ಲೇಟಾಗಿ ಕುಂಬಳಕಾಯಿ ಒಡೆಸಿಕೊಂಡ ಸಿದ್ಲಿಂಗು

By Rajendra

ಕನ್ನಡ ಚಿತ್ರರಂಗದಲ್ಲಿ ಅನಾದಿ ಕಾಲದಿಂದಲೂ ಒಂದು ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಅದೇನಪ್ಪಾ ಎಂದರೆ ಚಿತ್ರೀಕರಣ ಮುಗಿಯುತ್ತಿದ್ದಂತೆ ಕುಂಬಳಕಾಯಿ ಒಡೆಯುವುದು. ಆದರೆ 'ಸಿದ್ಲಿಂಗು' ಚಿತ್ರತಂಡ ಕುಂಬಳಕಾಯಿ ಒಡೆಯುವುದನ್ನು ಮರೆತಿತ್ತೋ ಏನೋ ಕೊಂಚ ತಡವಾಗಿ ಒಡೆದು ಸಂಭ್ರಮಿಸಿದ್ದಾರೆ.

ರಮ್ಯಾ ಹಾಗೂ ಯೋಗೇಶ್ ಮುಖ್ಯಭೂಮಿಕೆಯಲ್ಲಿರುವ 'ಸಿದ್ಲಿಂಗು' ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರಶಂಸಾ ಪತ್ರ ಸಿಕ್ಕಿದೆ. ಚಿತ್ರ ಬಿಡುಗಡೆಯಾದ ನಾಲ್ಕು ದಿನಗಳ ಮೇಲೆ ಕುಂಬಳಕಾಯಿ ಒಡೆದು ಚಿತ್ರತಂಡ ಸಂಭ್ರಮಿಸಿದೆ. ಇಪ್ಪತ್ತು ಪ್ಲಸ್ ಕೇಂದ್ರಗಳಲ್ಲಿ ಸಿದ್ಲಿಂಗು ಭರ್ಜರಿ ಪ್ರದರ್ಶನ ಕಾಣುತ್ತಿದೆ.

'ಸಿದ್ಲಿಂಗು' ಚಿತ್ರ ರಾಜ್ಯದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಮೊನ್ನೆ ಚಿತ್ರತಂಡ ಏನನ್ನಿಸಿತೋ ಏನೋ ರೀಲ್‌ಗೆ ಪೂಜೆ ಮಾಡಿ ಕುಂಬಳಕಾಯಿ ಒಡೆದಿದ್ದಾರೆ. ಚಿತ್ರ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಬಗ್ಗೆ ರಮ್ಯಾ, ಯೋಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್ ಎಲ್ಲರೂ ಖುಷಿಯಾಗಿದ್ದಾರೆ. (ಏಜೆನ್ಸೀಸ್)

More from Filmibeat

English summary
The cast and crew members of Kannada movie Sidlingu celebrating success for breaking a pumpking and performs pooja for reel. Sidlingu of TP Siddaraju starring charming Ramya and Yogish in the debut direction of Vijayaprasad celebrated the good response in Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X