»   »  ಶಿವಣ್ಣನಿಗೆ ಜೋಡಿಯಾಗಿ ನವ್ಯಾ ನಾಯರ್!

ಶಿವಣ್ಣನಿಗೆ ಜೋಡಿಯಾಗಿ ನವ್ಯಾ ನಾಯರ್!

Posted By:
Subscribe to Filmibeat Kannada
ಶಿವಣ್ಣನ 'ಭಾಗ್ಯದ ಬಳೆಗಾರ'ನಿಗೆ ಸೂಕ್ತ ಜೋಡಿಯಾಗಿ ಮೋಹಕ ನಟಿ ನವ್ಯಾ ನಾಯರ್ ನಟಿಸಲಿದ್ದಾರೆ. ಪ್ರಸ್ತುತ ಭಾಗ್ಯದ ಬಳೆಗಾರನ ಚಿತ್ರೀಕರಣವು ರಾಮನಗರದ ಸುತ್ತ ಮುತ್ತ ಸುಂದರ ತಾಣಗಳಲ್ಲಿ ಭರದಿಂದ ಸಾಗುತ್ತಿದೆ.

ನವ್ಯಾ ನಾಯರ್ ಈ ಹಿಂದೆ 'ಗಜ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ನಟಿಸಿದ್ದರು. ದರ್ಶನ್ ರ ಮತ್ತೊಂದು ಚಿತ್ರ 'ಬಾಸ್'ನಲ್ಲೂ ನವ್ಯಾನಾಯರ್ ನಟಿಸುತ್ತಿದ್ದಾರೆ. ಪ್ರಸ್ತುತ ಬಾಸ್ ಚಿತ್ರೀಕರಣ ಮೈಸೂರಿನ ಸುತ್ತಮುತ್ತ ಸಾಗುತ್ತಿದೆ. ಬಾಸ್ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಶಿವಾಜಿ ಗಣೇಶನ್ ರ ಪುತ್ರ ಶಿವಾಜಿ ಪ್ರಭು ನಟಿಸುತ್ತಿರುವ ವಿಷಯ ಈಗಾಗಲೇ ಜಗಜ್ಜಾಹೀರಾಗಿದೆ!

ಡಾ.ವಿಷ್ಣವರ್ಧನ್ ಅವರ 'ನಂ ಯಜಮಾನ್ರು' ಚಿತ್ರದ ಯಜಮಾನಿಯಾಗಿಯೂ ನವ್ಯಾ ನಾಯರ್ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ಭಾಗ್ಯದ ಬಳೆಗಾರನ ಚಿತ್ರದಲ್ಲಿ ನವ್ಯಾ ನಾಯರ್ ಅವರದು ಮುಗ್ಧ ಹಳ್ಳಿ ಹುಡುಗಿ ಪಾತ್ರ ಎನ್ನುತ್ತಾರೆ ಚಿತ್ರದ ನಿರ್ದೇಶಕ ಸಾಯಿ ಪ್ರಕಾಶ್. ಕಳೆದ ವರ್ಷ 'ನಂದ ಲವ್ಸ್ ನಂದಿತಾ' ಚಿತ್ರ ನಿರ್ಮಿಸಿ ಒಂದಷ್ಟು ಕಾಸು ಮಾಡಿಕೊಂಡ ರಮೇಶ್ ಕಶ್ಯಪ್ ಅವರು ಭಾಗ್ಯದ ಬಳೆಗಾರನ ನಿರ್ಮಾಪಕರು.

(ದಟ್ಸ್ ಕನ್ನಡ ಚಿತ್ರವಾರ್ತೆ)
ರೇಷ್ಮೆ ನಗರದಲ್ಲಿ ಭಾಗ್ಯದ ಬಳೆಗಾರನ ಸಂಚಾರ
ನವ್ಯಾ ನಾಯರ್ ಮನಮೋಹಕ ಚಿತ್ರಪಟಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada