»   » ಪಾರ್ವತಿಪುತ್ರನಿಗಾಗಿ ಬಂದ ಗ್ಲಾಮರ್ ಗೊಂಬೆ ನಮಿತಾ

ಪಾರ್ವತಿಪುತ್ರನಿಗಾಗಿ ಬಂದ ಗ್ಲಾಮರ್ ಗೊಂಬೆ ನಮಿತಾ

Posted By:
Subscribe to Filmibeat Kannada

ಕನ್ನಡ ಬೆಳ್ಳಿಪರದೆ ಮೇಲೆ ಮತ್ತೊಮ್ಮೆ 'ಬೆಂಕಿ ಬಿರುಗಾಳಿ' ಎಬ್ಬಿಸಲು ನಮಿತಾ ಬರುತ್ತಿದ್ದಾರೆ. ಹೂ, ನಮಿತಾ ಐ ಲವ್ ಯು ಚಿತ್ರಗಳಲ್ಲಿ ಬೃಹತ್ ಬ್ರಹ್ಮಾಂಡವನ್ನೇ ತೋರಿಸಿದ್ದ ನಮಿತಾ ಈಗ ಅತಿಥಿ ಪಾತ್ರಕ್ಕೆ ಸಹಿಹಾಕಿದ್ದಾರೆ. ಚಿತ್ರದ ಹೆಸರು ಪಾರ್ವತಿಪುತ್ರ.

ಇತ್ತೀಚೆಗೆ ಈ ಚಿತ್ರದ ನಾಯಕ ನಟನ ಪರಿಚಯದ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಈ ಸನ್ನಿವೇಶದ ಚಿತ್ರೀಕರಣದಲ್ಲಿ ಹೀರೋ ರಾಜವರ್ಧನ್ ಹಾಗೂ ಸಾಧು ಕೋಕಿಲ ಹಾಗೂ ಶಕೀಲಾ ಭಾಗವಹಿಸಿದ್ದರು. ಆಕ್ಷನ್, ಕಟ್ ಹೇಳುತ್ತಿರುವವರು ರಾಮ್ ಪ್ರಸಾದ್.

ಚಿತ್ರದ ನಿರ್ದೇಶಕ ರಾಮ್ ಪ್ರಸಾದ್ ಈ ಹಿಂದೆ 'ಬಣ್ಣ ಬಣ್ಣದ ಲೋಕ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಈಗ ನಿರ್ದೇಶಿಸುತ್ತಿರುವ 'ಪಾರ್ವತಿಪುತ್ರ' ಚಿತ್ರ ಸ್ಲಂ ಹಿನ್ನೆಲೆಯ ಕತೆಯನ್ನು ಒಳಗೊಂಡಿದೆಯಂತೆ. ಈ ಚಿತ್ರದಲ್ಲಿ ನಮಿತಾ ಅವರದು ಅತಿಥಿ ಪಾತ್ರವಾದರೂ ನಿರ್ಣಾಯಕ ಪಾತ್ರ ವಹಿಸಲಿದ್ದಾರಂತೆ. ರಮೇಶ್ ಬಾಬು ಛಾಯಾಗ್ರಹಣ, ಹರ್ಷ ನೃತ್ಯ ಸಂಯೋಜನೆ ಚಿತ್ರಕ್ಕಿದೆ. (ಏಜೆನ್ಸೀಸ್)

English summary
Actress Namitha to do a guest role in Parvathipura. Rajavardhn is the hero of the film. Sadhu Kokila, Shakeela are in the cast. The movie is being directing by Ramprasad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada