»   »  ಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯ

ಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯ

Subscribe to Filmibeat Kannada
Shivrajkumar
ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ ನೂರನೆ ಚಿತ್ರಕ್ಕೆ 'ಜೋಗಯ್ಯ' ಎಂದು ನಾಮಕರಣ ಮಾಡಲಾಗಿದೆ. ಪ್ರೇಮ್ ನಿರ್ದೇಶನ, ನಿರ್ಮಾಣದಲ್ಲಿ ಜೋಗಯ್ಯ ಸೆಟ್ಟೇರಲಿದೆ. ಈಚಿತ್ರದ ಮೂಲಕ ಪ್ರೇಮ್ ನಿರ್ಮಾಪಕರಾಗಿ ಹೊಸ ಜವಾಬ್ದಾರಿ ಹೊತ್ತಿದ್ದಾರೆ.

ಪ್ರೇಮ್ ತಮ್ಮ ಪತ್ನಿ ರಕ್ಷಿತಾರೊಂದಿಗೆ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಜೋಗಯ್ಯನನ್ನು ನೋಡಬೇಕಾದರೆ ಶಿವಣ್ಣನ ಅಭಿಮಾನಿಗಳು ಸ್ವಲ್ಪ ದಿನ ಕಾಯಬೇಕಾಗುತ್ತದೆ. ಕಾರಣ ಶಿವಣ್ಣನ ಹಲವಾರು ಚಿತ್ರಗಳು ಇನ್ನೂ ನಿರ್ಮಾಣ ಹಂತದಲ್ಲಿವೆ. ಅವೆಲ್ಲ ಮುಗಿದ ನಂತರವೇ ಜೋಗಯ್ಯ ಸೆಟ್ಟೇರಲಿದೆ.

ತಮ್ಮ ನೂರನೇ ಚಿತ್ರ ಜೋಗಯ್ಯನೇ ಎಂದು ಶಿವಣ್ಣ ಈಗಾಗಲೇ ಪ್ರೇಮ್ ಗೆ ಮಾತೂ ಕೊಟ್ಟಾಗಿದೆ. ಪುನೀತ್ ರಾಜ್ ಕುಮಾರ್ ರ 'ರಾಜ್' ನಿರ್ದೇಶನದಲ್ಲಿ ಪ್ರೇಮ್ ಬ್ಯುಸಿಯಾಗಿದ್ದಾರೆ. ಎಲ್ಲಾ ಸುಸೂತ್ರವಾಗಿ ನಡೆದರೆ ರಾಜ್ ಏಪ್ರಿಲ್ ಕೊನೆಗೆ ಚಿತ್ರಮಂದಿರಗಳಿಗೆ ಲಗ್ಗೆ ಹಾಕಲಿದೆ. ಪ್ರಸ್ತುತ ಶಿವಣ್ಣ ಚೆಲುವೆಯೆ ನಿನ್ನ ನೋಡಲು ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಇವೆಲ್ಲಾ ಗದ್ದಲಗಲು ಮುಗಿದ ನಂತರವೇ ಜೋಗಯ್ಯನ ಅಬ್ಬರ ಶುರುವಾಗಲಿದೆ.

ಶಿವಣ್ಣನ ವೃತ್ತಿ ಜೀವನದಲ್ಲಿ ಜೋಗಿ ಮರೆಯಲಾಗದ ಚಿತ್ರ. ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ ಚಿತ್ರ. ಆ ಕಾರಣಕ್ಕೆ ತಮ್ಮ ನೂರನೆ ಚಿತ್ರಕ್ಕೆ ಜೋಗಯ್ಯ ಎಂದು ಹೆಸರಿಸಿರುವ ಬಗ್ಗೆಪ್ರೇಮ್ ಮತ್ತು ಶಿವಣ್ಣ ಇಬ್ಬರೂ ಒಪ್ಪುತ್ತಾರೆ. ಆನಂದ್(1986) ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಶಿವಣ್ಣ ಪಾದರ್ಪಣೆ ಮಾಡಿದ್ದರು. ರಥ ಸಪ್ತಮಿ, ಮನಮೆಚ್ಚಿದ ಹುಡುಗಿ, ಓಂ, ನಮ್ಮೂರ ಮಂದಾರ ಹೂವೆ, ಜನುಮದ ಜೋಡಿ, ಎಕೆ 47 ಮತ್ತು ಜೋಗಿ ದಾಖಲೆ ನಿರ್ಮಿಸಿದ ಚಿತ್ರಗಳು. ಶಿವಣ್ಣನ ಐವತ್ತನೇ ಚಿತ್ರ ಎಕೆ 47, ಭರ್ಜರಿ ಹಿಟ್ ಚಿತ್ರವಾಗಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಚೆಲುವೆಯೆ ನಿನ್ನ ನೋಡಲು ಚಿತ್ರದಲ್ಲಿ ಸೋನಾಲ್
ಶಿವಣ್ಣನ ಚಿತ್ರದಲ್ಲಿ ಹುಟ್ಟಿದರೆ ಕನ್ನಡನಾಡಲ್ಲಿ...ಹಾಡು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada