»   » ನಿರ್ದೇಶಕನಿಗೆ ಕೊಬ್ಬು ಇರಲೇಬೇಕು: ಓಂ ಪ್ರಕಾಶ್ ರಾವ್

ನಿರ್ದೇಶಕನಿಗೆ ಕೊಬ್ಬು ಇರಲೇಬೇಕು: ಓಂ ಪ್ರಕಾಶ್ ರಾವ್

Posted By:
Subscribe to Filmibeat Kannada
Om Prakash Rao
"ನಿರ್ದೇಶಕನಾದವನಿಗೆ ಕೊಬ್ಬಿರಬೇಕು. ಅದಿಲ್ಲವಾದ್ರೆ ಆತ ನಿರ್ದೇಶಕನಾಗಲು ಅನರ್ಹ. ನಾನು ಕೊಬ್ಬಿನ ಮನುಷ್ಯ. ಹಾಗಾಗಿಯೇ ನಿರ್ದೇಶಕನಾಗಿದ್ದೇನೆ." ಇದು ಕನ್ನಡದಲ್ಲಿ 'ನಿರ್ದೇಶಕ' ಎನಿಸಿಕೊಂಡಿರುವ 'ಓಂ ಪ್ರಕಾಶ್ ರಾವ್ ಮಾತು. ನಿಜವಾಗಿಯೂ ಯೋಚನೆಗೆ ಹಚ್ಚುವ ಮಾತಿದು. ಕೊಬ್ಬಿರುವವರು ನಿರ್ದೇಶಕರಂತೆ ವರ್ತಿಸುವುದಂತೂ ಹೌದು.

ಅಲ್ಲ, ನಿರ್ದೇಶಕನಾಗಲು ನಿರ್ದೇಶನ ತಿಳಿದಿರಬೇಕು. ಜೊತೆಗೆ ಇಡೀ ಟೀಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿನಿಮಾ ಚೆನ್ನಾಗಿ ಬರುವಂತೆ ಕೆಲಸ ತೆಗೆದುಕೊಳ್ಳುವದು ಗೊತ್ತಿರಬೇಕು. ಜೊತೆಗೆ ಸಾಮಾಜಿಕ ಜವಾಬ್ದಾರಿಯೂ ಇರಬೇಕು. ಇದು ಯಶಸ್ವೀ ನಿರ್ದೇಶಕರಿಗೆ ಇರಬೇಕಾದ ಅರ್ಹತೆ ಎಂಬುದು ಬುದ್ಧಿವಂತರಿಗೆ ಗೊತ್ತು.

ಓಂ ಪ್ರಕಾರ, ನಿರ್ದೇಶಕನಿಗೆ ಕೊಬ್ಬಿರಬೇಕು. ಆದರೆ ಎಷ್ಟು ಎಂಬುದನ್ನು ಅವರು ಹೇಳಿಲ್ಲ. ಸದ್ಯ, ಕೊಬ್ಬಿರುವವರೆಲ್ಲಾ ನಿರ್ದೇಶಕರು ಅಂತ ಹೇಳದಿರುವುದೇ ಪುಣ್ಯ. ಅವರನ್ನು ನೋಡಿದವರಿಗೆ, ನೋಡದೇ ಮಾತು ಕೇಳಿದವರಿಗೆ, ಎಲ್ಲರಿಗೂ ಓಂ ಪ್ರಕಾಶ್ ಗೆ ಕೊಬ್ಬಿದೆ ಎಂಬುದು ಗೊತ್ತಿದೆ. ಈಗ ಪ್ರೇಕ್ಷಕರಿಗೂ ತಿಳಿದಂತಾಯ್ತು ಅಷ್ಟೇ.

ಆದರೆ ಕೊಬ್ಬೇ ನಿರ್ದೇಶಕನ ಅರ್ಹತೆ ಅಲ್ಲ, ಅದಕ್ಕೇ ನೀವು ಯಶಸ್ವೀ ನಿರ್ದೇಶಕ ಆಗಿಲ್ಲ ಅಂತ ಅವರ 'ಈ' ಮಾತನ್ನು ಕೇಳಿದ ಯಾರೋ ಹೇಳಲು ಹೋದರೆ, ಅಲ್ಲಿದ್ದ ನಟಿಗೆ ಅನಾವಶ್ಯಕ ಬೈಯುತ್ತಿದ್ದ ಓಂ ಪ್ರಕಾಶ್ ರನ್ನು ನೋಡಿ ವಾಪಸ್ಸಾಗಿದ್ದಾರೆಂಬುದು ಲೇಟೆಸ್ಟ್ ಸುದ್ದಿ. (ಒನ್ ಇಂಡಿಯಾ ಕನ್ನಡ)

English summary
Director Om Prakash Rao tells that director should have egoism. It is main quality of the director. Now he is directing movie Shiva. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada