»   »  ಶಾಲಾ ಬಾಲಕಿ ಅಮೂಲ್ಯ ಈಗ ಕಾಲೇಜು ಹುಡುಗಿ

ಶಾಲಾ ಬಾಲಕಿ ಅಮೂಲ್ಯ ಈಗ ಕಾಲೇಜು ಹುಡುಗಿ

Subscribe to Filmibeat Kannada
Amoolya to act in Ratnaja's film
ಎಸ್.ನಾರಾಯಣ್ ರ 'ಚೆಲುವಿನ ಚಿತ್ತಾರ'ದಲ್ಲಿ ನಟಿಸಿದ್ದ್ದ ಶಾಲಾ ಬಾಲಕಿ ಅಮೂಲ್ಯ ಇದೀಗ ಕಾಲೇಜು ಹುಡುಗಿ. ಶಾಲಾ ದಿನಗಳಿಗಿಂತಲೂ ಈಗ ನಟನೆಯಲ್ಲಿ ತೊಡಗಿಕೊಳ್ಳಲು ಹೆಚ್ಚು ಬಿಡುವು ಸಿಗುತ್ತಿದ್ದು ನಿರ್ದೇಶಕ ರತ್ನಜರ ಹೊಸ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಎಸ್.ನಾರಾಯಣ್ ರ ಎರಡು ಚಿತ್ರಗಳಲ್ಲಿ ನಟಿಸಿದ ಬಳಿಕ ಅಮೂಲ್ಯ ಬೇರೊಬ್ಬರ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು.

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಎರಡು ಹೊಸ ಮುಖಗಳನ್ನು ರತ್ನಜ ತೆರೆಗೆ ಪರಿಚಯಿಸಲಿದ್ದಾರೆ. ರತ್ನಜರ 'ನೆನಪಿರಲಿ' ಮತ್ತು 'ಹೊಂಗನಸು'ಚಿತ್ರಗಳಲ್ಲಿ ನಟಿಸಿದ ಪ್ರೇಮ್ ಕುಮಾರ್ ಹೆಸರಿಡದ ಚಿತ್ರದ ನಾಯಕ. ಈ ಹೊಸ ಚಿತ್ರ ಯಶಸ್ವಿಯಾಗುತ್ತದೆ ಎಂಬ ಭರವಸೆಯಲ್ಲಿ ನೆನಪಿರಲಿ ಪ್ರೇಮ್ ಮತ್ತು ರತ್ನಜ ಹೊಂಗನಸು ಕಾಣುತ್ತಿದ್ದಾರೆ.

ಅಮೂಲ್ಯ ನಟಿಸಿದ್ದ ಎರಡು ಚಿತ್ರಗಳಲ್ಲಿ ಒಂದು ಚಿತ್ರ ಮಾತ್ರ ಯಶಸ್ವಿಯಾಗಿತ್ತು. ಎಸ್.ನಾರಾಯಣ್ ರ ಮಗ ಪಂಕಜ್ ಜತೆ ನಟಿಸಿದ್ದ 'ಚೈತ್ರದ ಚಂದ್ರಮ' ಮಕಾಡೆ ಮಲಗಿತ್ತು. ಶಾಲಾ ರಜಾ ದಿನಗಳಲ್ಲಿ ಅಮೂಲ್ಯ ಈ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಈಗ ನಟನೆಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವ ಕಾಲ ಕೂಡಿ ಬಂದಿರುವ ಕಾರಣ ತಮ್ಮ ಪಾತ್ರದ ಕಡೆಗೆ ಹೆಚ್ಚು ಗಮನ ಕೊಡಬಹುದು.

(ದಟ್ಸ್ ಕನ್ನಡ ಚಿತ್ರವಾರ್ತೆ)

ರಂಗು, ರಂಗಿನ ಚೆಲುವಿನ ಚಿತ್ತಾರ...
ದುನಿಯಾ ವಿಜಯ್ ಮೇಲೆ ಎಸ್.ನಾರಾಯಣ್ ಕಿಡಿ!
ಎಸ್.ನಾರಾಯಣ್ ಮನೆಗೆ ವಿಜಯ್ ಅಭಿಮಾನಿಗಳ ಕಲ್ಲು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada