»   »  ನನ್ನೆದೆಯ ಹಾಡಿಗೆ ಸೆನ್ಸಾರ್ ನಿಂದ ಮೆಚ್ಚುಗೆ

ನನ್ನೆದೆಯ ಹಾಡಿಗೆ ಸೆನ್ಸಾರ್ ನಿಂದ ಮೆಚ್ಚುಗೆ

Posted By:
Subscribe to Filmibeat Kannada
'ಹಾಡು ಹಳೆಯದಾದರೇನು ಭಾವ ನವನವೀನ' ಎಂಬ ಸಾಲಿನಂತೆ ಉತ್ಸಾಹಿಗಳ ನೇತೃತ್ವದಲ್ಲಿ ನಿರ್ಮಾಣವಾಗಿರುವ 'ನನ್ನೆದೆಯ ಹಾಡು' ಚಿತ್ರವನ್ನು ವಿಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ 'ಯು' ಅರ್ಹತಾಪತ್ರವನ್ನು ನೀಡಿದೆ.

ಚಿತ್ರದ ಹಲವು ಭಾಗಗಳಿಗೆ ಮಂಡಲಿಯಿಂದ ಪ್ರಶಂಸೆಯ ಮಾತುಗಳು ಕೇಳಿ ಬಂದಿದೆ. ತಾಯಿ ಪ್ರಸವವೇದನೆಯಿಂದ ಹೊರಬಂದು ಮಗುವಿನ ಮುಖ ಕಂಡಮೇಲೆ ತನ್ನ ನೋವನ್ನು ಮರೆಯುವ ಹಾಗೆ ನಿರ್ಮಾಪಕರು ಸೆನ್ಸಾರ್ ಮಂಡಲಿಯಿಂದ ಚಿತ್ರಕ್ಕೆ ಉತ್ತಮ ಪ್ರಶಂಸೆ ಸಿಕ್ಕ ನಂತರ ಅತೀವ ಆನಂದ ಅನುಭವಿಸುತ್ತಾರೆ. 'ನನ್ನೆದೆಯ ಹಾಡು' ಚಿತ್ರದ ನಿರ್ಮಾಪಕರಾದ ಸತೀಶ್‌ರಾವ್, ಸದಾನಂದರಾವ್ ಹಾಗೂ ಸದಾಶಿವರಾವ್ ಸೆನ್ಸಾರ್ ತೀರ್ಪಿನಿಂದ ಸಂತೋಷಬರಿತರಾಗಿದ್ದು ಚಿತ್ರವನ್ನು ಸದ್ಯದಲ್ಲೇ ಕರ್ನಾಟಕದಾದ್ಯಂತ ಬಿಡುಗಡೆ ಮಾಡಲಿದ್ದಾರೆ.

ಸನತ್‌ಪ್ರೇಕ್ಷಿತ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಗುರುವೇಂದ್ರ ನಿರ್ದೇಶಿಸಿದ್ದಾರೆ. ಎ.ಟಿ.ರವೀಶ್ ಸಂಗೀತ, ಬಿ.ಆರ್.ವೆಂಕಟೇಶ್ ಚಿತ್ರಕತೆ ಹಾಗೂ ಸಂಭಾಷಣೆ, ಮಲ್ಲಿಕಾರ್ಜುನ್ ಛಾಯಾಗ್ರಹಣ, ಶಿವರಾಜಮೇಹು ಸಂಕಲನ, ಇಸ್ಮಾಯಿಲ್ ಕಲೆ, ವಿಶ್ವಕುಮಾರ್ ನಿರ್ಮಾಣನಿರ್ವಹಣೆ, ಮೋಹನ್‌ಮಂಡ್ಯ ನಿರ್ಮಾಣಮೇಲ್ವಿಚಾರಣೆಯಿರುವ ಚಿತ್ರದ ತಾರಾಬಳಗದಲ್ಲಿ ಆನಂದ್, ರಮ್ಯಾ ಬಾರ್ನಾ, ಸಹನ, ರಮೇಶ್‌ಭಟ್, ಕರಿಬಸವಯ್ಯ, ಸುರೇಶ್, ಅರುಣ್‌ಕುಮಾರ್ ಮುಂತಾದವರಿದ್ದಾರೆ. ಅಂದಹಾಗೆ 'ನನ್ನೆದೆಯ ಹಾಡು' ಹಾಡುಹಕ್ಕಿಯ ಮೌನರಾಗ ಕೂಡ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada