»   » ಜೋಗಯ್ಯನ ಜೋಳಿಗೆಗೆ ನಟಿ ಅಮೀಷಾ ಪಟೇಲ್

ಜೋಗಯ್ಯನ ಜೋಳಿಗೆಗೆ ನಟಿ ಅಮೀಷಾ ಪಟೇಲ್

Posted By:
Subscribe to Filmibeat Kannada

ಕನ್ನಡ ಬೆಳ್ಳಿಪರದೆಗೆ ಮತ್ತೊಬ್ಬ ಚೆಲುವೆಯ ಆಗಮನವಾಗಲಿದೆ. 'ಕಹೋನಾ ಪ್ಯಾರ್ ಹೈ' ಚಿತ್ರದ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದ ಅಮೀಷಾ ಪಟೇಶ್ ಕನ್ನಡಕ್ಕೆ ಬರಲಿದ್ದಾರೆ ಎಂಬುದು ಗಾಂಧಿನಗರದ ಪಡಸಾಲೆಗಳಲ್ಲಿ ಗಮ್ಮತ್ತಾಗಿ ಸುದ್ದಿ ಮಾಡಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ನೂರನೇ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿರುವ 'ಜೋಗಯ್ಯ'ನಿಗೆ ಅಮೀಷಾ ಜೊತೆಯಾಗಲಿದ್ದಾರೆ.

ಚಿತ್ರರಂಗದ ಮೂಲಗಳ ಪ್ರಕಾರ, 'ಜೋಗಯ್ಯ' ಚಿತ್ರದ ನಾಯಕಿಗಾಗಿ ಮುಂಬೈನಲ್ಲಿ ತೀವ್ರ ಹುಡುಕಾಟ ನಡೆದಿದೆ. ಪ್ರಿಯಾಂಕಾ ಚೋಪ್ರಾ, ಕಂಗನಾ ರನೌತ್ ಮೊದಲಾದ ನಟಿಯ ರನ್ನು ಸಂಪರ್ಕಿಸಲಾಗಿದೆ. ಆದರೆ ಅವರಿಬ್ಬರೂ ಬ್ಯುಸಿಯಾಗಿರುವ ಕಾರಣ 'ಜೋಗಯ್ಯ'ನನ್ನು ಒಲ್ಲೆ ಎಂದಿದ್ದಾರೆ. ಆದರೆ ಛಲ ಬಿಡದ ತ್ರಿವಿಕ್ರಮನಂತೆ ಪ್ರೇಮ್ ಹುಡುಕಾಟ ಮುಂದುವರಿದಿದೆ.

ಒಟ್ಟಿನಲ್ಲಿ ಬಾಲಿವುಡ್ ನಟಿಯರನ್ನು ಕನ್ನಡಕ್ಕೆ ಕರುತರುವುದರಲ್ಲಿ ನಿರ್ದೇಶಕ ಪ್ರೇಮ್ ಮೊದಲಿಗರು. ಈ ಹಿಂದೆ ಅವರು ಜೆನ್ನಿಫರ್ ಕೊತ್ವಾಲ್(ಜೋಗಿ), ನಿಶಾ ಕೊಠಾರಿ(ರಾಜ್ ದಿ ಶೋ ಮ್ಯಾನ್), ಮಲ್ಲಿಕಾ ಶೆರಾವತ್ (ಪ್ರೀತಿ ಏಕೆ ಭೂಮಿ ಮೇಲಿದೆ)ಯನ್ನು ಕರೆತಂದಿದ್ದರು. ಆದರೆ ಈ ಬಾರಿ ಅವರ ಕಣ್ಣು ಅಮೀಷಾ ಪಟೇಲ್ ಮೇಲೆ ಬಿದ್ದಿದೆ. ಜೋಗಯ್ಯನಿಗೆ ಅಮೀಷಾರನ್ನು ಪ್ರೇಮ್ ಕರೆತಂದರೂ ಆಶ್ಚರ್ಯ ಪಡಬೇಕಾಗಿಲ್ಲ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada