»   » ಪ್ರಭುದೇವ ಪತ್ನಿ ರಾಮಲತಾ ಆತ್ಮಹತ್ಯೆಗೆ ಯತ್ನ

ಪ್ರಭುದೇವ ಪತ್ನಿ ರಾಮಲತಾ ಆತ್ಮಹತ್ಯೆಗೆ ಯತ್ನ

Posted By:
Subscribe to Filmibeat Kannada

"ನನ್ನ ಪತಿಯನ್ನು ಮರಳಿ ನನಗೆ ದೊರಕಿಸಿಕೊಡಿ. ಅವರು ದಾರಿ ತಪ್ಪುತ್ತ್ತಿದ್ದಾರೆ. ನಟಿ ನಯನತಾರಾರನ್ನು ವರಿಸಲು ಅವರು ಸಿದ್ಧತೆ ನಡೆಸಿದ್ದಾರೆ" ಎಂದು ಆರೋಪಿಸುತ್ತಿದ್ದ ಪ್ರಭುದೇವ ಪತ್ನಿ ರಾಮಲತಾ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಘಟನೆಯ ವಿವರಗಳು ಈ ಕೆಳಕಂಡಂತಿವೆ.

ಪ್ರಭುದೇವ ಅವರೇ ತನ್ನ ಪತಿ ಎಂಬುದಕ್ಕೆ ಸಾಕ್ಷಿಯಾಗಿ ಪಡಿತರ ಚೀಟಿ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ರಾಮಲತಾ ಒದಗಿಸಿದ್ದರು. ಆದರೆ ಅವು ನಕಲಿ ನ್ಯಾಯಾಲದಲ್ಲಿ ಇವು ಸಲ್ಲುವುದಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಈ ಶಾಕ್ ನಿಂದ ಧೃತಿಗೆಟ್ಟ ರಾಮಲತಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಗುರುವಾರ ಸಂಜೆ ಆಕೆ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಮೂಲಗಳು ತಿಳಿಸಿವೆ. ಆದರೆ ಆಕೆಯ ನೆರೆಹೊರೆಯವರು ಆಕೆಯನ್ನು ಕೂಡಲೆ ಆಸ್ಪತ್ರೆಗೆ ದಾಖಸಿದ ಕಾರಣ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಕಾರಣ ಆಕೆಯ ವಿರುದ್ಧ ಕೇಸು ದಾಖಲಿಸಲಾಗಿದೆ.

ಆತ್ಮಹತ್ಯೆ ಯತ್ನಕ್ಕೂ ಮುನ್ನ ಆಕೆ ಬರೆದಿಟ್ಟಿರುವ ಪತ್ರದಲ್ಲಿನ ಮೊದಲ ಹೆಸರೇ ನಯನತಾರಾ ಎನ್ನುತ್ತ್ತವೆ ಮೂಲಗಳು. ಈ ಸುದ್ದಿ ನಯನತಾರಾ ಅವರ ಕಿವಿಗೂ ಬಿದ್ದಿದ್ದು ಆಕೆ ತೀವ್ರ ಆಘಾತಕ್ಕೆ ಒಳಗಾಗಿರುವ ಸುದ್ದಿಯೂ ಇದೆ. ಏತನ್ಮಧ್ಯೆ ತನ್ನ ಪತ್ನಿ ರಾಮಲತಾ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಲು ಪ್ರಭುದೇವ ತೀವ್ರ ಹೋರಾಟ ನಡೆಸಿದ್ದಾರೆ.

English summary
Dance master Prabhudeva wife Ramlath attempts suicide, she is said to have consumed sleeping pills yesterday evening, but was saved by her relatives.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada