»   » ಜೆಸ್ಸಿಕಾ ಹಂತಕನಿಗೆ ಜೀವಾವಧಿ ಶಿಕ್ಷೆ ಕಾಯಂ

ಜೆಸ್ಸಿಕಾ ಹಂತಕನಿಗೆ ಜೀವಾವಧಿ ಶಿಕ್ಷೆ ಕಾಯಂ

Posted By:
Subscribe to Filmibeat Kannada
Jessica Lal's killer to stay in jail: SC‎
ಖ್ಯಾತ ರೂಪದರ್ಶಿ ಜೆಸ್ಸಿಕಾ ಲಾಲ್ ಹತ್ಯೆಯ ಪ್ರಮುಖ ಆರೋಪಿ ಮನುಶರ್ಮಾಗೆ ದೆಹಲಿ ಹೈಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. 1999ರ ಏ.29ರಂದು ಜೆಸ್ಸಿಕಾರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ 2006ರಲ್ಲಿ ದೆಹಲಿಯ ಸ್ಥಳೀಯ ನ್ಯಾಯಾಲಯ ಆರೋಪಿ ಮನುಶರ್ಮನನ್ನು ಆರೋಪದಿಂದ ಮುಕ್ತಗೊಳಿಸಿತ್ತು. ಈ ಆದೇಶದ ವಿರುದ್ಧ ಜೆಸ್ಸಿಕಾ ಕುಟುಂಬದವರು ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಜೆಸ್ಸಿಕಾ ಹತ್ಯೆಯಲ್ಲಿ ಮನುಶರ್ಮಾ ಭಾಗಿಯಾಗಿದ್ದಾನೆಂದು ಹೇಳಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ನ ವಿಭಾಗೀಯ ಪೀಠದ ಪಿ ಸದಾಶಿವಂ ಮತ್ತು ಸ್ವಾತಂತರ್ ಕುಮಾರ್ ಅವರು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದು ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಿದೆ.

ಹರಿಯಾಣ ಕಾಂಗ್ರೆಸ್ ಮುಖಂಡ ವಿನೋದ್ ಶರ್ಮಾ ಅವರ ಪುತ್ರ ಮನುಶರ್ಮ. 1999ರಲ್ಲಿ ದಕ್ಷಿಣ ರೆಸ್ಟೋರೆಂಟ್ ಒಂದರಲ್ಲಿ ಜೆಸ್ಸಿಕಾ ಲಾಲ್ ಕೊಲೆ ನಡೆದಿತ್ತು. ಮದ್ಯವನ್ನು ನೀಡಲು ನಿರಾಕರಿಸಿದ ಕಾರಣ ಮನುಶರ್ಮ ಆಕೆಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ ಆರೋಪಎದುರಿಸುತ್ತಿದ್ದ.

ಸುಪ್ರೀಂಕೋರ್ಟ್ ನ ತೀರ್ಪಿನ ಬಗ್ಗೆ ಜೆಸ್ಸಿಕಾ ಸಹೋದರಿ ಸಬ್ರಿನಾ ಲಾಲ್ ಸಂತಸ ವ್ಯಕ್ತಪಡಿಸಿದ್ದು, ಈ ಕೇಸಿಗೆ ಸಂಬಂಧಿಸಿದಂತೆ ಇದ್ದ ಕೊನೆಯ ಬಾಗಿಲನ್ನು ಮುಚ್ಚಲಾಗಿದೆ. ನನಗಂತೂ ತುಂಬ ಸಂತಸವಾಗುತ್ತಿದೆ ಎಂದಿದ್ದಾರೆ. ಸದ್ಯಕ್ಕೆ ದೆಹಲಿಯ ತಿಹಾರ್ ಜೈಲಿನಲ್ಲಿ ಶರ್ಮಾ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ದಾಖಲೆಗಳನ್ನು ನಾಶಪಡಿಸುವಲ್ಲಿ ಆರೋಪಿ ಮನುಶರ್ಮಾಗೆ ಸಹಾಯ ಮಾಡಿದ ಆರೋಪಎದುರಿಸುತ್ತಿದ್ದ ವಿಕಾಸ್ ಯಾದವ್ ಮತ್ತು ಅಮರಜಿತ್ ಸಿಂಗ್ ಗಿಲ್ ಅವರಿಗೆ ತಲಾ 4 ವರ್ಷಗಳ ಕಾರಾಗಾರ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ವಿಧಿಸಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada