»   »  ರಾಜ್ಯ ಚಲನ ಚಿತ್ರ ಪ್ರಶಸ್ತಿಗಾಗಿ 74 ಚಿತ್ರಗಳ ಸ್ಪರ್ಧೆ

ರಾಜ್ಯ ಚಲನ ಚಿತ್ರ ಪ್ರಶಸ್ತಿಗಾಗಿ 74 ಚಿತ್ರಗಳ ಸ್ಪರ್ಧೆ

Posted By:
Subscribe to Filmibeat Kannada

2008-09ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಗೆ ಸ್ಪರ್ಧೆ ಆರಂಭವಾಗಿದೆ. ಈ ಬಾರಿಯ ಪ್ರಶಸ್ತಿಗೆ 20ಕ್ಕೂ ಹೆಚ್ಚು ವಿಭಾಗಗಳಲ್ಲಿ 74 ಚಿತ್ರಗಳು ಸ್ಪರ್ಧೆ ನಡೆಸಿವೆ. ಕಳೆದ ವರ್ಷ ಆಯ್ಕೆ ಸಮಿತಿ ಗರಿಷ್ಠ 48 ಚಿತ್ರಗಳನ್ನು ವೀಕ್ಷಿಸಿತ್ತು. ಆದರೆ ಈ ಬಾರಿ ದಾಖಲೆ ಸಂಖ್ಯೆಯ ಚಿತ್ರಗಳು ಆಯ್ಕೆ ಸಮಿತಿ ಮುಂದಿವೆ.

ಕಳೆದ ವರ್ಷ ಅತಿಹೆಚ್ಚು 118 ಚಿತ್ರಗಳು ತೆರೆಕಂಡಿವೆ. ಹಾಗಾಗಿಯೇ ಈ ಬಾರಿ ಪ್ರಶಸ್ತಿಗಾಗಿ 74 ಚಿತ್ರಗಳು ಸ್ಪರ್ಧಿಸಿವೆ ಎನ್ನುತ್ತದೆ ಮೂಲಗಳು. ಪ್ರಶಸ್ತಿಗಾಗಿ ಬಂದಿರುವ ಚಿತ್ರಗಳಲ್ಲಿ ಶೇ.50ರಷ್ಟು ಹೊಸಬರ ಚಿತ್ರಗಳು. ಈ ಬಾರಿಯ ಪ್ರಶಸ್ತಿಗಾಗಿ ಹೊಸ ಆಯ್ಕೆ ಸಮಿತಿಯನ್ನು ಸರಕಾರ ಸ್ಥಾಪಿಸುತ್ತದೋ ಅಥವಾ ಚಲನಚಿತ್ರ ಅಕಾಡೆಮಿಗೆ ಈ ಜಬಾಬ್ದಾರಿಯನ್ನು ವಹಿಸುತ್ತದೋ ಇನ್ನೂ ತೀರ್ಮಾನವಾಗಿಲ್ಲ.

ಪ್ರಶಸ್ತಿಗಾಗಿ ಚಲನಚಿತ್ರಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಚಲನಚಿತ್ರ ಅಕಾಡೆಮಿಗೆ ಸೇರಿದ್ದು ಎನ್ನುತ್ತವೆ ಮೂಲಗಳು.ಏತನ್ಮಧ್ಯೆ ನಟ, ನಿರ್ದೇಶಕ ಮತ್ತು ನಿರ್ಮಾಪಕ ದ್ವಾರಕೀಶ್ ನೇತೃತ್ವದ ಸಬ್ಸಿಡಿ ಸಮಿತಿ 30 ಚಿತ್ರಗಳ ಪಟ್ಟಿಯನ್ನು ಪ್ರಕಟಿಸುವ ಸಿದ್ಧತೆಯಲ್ಲಿದೆ. ಮುಂದಿನ ವರ್ಷ ಸಬ್ಸಿಡಿ ಚಿತ್ರಗಳ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಈ ಬಾರಿಯ ಪ್ರಶಸ್ತಿಗೆ ಧಿಮಾಕು, ಕಬಡ್ಡಿ, ಮುಸ್ಸಂಜೆ ಮಾತು, ಹಾರು ಹಕ್ಕಿಯನೇರಿ, ಕಲಾಕಾರ್, ಅಂಬಾರಿ, ಶಂಕರ ಪುಣ್ಯಕೋಟಿ, ವಂಶಿ, ಕನ್ನಡದ ಕಿರಣ್ ಬೇಡಿ, ಕಾರಂತಜ್ಜನಿಗೊಂದು ಪತ್ರ, ಕೆಸರಿನ ಕಮಲ, ವೆಂಕಟ ಇನ್ ಸಂಕಟ, ಸೈಕೊ, ಬಿರುಗಾಳಿ, ನವಗ್ರಹ, ಬೆಟ್ಟದಪುರದ ದಿಟ್ಟ ಮಕ್ಕಳು, ಇಜ್ಜೋಡು, ಜಂಗ್ಲಿ, ಸ್ಲಂ ಬಾಲ, ಜೋಶ್, ಸಂಗಮ, ಮುಖಪುಟ, ವಿಮುಕ್ತಿ, ಮೊಗ್ಗಿನ ಮನಸು, ನನ್ನುಸಿರೆ, ಸರ್ಕಸ್, ಈ ಸಂಭಾಷಣೆ ಚಿತ್ರಗಳು ಪ್ರಶಸ್ತಿಯ ಸ್ಪರ್ಧೆಯಲ್ಲಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada