»   »  ಶಿವಕಾಶಿಯಲ್ಲಿ ಒಂದಾದ ಅನಂತ್ ನಾಗ್ ,ಲಕ್ಷ್ಮಿ

ಶಿವಕಾಶಿಯಲ್ಲಿ ಒಂದಾದ ಅನಂತ್ ನಾಗ್ ,ಲಕ್ಷ್ಮಿ

Subscribe to Filmibeat Kannada
ಬೆಂಕಿಯ ಬಲೆ, ಚಂದನದ ಗೊಂಬೆ, ನಾ ನಿನ್ನ ಬಿಡಲಾರೆ, ಇಬ್ಬನಿ ಕರಗಿತು, ಮುದುಡಿದ ತಾವರೆ ಅರಳಿತು, ನೋಡಿ ಸ್ವಾಮಿ ನಾವಿರೋದೆ ಹೀಗೆ, ಮಕ್ಕಳಿರಲವ್ವ ಮನೆ ತುಂಬ, ಬಿಡುಗಡೆಯ ಬೇಡಿ ಚಿತ್ರಗಳ ಜನಪ್ರಿಯ ಜೋಡಿ ಮತ್ತೆ ಒಂದಾಗುತ್ತಿದೆ! ಹೌದು 'ಶಿವಕಾಶಿ' ಚಿತ್ರದಲ್ಲಿ ಕನ್ನಡ ಬೆಳ್ಳೆತೆರೆಯ ಒಂದು ಕಾಲದ ಜನಪ್ರಿಯ ಜೋಡಿ ಅನಂತನಾಗ್ ಮತ್ತು ಲಕ್ಷ್ಮಿ ನಟಿಸಲಿದ್ದಾರೆ.

ನಿರ್ದೇಶಕ ರಾಮಪ್ರಕಾಶ್ ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ 'ಶಿವಕಾಶಿ' ಎಂಬ ಕನ್ನಡ ಚಿತ್ರದ ಚಿತ್ರೀಕರಣ ಸೋಮವಾರದಿಂದಆರಂಭಗೊಂಡಿದೆ. ಅನಂತ್ ಮತ್ತು ಲಕ್ಷ್ಮಿ ಸುದೀರ್ಘ ವಿರಾಮದ ನಂತರ ಮತ್ತೆ ಕಣ್ಣ್ಣಲ್ಲಿ ಕಣ್ಣಿಟ್ಟು ನೋಡುವಂತಾಗಿದೆ. ಹಲವಾರು ಸಂದರ್ಭಗಳಲ್ಲಿ ಇವರಿಬ್ಬರೂ ಒರಟೊರಟಾಗಿ ಒಬ್ಬರನೊಬ್ಬರು ನಿಂದಿಸಿಕೊಂಡು ದೂರಾಗಿದ್ದರು. ಇವರಿಬ್ಬರೂ ಜೊತೆಯಾಗಿ ನಟಿಸಿ ಸರಿ ಸುಮಾರು ಹತ್ತು ವರ್ಷಗಳೇ ಕಳೆದು ಹೋಗಿವೆ. ಡಿ.ರಾಜೇಂದ್ರ ಬಾಬು ಅವರ 'ಅಮ್ಮ' ಚಿತ್ರವೇ ಅವರಿಬ್ಬರೂ ನಟಿಸಿದ ಕೊನೆಯ ಚಿತ್ರ.

Lakshmi
ಶಿವಕಾಶಿ ಚಿತ್ರದ ನಾಯಕನಾಗಿ 'ಪಟ್ರೆ ಲವ್ಸ್ ಪದ್ಮ' ಖ್ಯಾತಿಯ ಅಜಿತ್ ನಟಿಸಲಿದ್ದಾರೆ. ಮೊಗ್ಗಿನ ಮನಸು ಚಿತ್ರದಲ್ಲಿ ನಟಿಸಿದ್ದ ಮಾನಸಿ ಹಾಗೂ ಯೋಗೇಶ್ ವೀರ್ ಚಿತ್ರದ ಇತರೆ ತಾರೆಗಳು. ಶಿವಕಾಶಿಯಲ್ಲಿ ಅನಂತನಾಗ್ ಅವರದ್ದು ಹಳ್ಳಿ ನಾಯಕನ ಪಾತ್ರ. ಗ್ರಾಮೀಣ ಮಹಿಳೆಯಾಗಿ ಅನ್ನಪೂರ್ಣೇಶ್ವರಿ ಪಾತ್ರದಲ್ಲಿ ಲಕ್ಷ್ಮಿ ಕಾಣಿಸಿಕೊಳ್ಳಲಿದ್ದಾರೆ. ಇಡೀ ನನ್ನ ವೃತ್ತಿ ಜೀವನದಲ್ಲೇ ಈ ರೀತಿಯ ಪಾತ್ರವನ್ನು ನಾನು ಮಾಡಿರಲಿಲ್ಲ ಎಂದು ಲಕ್ಷ್ಮಿ ತಮ್ಮ ಪಾತ್ರದ ಬಗ್ಗೆ ಲಕ್ಷ್ಮಿ ಹೇಳಿದ್ದಿಷ್ಟು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada