»   » ಹೂ ನಿರ್ಮಾಪಕ ದಿನೇಶ್ ಗಾಂಧಿ ಸ್ಮೈಲ್ಸ್

ಹೂ ನಿರ್ಮಾಪಕ ದಿನೇಶ್ ಗಾಂಧಿ ಸ್ಮೈಲ್ಸ್

Posted By:
Subscribe to Filmibeat Kannada

ಸದ್ಯಕ್ಕೆ ಹೂ ಚಿತ್ರದ ನಿರ್ಮಾಪಕ ದಿನೇಶ್ ಗಾಂಧಿ ತಮ್ಮ ಎಲ್ಲಾ ಒತ್ತಡಗಳಿಂದ ಮುಕ್ತಮುಕ್ತರಾಗಿದ್ದಾರೆ. ಹೂ ಹಾಸಿಗೆಯಲ್ಲಿ ದಿನೇಶ್ ಗಾಂಧಿ ಖುಷಿಯಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸಿ ನಟಿಸಿದ್ದ 'ಹೂ' ಚಿತ್ರಕ್ಕೆ ಎಲ್ಲಡೆಯಿಂದಲೂ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಚಿತ್ರದ ಬಿಡುಗಡೆಯಾದ ಮೊದಲ ವಾರ ಎದೆ ಢವ ಢವ ಎನ್ನುತ್ತಿತ್ತು. ಈಗ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಹೃದಯ ಹೂವಿನಂತ ಹಗುರಾಗಿದೆ ಎಂಬ ಮಾತುಗಳನ್ನು ಹೇಳಿದ್ದಾರೆ. ಚಿತ್ರಕ್ಕೆ ಹಾಕಿದ ಆರು ಕೋಟಿ ಬಂಡವಾಳ ಹಂತಹಂತವಾಗಿ ಹಿಂತಿರುತ್ತಿದೆಯಂತೆ.

ರಾಜ್ಯದ 'ಹೂ' ಹಂಚಿಕೆದಾರರು ಕೂಡ ಖುಷಿಯಾಗಿದ್ದಾರೆ. ಯಾರಿಗೂ ನಷ್ಟವಾಗಿಲ್ಲ. ಒಂದು ವೇಳೆ ಚಿತ್ರ ಸೋತಿದ್ದರೆ ನಾನು ಮಾಧ್ಯಮಗಳ ಮುಂದೆ ಬರುತ್ತಿರಲಿಲ್ಲ. ಕೋಟಿ ನಷ್ಟವನ್ನು ಭರಿಸುವ ಶಕ್ತಿ ನನಗಿಲ್ಲ. ಸಿನಿಮಾ ಬಿಟ್ಟು ನನಗೇನು ಗೊತ್ತಿಲ್ಲ. ಇದೇ ನನ್ನ ಉಸಿರು ಎಂದು ದಿನೇಶ್ ಹೇಳಿದ್ದಾರೆ.

ಪ್ರೇಕ್ಷಕರು ಉತ್ತಮ ಚಿತ್ರಗಳನ್ನು ಪ್ರೋತ್ಸಾಹಿಸುತ್ತಾರೆ ಎಂಬುದಕ್ಕೆ 'ಹೂ' ಚಿತ್ರವೇ ಸಾಕ್ಷಿ. ಎರಡು ಮೂರು ವರ್ಷಗಳ ಬಳಿಕ ರವಿಚಂದ್ರನ್ ನಟಿಸಿದ ಚಿತ್ರವಿದು. ಹಾಗಾಗಿ ರವಿ ಅಭಿಮಾನಿಗಳು ಹೆಚ್ಚು ಖುಷಿಯಾಗಿದ್ದಾರೆ. ಹೂ ಚಿತ್ರದ ಕಡೆಗೆ ಹೆಚ್ಚಾಗಿ ಯುವ ಪ್ರೇಕ್ಷಕರು ಆಕರ್ಷಿತರಾಗುತ್ತಿದ್ದಾರೆ ಎಂದು ದಿನೇಶ್ ವಿವರ ನೀಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada