»   » ಮಾಜಿ ಭುವನಸುಂದರಿ, ನಟಿ ಸುಶ್ಮಿತಾ ಸೇನ್ ಹುಟ್ಟುಹಬ್ಬ

ಮಾಜಿ ಭುವನಸುಂದರಿ, ನಟಿ ಸುಶ್ಮಿತಾ ಸೇನ್ ಹುಟ್ಟುಹಬ್ಬ

Posted By:
Subscribe to Filmibeat Kannada

ಮಾಜಿ ಭುವನ ಸುಂದರಿ, ನಟಿ, ರೂಪದರ್ಶಿ 'ಸುಶ್ಮಿತಾ ಸೇನ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೀಗ 35 ವರ್ಷ ತುಂಬಿ 36 ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಮಾಜಿ ಭುವನ ಸುಂದರಿ, ದಕ್ಷಿಣ ಭಾರತ, ಹೈದರಾಬಾದ್ ಚೆಲುವೆ. 1994 ರಲ್ಲಿ 'ಮಿಸ್ ಯುನಿವರ್ಸ್' ಕೀರೀಟ ಧರಸಿದ ಪ್ರಪ್ರಥಮ ಭಾರತೀಯ ಮಹಿಳೆ. ಅದೇ ವರ್ಷ ಐಶ್ವರ್ಯ ರೈ ವಿಶ್ವಸುಂದರಿ ಪಟ್ಟ ಪಡೆದದ್ದು.

ಈ ಸುಂದರಿಯ ಗ್ಲಾಮರ್ ಈಗಲೂ ಹಾಗೆಯೇ ಇದೆ. ಈಗಾಗಲೇ ಸಾಕಷ್ಟು ಸಾಮಾಜಿಕ ಕಳಕಳಿ ಮೆರೆದಿರುವ ಸುಶ್ಮಿತಾ, ಹೆಣ್ಣು ಭ್ರೂಣಹತ್ಯೆಯನ್ನು ಖಂಡಿಸಿ ಕೈಗೊಂಡ ಆಂದೋಲನ ಇದಕ್ಕೆ ಪಕ್ಕಾ ಸಾಕ್ಷಿ. ಜೊತೆಗೆ ರೀನೀ ಹಾಗೂ ಅಲಿಷಾ ಎಂಬಿಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ ಕೂಡ.

ಹೊಸ ಸುದ್ದಿಯೆಂದರೆ ಇದೀಗ ಆಕೆಗೆ ತಾಯಿಯಾಗಬೇಕು ಎನಿಸಿದೆಯಂತೆ. ಮದುವೆಯಾಗದೇ ತಾಯಿಯಾಗುವ ಅವಕಾಶ ಈಗ ಸಾಕಷ್ಟಿರುವುದರಿಂದ ಸುಶ್ಮಿತಾ ಆಸೆ ಈಡೇರಬಹುದು. ಈಗಿರುವ ದತ್ತುಮಕ್ಕಳೂ ಇರುತ್ತಾರಂತೆ ಹಾಗೂ ಸ್ವಂತ ಮಗುವೂ ಒಂದು ಬೇಕೆನಿಸಿದೆಯಂತೆ. ಬಹುಶಃ ಐಶ್ವರ್ಯ ರೈ ತಾಯಿಯಾದ ಮೇಲೆ ಹಾಗೆ ಅನಿಸಿರಬೇಕು. (ಒನ್ ಇಂಡಿಯಾ ಕನ್ನಡ)


English summary
Former Miss Universe, model cum actress Sushmita Sen wants her own child. Her birthday today. Sushmita Sen born 19 November 1975. She is an Indian actress who appears in mainly Bollywood films. A former model, Sen was crowned Miss Universe in 1994. She was the first Indian woman to win the contest.
 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada