For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ತಾರೆ ಶೋಭನಾ

  By Rajendra
  |

  ಭರತನಾಟ್ಯ ಕಲಾವಿದೆ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನಿಮಾ ತಾರೆ ಶೋಭನಾ ಅವರಿಗೆ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸುವ ಭರ್ಜರಿ ಆಫರ್ ಸಿಕ್ಕಿದೆ. ಎಂಭತ್ತು ಹಾಗೂ ತೊಂಬತ್ತರ ದಶಕದಲ್ಲಿ ಶೋಭನಾ ಜನಪ್ರಿಯತೆಯ ತುತ್ತತುದಿಯಲ್ಲಿದ್ದರು.

  ಈಗ ರಜನಿ ಅಭಿನಯಿಸಲಿರುವ 'ಕೋಚಡಯಾನ್' ಚಿತ್ರದಲ್ಲಿ ಶೋಭನಾ ಪ್ರಮುಖ ಪಾತ್ರ ಪೋಷಿಸಲಿದ್ದಾರೆ. ಮಣಿರತ್ನಂ ನಿರ್ದೇಶನದ ಥಾಲಪಟ್ಟಿ (1991) ಚಿತ್ರದಲ್ಲಿ ಇವರಿಬ್ಬರು ಪ್ರೇಮಿಗಳಾಗಿ ಅಭಿನಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಬಾರಿ ಯಾವ ರೀತಿಯ ಪಾತ್ರ ಪೋಷಿಸಲಿದ್ದಾರೆ ಎಂಬುದು ಕಾದುನೋಡಬೇಕು.

  ರಜನಿಕಾಂತ್ ಅನಾರೋಗ್ಯಕ್ಕೆ ತುತ್ತಾಗಿ ಚೇತರಿಸಿಕೊಂಡ ಮೇಲೆ ಬಣ್ಣ ಹಚ್ಚುತ್ತಿರುವ ಮೊದಲ ಚಿತ್ರ ಇದಾಗಿದೆ. 'ಕೋಚಡಯಾನ್' ಚಿತ್ರಕ್ಕೆ ರಜನಿ ಪುತ್ರಿ ಸೌಂದರ್ಯ ಆಕ್ಷನ್ ಕಟ್ ಹೇಳುತ್ತಿದಾರೆ. ಕೆಎಸ್ ರವಿಕುಮಾರ್ ಅವರ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಚಿತ್ರಕ್ಕಿದ್ದು ಎ ಆರ್ ರೆಹಮಾನ್ ಸಂಗೀತದಲ್ಲಿ ಚಿತ್ರ ಮೂಡಿಬರಲಿದೆ. (ಏಜೆನ್ಸೀಸ್)

  English summary
  National Award winning actress and Bharatanatyam dancer Shobana is touted to play an important role in the Rajinikanth starrer Kochadaiyaan. Interestingly, the actress played Rajini’s love-interest in Mani Ratnam directed Thalapathy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X