»   » ಕನ್ನಡ ಚಿತ್ರಕ್ಕೆ ಇನ್ನೂ ಪಬ್ಲಿಸಿಟಿ ಬೇಕು ಸ್ವಾಮಿ...

ಕನ್ನಡ ಚಿತ್ರಕ್ಕೆ ಇನ್ನೂ ಪಬ್ಲಿಸಿಟಿ ಬೇಕು ಸ್ವಾಮಿ...

Posted By: * ಅಮರನಾಥ್ ಶಿವಶಂಕರ್, ಬೆಂಗಳೂರು
Subscribe to Filmibeat Kannada
Kannada Films lacks Publicity
ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತರಣೆ ಹೇಗೆ? ಪರಭಾಷೆ ನಟರ ವ್ಯಾಪಾರ ತಂತ್ರ ಹೇಗಿದೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ....

* ಕರ್ನಾಟಕಕ್ಕೆ, ಅದರಲ್ಲೂ ಬೆಂಗಳೂರಿಗೆ ಹಿಂದಿ ನಟರಾದ ಶಾರೂಖ್ ಖಾನ್, ಆಮಿರ್ ಖಾನ್ ಬಂದು ತಮ್ಮ ಚಿತ್ರದ ಪ್ರಚಾರ ಮಾಡುತ್ತಾರೆ.

ತೆಲುಗು ನಟರಾದ ಅಲ್ಲೂ ಅರ್ಜುನ್, ಎನ್.ಟಿ.ಆರ್, ಮಹೇಶ್ ಬಾಬು ಮುಂತಾದ ನಟರು ಬಂದು ತಮ್ಮ ಚಿತ್ರಗಳ ಪ್ರಚಾರ ಮಾಡುತ್ತಾರೆ. ತಮಿಳಿನ ರಜನಿಕಾಂತ್, ವಿಜಯ್, ಸೂರ್ಯ ಮುಂತಾದ ನಟರೂ ಬಂದು ತಮ್ಮ ಚಿತ್ರಗಳ ಪ್ರಚಾರವನ್ನು ಮಾಡುತ್ತಾರೆ. ಆದರೆ, ನಮ್ಮ ಮಹಾನ್ ನಟರು ಎಂದೂ ನೆರೆ ರಾಜ್ಯಗಳಿಗೂ ಕಾಲಿಡುವುದಿಲ್ಲ ಏಕೆ?

ಪರಭಾಷೆ ನಟ, ನಿರ್ಮಾಪಕರಿಗ ತಮ್ಮ ಪ್ರೈಮರಿ ಮಾರುಕಟ್ಟೆ ಬಿಟ್ಟು ಬೇರೆ ರಾಜ್ಯಗಳಲ್ಲಿಯೂ ಮಾರುಕಟ್ಟೆಯನ್ನು ವಿಸ್ತರಿಸುವ ಆಸಕ್ತಿ, ಮುಂದಾಲೋಚನೆ ಇದೆ.

ಹಾಗಾಗಿಯೇ ಇವತ್ತು ತಮಿಳು, ತೆಲುಗು, ಹಿಂದಿ ಚಿತ್ರರಂಗಗಳು ಕೆಲವು ವರದಿಗಳ ಪ್ರಕಾರ ವರ್ಶಕ್ಕೆ ಸುಮಾರು 600-800 ಕೋಟಿಯಷ್ಟು ಮಾರುಕಟ್ಟೆಯ ಹಿಡಿತ ಹೊಂದಿರಲು
ಸಾಧ್ಯವಾಗಿದೆ.

ಆದರೆ ಯಾವೊಬ್ಬ ಕನ್ನಡ ನಟನಾಗಲೀ, ನಿರ್ಮಾಪಕ ನಿರ್ದೇಶಕರಾಗಲೀ, ಲಕ್ಷಾಂತರ ಕನ್ನಡಿಗರು ವಾಸವಿರುವ ಚೆನೈ, ಹೈದ್ರಾಬಾದ್, ಮುಂಬಯಿ, ಕೊಯಮತ್ತೂರು, ಊಟಿ, ಸಿಂಗಪುರ, ಅಮೇರಿಕ, ಯೂರೋಪ್ ಮುಂತಾದೆಡೆ ಹೋಗಿ ತಮ್ಮ ಚಿತ್ರಗಳ ಬಗ್ಗೆ ಪ್ರಚಾರವನ್ನು ಅಲ್ಲಿರುವ ಕನ್ನಡಿಗರಿಗೆ ತಲುಪಿಸುವ ಪ್ರಯತ್ನವನ್ನು ಮಾಡಿದ ಹಾಗೆ ಕಾಣೆ.

ತಮ್ಮ ಚಿತ್ರದ ಬಗ್ಗೆ ಇವರಿಗೇ ನಂಬಿಕೆ ಇಲ್ಲವೋ ಅಥವಾ ಕರ್ನಾಟಕದ ಆಚೆಗೆ ಕನ್ನಡ ಚಿತ್ರಗಳ ಮಾರುಕಟ್ಟೆ ಬೆಳೆಸುವುದು ಬೇಡ ಅಂತ ಇವರ ಮನಸ್ಸಿನಲ್ಲಿ ಇದೆಯೋ ಗೊತಿಲ್ಲ.

* ಹೊರದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕನ್ನಡಿಗರು ವಾಸಿಸುತ್ತಿದ್ದು ಅಲ್ಲಿ ಕನ್ನಡ ಚಿತ್ರೋದ್ಯಮದ ಮಾರುಕಟ್ಟೆ ಬೆಳೆಸುವ ಕೆಲಸವಾಗಿಲ್ಲ. ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಗಲ್ಫ್ ಮುಂತಾದ ದೇಶಗಳಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಕನ್ನಡಿಗರು ವಾಸಿಸುತ್ತಿದ್ದಾರೆ.

ಅಲ್ಲಿನ ಕನ್ನಡ ಸಂಘಟನೆಗಳ ಜೊತೆಗೂಡಿ ಅಲ್ಲೆಲ್ಲ ಮಾರುಕಟ್ಟೆ ಕಟ್ಟುವ ಮತ್ತು ನಿರಂತರವಾಗಿ ಕನ್ನಡ ಚಿತ್ರಗಳ ಪ್ರದರ್ಶನ ಮಾಡುವ ಕೆಲಸ ನಡೆಯಬೇಕಿದೆ.

* ಕರ್ನಾಟಕದ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದರೂ ಅಲ್ಲಿ ಕನ್ನಡ ಚಿತ್ರಗಳ ಮಾರುಕಟ್ಟೆ ಇಲ್ಲ. ಆಯಾ ರಾಜ್ಯಗಳ ಚಿತ್ರೋದ್ಯಮದ ಜೊತೆ ಸೇರಿ ಅಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಅಣುವು ಮಾಡಿಕೊಡುವಂತೆ ಒಡಂಬಡಿಕೆ ಮಾಡಿಕೊಳ್ಳಬೇಕು.

* ಯಶಸ್ವಿಯಾಗಿ ಪ್ರದರ್ಶನ ಕಂಡ ಕನ್ನಡ ಚಿತ್ರಗಳ ಡಿವಿಡಿ/ವಿಸಿಡಿ/ಬ್ಲೂರೇ ಡಿಸ್ಕುಗಳು ಮಾರುಕಟ್ಟೆಯಲ್ಲಿ ಚಿತ್ರಮಂದಿರದಿಂದ ಆಚೆ ಬಂದ ಕೆಲವೇ ದಿನಗಳಲ್ಲಿ ಲಭ್ಯವಾದರೆ, ಅದಕ್ಕೆ ಸಹಜವಾಗಿ ಹೆಚ್ಚಿನ ಬೇಡಿಕೆ ಸಿಗುತ್ತದೆ.

* ಮೋಬೈಲ್ ಬಳಕೆದಾರರ ಸಂಖ್ಯೆಯ ಜೊತೆ ಮೋಬೈಲ್ ನಲ್ಲಿ ಮೌಲ್ಯಾಧಾರಿತ ಸೇವೆಗಳಾದ ಚಿತ್ರದ ಹಾಡುಗಳ ಕಾಲರ್ ಟ್ಯೂನ್, ಛಾಯಾಚಿತ್ರಗಳ ಡೌನ್ಲೋಡ್,ವಿಡೀಯೋ ತುಣುಕುಗಳನ್ನು ಡೌನ್ಲೋಡ್ ಮಾಡುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಬೆಳೆಯುತ್ತಿದೆ. ಕನ್ನಡ ಚಿತ್ರೋದ್ಯಮ ಈ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.

ಮಾಧ್ಯಮಳ ಪಾತ್ರ: ಕನ್ನಡದ ಮಾಧ್ಯಮದ ಆದ್ಯ ಕರ್ತವ್ಯ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಯತ್ತ ದುಡಿಯುವುದು. ಆ ಪ್ರಕ್ರಿಯೆಯಲ್ಲಿ ಕನ್ನಡದ ಮನರಂಜನೆಯೂ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ಆದರೆ ಕನ್ನಡ ಚಿತ್ರಗಳು ಬಿಡುಗಡೆಯಾದಾಗ ಕಾಲೆಳೆದು ತಮ್ಮ ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಪರಭಾಷೆ ಚಿತ್ರಗಳ ಬಿಟ್ಟಿ(?) ಪ್ರಚಾರವನ್ನು ಕೊಟ್ಟು ಬೇರೆ ಭಾಷೆಯ ಚಿತ್ರಗಳಿಗೆ ಇವರುಗಳೇ ದಲ್ಲಾಳಿಗಳಾಗಿ ಮಾರುಕಟ್ಟೆಯನ್ನು ಕಟ್ಟಿಕೊಡುತ್ತಿದ್ದಾರೆ.

ಸಂಗೀತಕ್ಕೆ, ಮನರಂಜನೆಗೆ ಭಾಷೆಯ ಗಡಿಯಿಲ್ಲ ಅಂತ ಅಸಂಬದ್ಧವಾಗಿ ಮಾತಾಡುತ್ತಿರುವ ಕನ್ನಡ ಚಿತ್ರ ತಯಾರಕರು ಮತ್ತು ಕೆಲವು ಮಾಧ್ಯಮಗಳು ತಮ್ಮ ತಲೆಯ ಮೇಲೆ ತಾವೇ ಚಪ್ಪಡಿ ಕಲ್ಲು ಎಳೆದುಕೊಳ್ಳುತ್ತಿರುವುದು ಗೋಚರವಾಗುತ್ತಿದೆ.

2011 ರಲ್ಲಿ ಕನ್ನಡ ಚಿತ್ರರಂಗ. ಹೇಗಿತ್ತು, ಹೇಗಿರಬೇಕಿತ್ತು? ಎಂಬ ವಿಷಯವಾಗಿ ವಿಸ್ತಾರವಾಗಿ ಅಮರನಾಥ್ ಶಿವಶಂಕರ್ ಅವರು ತಮ್ಮ ಬ್ಲಾಗ್ ನಲ್ಲಿ ಬರೆದಿದ್ದಾರೆ ಆಸಕ್ತರು ಓದಿ....

English summary
Kannada Films lacks publicity and Star actors not bothered about movie promotion in other states and Overseas market. With the demand for Kannada movies increasing Producers, Actors and Distributors should change strategy to promote movies outside Karnataka.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X