»   »  ರಾಕ್ ಲೈನ್ ನಿರ್ಮಾಣದಲ್ಲಿ ಮೂರು ಚಿತ್ರಗಳು

ರಾಕ್ ಲೈನ್ ನಿರ್ಮಾಣದಲ್ಲಿ ಮೂರು ಚಿತ್ರಗಳು

Subscribe to Filmibeat Kannada
Rockline Venkatesh starts two new films
ಸದ್ದಿಲ್ಲದಂತೆ ರಾಕ್ ಲೈನ್ ವೆಂಕಟೇಶ್ ರ ಎರಡು ಹೊಸ ಚಿತ್ರಗಳು ವಾರದ ಹಿಂದೆಯೇ ಸೆಟ್ಟೇರಿವೆ. ರಾಕ್ ಲೈನ್ ರ ಎರಡು ಚಿತ್ರಗಳ ನಾಯಕರಾಗಿ ವಿಜಯ್ ಮತ್ತು ದಿಗಂತ್ ನಟಿಸುತ್ತಿದ್ದಾರೆ. ಈ ಚಿತ್ರಗಳ ನಾಯಕಿ ಪಾತ್ರಕ್ಕೆ ಹುಡುಕಾಟ ಆರಂಭವಾಗಿದೆ.

ಮಾಧ್ಯಮದವರ ಹಂಗ್ಯಾಕೆ ಎಂದು ರಾಕ್ ಲೈನ್ ವೆಂಕಟೇಶ್ ಒಂಚೂರು ಸುಳಿವು ಕೊಡದೆ ಈ ಎರಡು ಚಿತ್ರಗಳ ಮುಹೂರ್ತ ಮುಗಿಸಿದ್ದಾರೆ. ಈ ಅನಿರೀಕ್ಷಿತ ಘಟನೆಗಳ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೊಂದಿಗೆ ರಾಕ್ ಲೈನ್ ರ ಚಿತ್ರವೂ ಸೆಟ್ಟ್ಟೇರಿದೆ. ದರ್ಶನ್ ಚಿತ್ರಕ್ಕೆ ಓಂ ಪ್ರಕಾಶ್ ರಾವ್ ನಿರ್ದೇಶಕರು.

ರಾಕ್ ಲೈನ್ ವೆಂಕಟೇಶ್ ಒಟ್ಟೊಟ್ಟಿಗೆ ಹೀಗೆ ಮೂರು ಚಿತ್ರಗಳನ್ನು ನಿರ್ಮಿಸುತ್ತಿರುವುದು ನೋಡಿದರೆ ಅವರು ನಿಜಕ್ಕೂ ಧೀರರೆ! ಇಡೀ ಕನ್ನಡ ಚಿತ್ರರಂಗ ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿದ್ದರೆ ರಾಕ್ ಲೈನ್ ಮಾತ್ರ ಖುಷಿಯಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಅವರ ನಿರ್ಮಾಣದ ಜಂಗ್ಲಿ ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಲಗೋರಿಯನ್ನು ಕೈಬಿಟ್ಟ ಧೀರ ರಾಕ್ ಲೈನ್ ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada