ್ತಮ ಪೋಷಕ ನಟ: ನೀನಾಸಂ ಅಶ್ವತ್ಥ್ (ಚಿತ್ರ ಬನ್ನಿ)

ಅತ್ಯುತ್ತಮ ಪೋಷಕ ನಟಿ: ಚಂದ್ರಕಲಾ (ಚಿತ್ರ ಋಣಾನುಬಂಧ)

ಅತ್ಯುತ್ತಮ ಕಂಠದಾನ ಕಲಾವಿದ: ಸಿದ್ಧರಾಜ ಕಲ್ಯಾಣಕರ (ಚಿತ್ರ ಬನ್ನಿ)

ಅತ್ಯುತ್ತಮ ಕಂಠದಾನ ಕಲಾವಿದೆ: ದೀಪು (ಜಸ್ಟ್ ಮಾತ್ ಮಾತಲ್ಲಿ)

ಅತ್ಯುತ್ತಮ ಕತೆ ಬರಹಗಾರ: ನಾಗತಿಹಳ್ಳಿ ಚಂದ್ರಶೇಖರ್ (ಜಸ್ಟ್ ಮಾತ್ ಮಾತಲ್ಲಿ)

ಅತ್ಯುತ್ತಮ ಚಿತ್ರಕತೆ ಬರಹಗಾರ: ಗುರುಪ್ರಸಾದ್ (ಎದ್ದೇಳು ಮಂಜುನಾಥ)

ಅತ್ಯುತ್ತಮ ಸಂಭಾಷಣೆಕಾರ: ಗೊಡಚಿ ಮಹಾರುದ್ರ (ಬನ್ನಿ)

ಅತ್ಯುತ್ತಮ ಛಾಯಗ್ರಾಹಕ: ಸುಂದರನಾಥ್ ಸುವರ್ಣ (ಕಳ್ಳರ ಸಂತೆ)

ಅತ್ಯುತ್ತಮ ಸಂಗೀತ ನಿರ್ದೇಶಕ: ವಿ ಹರಿಕೃಷ್ಣ (ರಾಜ್)

ಅತ್ಯುತ್ತಮ ಧ್ವನಿಗ್ರಾಹಕ: ಕುಮಾರ್ (ಜಸ್ಟ್ ಮಾತ್ ಮಾತಲ್ಲಿ)

ಅತ್ಯುತ್ತಮ ಸಂಕಲನಕಾರ: ಶ್ರೀನಿವಾಸ್ ಪಿ ಬಾಬು (ರಾಜ್)

ಅತ್ಯುತ್ತಮ ಬಾಲನಟ: ಮಾ.ಚಿರಂಜೀವಿ (ಏಕಮೇವ)

ಅತ್ಯುತ್ತಮ ಬಾಲನಟಿ: ಮಧುಶ್ರೀ (ಕಿನ್ನರ ಬಾಲೆ)

ಅತ್ಯುತ್ತಮ ಕಲಾ ನಿರ್ದೇಶಕ: ವೇಣು (ಆಪ್ತರಕ್ಷಕ)

ಅತ್ಯುತ್ತಮ ಗೀತರಚನೆಕಾರ: ವಿ ನಾಗೇಂದ್ರಪ್ರಸಾದ್ (ಸತ್ಯ)

ಅತ್ಯುತ್ತಮ ಹಿನ್ನೆಲೆ ಗಾಯಕ: ಟಿಪ್ಪು (ರಾಜ್)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಲಕ್ಷ್ಮಿ ನಟರಾಜ್ (ಆಪ್ತರಕ್ಷಕ)

ವಿಶೇಷ ಪ್ರಶಸ್ತಿ: ಪ್ರೇಮ್ (ರಾಜ್), ಸುಮನಾ ಕಿತ್ತೂರು (ಕಳ್ಳರ ಸಂತೆ)

ಅತ್ಯುತ್ತಮ ಪ್ರಾದೇಶಿಕ ಚಿತ್ರ: ಕಾಜರ್ (ಕೊಂಕಣಿ ಭಾಷೆ) ಈ ಎಲ್ಲ ಪ್ರಶಸ್ತಿಗಳು ತಲಾ ರು.20 ಸಾವಿರ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ಮತ್ತು ಫಲಕಗಳನ್ನು ಒಳಗೊಂಡಿದೆ. (ಒನ್‌ಇಂಡಿಯಾ ಕನ್ನಡ)

English summary
The 2009-10 Karnataka State Film Awards were announced in Bangalore. Karnataka Chief Minister Sadananda Gowda announced the awards at a press meet in Vidhanasoudha on Wednesday. Rasarishi Kuvempu is selected for best film, Yograj Bhat directed Manasare is the second best film and late Dr.Vishnuvardhan was best actor and Anu Prabhakar was best actress.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more