»   » ನೆಚ್ಚಿನ ಚಿತ್ರಮಂದಿರಗಳಲ್ಲಿ ಈ ವಾರ ದರ್ಶನ್ ಶೌರ್ಯ

ನೆಚ್ಚಿನ ಚಿತ್ರಮಂದಿರಗಳಲ್ಲಿ ಈ ವಾರ ದರ್ಶನ್ ಶೌರ್ಯ

Posted By:
Subscribe to Filmibeat Kannada

"ಒಳ್ಳೆಯವರಿಗೆ ಕೊಡುವನು ವರ, ಕೆಟ್ಟವರಿಗೆ ಬಿಡಿಸುವನು ಜ್ವರ...... ಇದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟೈಲ್..ರಾಜ ಆಗೋ ಆಸೆ ಇದ್ರೆ ರಾಜ್ಯ ಗೆಲ್ಲೋ ತಾಕತ್ ಇರಬೇಕು.... ಯುದ್ದಕ್ಕೆ ಅಂತ ನಿಂತಮೇಲೆ ಸೈನಿಕ್ರನ್ನ ಲೆಕ್ಕ ಹಾಕಬಾರದು..." ಹೀಗೆ ದರ್ಶನ ಡೈಲಾಗ್ ಹೊಡೀತಿದ್ರೆ ಪ್ರೇಕ್ಷಕರ ಶಿಳ್ಳೆ ಯ ಝೇಂಕಾರ ಮೊಳಗುತ್ತದೆ.

ಈ ಬಾರಿ ಇದೇ ರೀತಿ ಶಿಳ್ಳೆಗಳನ್ನು ಗಿಟ್ಟಿಸಿಕೊಳ್ಳಲು ದರ್ಶನ್ ಬರುತ್ತಿದ್ದಾರೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಿಗೆ. 'ಶೌರ್ಯ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶ್ರೀಚಾಮುಂಡೇಶ್ವರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಕೆ.ಗಂಗಾಧರ್ ಅರ್ಪಿಸಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ ಬಿ.ಬಸವರಾಜು ಹಾಗೂ ಎ.ವೆಂಕಟೇಶ್.

ಕರ್ನಾಟಕದ ಸುಂದರ ಸ್ಥಳಗಳು, ಭಾರತದ ಪ್ರಸಿದ್ಧ ಪ್ರವಾಸಿ ತಾಣವಾದ ಕುಲುಮನಾಲಿ ಹಾಗೂ ವಿದೇಶದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಸಾಧುಕೋಕಿಲಾ ಸಂಗೀತ ನೀಡಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ದರ್ಶನ್ ನಾಯಕನಾಗಿ ನಟಿಸಿದ್ದಾರೆ. ರಮೇಶ್‌ಬಾಬು ಛಾಯಾಗ್ರಹಣ, ಜೋನಿಹರ್ಷ ಸಂಕಲನ, ಕೆ.ವಿ.ರಾಜು ಸಂಭಾಷಣೆ, ಪಳನಿರಾಜ್, ರವಿವರ್ಮ ಸಾಹಸ, ಪ್ರದೀಪ್ ಅಂತೋಣಿ ನೃತ್ಯ, ಇಸ್ಮಾಯಿಲ್ ಕಲಾ ನಿರ್ದೇಶನ, ಸುನೀಲ್ ಪಾಳ್ಯ ಸಹ ನಿರ್ದೇಶನವಿದೆ.

ಅನಿಲ್‌ಕುಮಾರ್ ನಿರ್ಮಾಣ ನಿರ್ವಹಣೆಯಿರುವ 'ಶೌರ್ಯ' ಚಿತ್ರಕ್ಕೆ ಮದಲಸಾ, ರೀಮಾ ವರ್ಮ, ಮುಮೈತ್ ಖಾನ್, ಓಂಪ್ರಕಾಶ್, ಬುಲೆಟ್ ಪ್ರಕಾಶ್, ಸಂಪತ್‌ಕುಮಾರ್, ಜಾನ್‌ಕೋಕಿನ್, ಅವಿನಾಶ್, ರಮೇಶ್‌ಭಟ್, ಚಿತ್ರಾಶೆಣೈ ತಾರಾಬಳಗವಿದೆ. ಪಡ್ಡೆಗಳಿಗೆ ಮುಮೈತ್ ಖಾನ್, ಹಾಸ್ಯಪ್ರಿಯರಿಗೆ ಬುಲೆಟ್ ಪ್ರಕಾಶ್, ಸಾಹಸಕ್ಕೆ ದರ್ಶನ್ ಇನ್ನೇನು ಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada