»   » ರಾಧಿಕಾ ಮಗು ಹೆಸರು ಶಮಿಕಾ ಕುಮಾರ ಸ್ವಾಮಿ

ರಾಧಿಕಾ ಮಗು ಹೆಸರು ಶಮಿಕಾ ಕುಮಾರ ಸ್ವಾಮಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಒಂದು ಕಾಲದ ನಟಿ ರಾಧಿಕಾ ಕಡೆಗೂ ಮೌನ ಮುರಿದಿದ್ದಾರೆ. ಅವರು 'ಉದಯವಾಣಿ' ಪತ್ರಿಕೆ ಜೊತೆಗೆ ಮಾತನಾಡುತ್ತಾ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. ನನಗೆ ಮದುವೆಯಾಗಿರುವುದು ನಿಜ. ಮಗುವಾಗಿರುವುದು ನಿಜ. ಆದರೆ ನನಗೆ ಇರುವುದು ಎರಡಲ್ಲ ಒಂದೇ ಹೆಣ್ಣು ಮಗು ಎಂದು ಸ್ಪಷ್ಟಪಡಿಸಿದ್ದಾರೆ.

ಜನ ಆಡಿಕೊಳ್ಳುವಂತೆ ನನಗೆ ಇಬ್ಬರು ಮಕ್ಕಳಿಲ್ಲ. ಇರುವುದು ಒಂದೇ ಮಗು, ಅದಕ್ಕೀಗ ಒಂದು ವರ್ಷ ವಯಸ್ಸು. ಶಮಿತಾ ಕೆ ಸ್ವಾಮಿ ಎಂದು ಹೆಸರಿಟ್ಟಿದ್ದೇವೆ. ಸಕ್ರಿಯ ರಾಜಕಾರಣಿಯೊಬ್ಬರನ್ನು ನಾನು ಮದುವೆಯಾಗಿರುವುದು ನಿಜ. ಮಗುವನ್ನು ಲಂಡನ್ನಿನಲ್ಲಿ ಬಿಟ್ಟಿದ್ದೇವೆ ಎಂಬ ಮಾತಿದೆ. ಅದು ಸತ್ಯಕ್ಕೆ ದೂರವಾದ ಮಾತು.

ಯಾವ ತಾಯಿಯಾದರೂ ಹೀಗೆ ಮಾಡಲು ಸಾಧ್ಯವೆ? ಎಂದು ರಾಧಿಕಾ ಮರು ಪ್ರಶ್ನಿಸಿದ್ದಾರೆ. ಸದ್ಯಕ್ಕೆ ನಾನು ಬೆಂಗಳೂರಿನಲ್ಲಿಯೇ ಇದ್ದೇನೆ. ಆಗಾಗ ಮಂಗಳೂರಿನ ನನ್ನ ತೋಟಕ್ಕೆ ಹೋಗಿ ಬರುತ್ತಿರುತ್ತೇನೆ. ಅಲ್ಲಿ ಪೂಜೆ, ದೈವಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುತ್ತೇನೆ. ತಮ್ಮ ಪತಿಯ ಹೆಸರೇಳದೆ, ನನ್ನನ್ನು 'ಅವರು' ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಯಾವ ಪತ್ನಿ ತಾನೆ ಗಂಡನ ಹೆಸರೇಳಲು ಇಚ್ಛಿಸುತ್ತಾಳೆ ನೀವೇ ಹೇಳಿ?!

ಸದ್ಯಕ್ಕೆ ತೆಲುಗು ಚಿತ್ರವೊಂದರಲ್ಲಿ ಅಭಿನಯಿಸುತ್ತಿರುವ ರಾಧಿಕಾ ಅವರನ್ನು ಕಂಡ ಅಭಿಮಾನಿಗಳು ಮತ್ತೆ ಬೆಳ್ಳಿಪರದೆಗೆ ಬರುವಂತೆ ಒತ್ತಾಯಿಸಿದರಂತೆ. ಅವರ ಅಭಿಮಾನ, ಪ್ರೀತಿಗೆ ರಾಧಿಕಾ ಮಂಜಿನಂತೆ ಕರಗಿಹೋಗಿದ್ದಾರೆ. ಮತ್ತೆ ನಟಿಸುವ ಆಸೆ ಆಗಿದೆ. ಒಟ್ಟಿನಲ್ಲಿ ಪ್ರೇಕ್ಷಕರು ನನ್ನನ್ನು ಇನ್ನೂ ಮರೆತಿಲ್ಲವಲ್ಲ. ಅವರ ಅಭಿಮಾನ ದೊಡ್ಡದು. ಅವರಿಗೆ ನಾನು ಸದಾ ಚಿರಋಣಿ ಎಂದಿದ್ದಾರೆ.

ಸ್ವಂತ ಬ್ಯಾನರ್ ಚಿತ್ರವೊಂದನ್ನು ನಾನು ಕೈಗೆತ್ತಿಕೊಳ್ಳುತ್ತಿದ್ದೇನೆ. ಗ್ಲಾಮರ್ ಪಾತ್ರದಲ್ಲಿ ಕಾಣಿಸಲಿದ್ದೇನೆ. ಎಕ್ಸ್‌ಪೋಸ್ ಇರುವುದಿಲ್ಲ. ಎಕ್ಸ್ ಪೋಸ್ ಮಾಡುವ ವಯಸ್ಸು ನನ್ನದಲ್ಲ. ಆದರೆ ಗ್ಲಾಮರ್ ಮಾತ್ರ ಇರುತ್ತೆ. ಪ್ರೇಕ್ಷಕರಿಗೆ ಇಷ್ಟವಾಗುವ ಪಾತ್ರಗಳಲ್ಲಿ ಅಭಿನಯಿಸುತ್ತೇನೆ ಎಂದು ರಾಧಿಕಾ ಮೌನ ಮುರಿದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada