»   » ಚಿತ್ರರಂಗಕ್ಕೆ ಟ್ವಿಂಕಲ್ ವಿದಾಯ; ಅಕ್ಷಯ್ ಕುಮಾರ್

ಚಿತ್ರರಂಗಕ್ಕೆ ಟ್ವಿಂಕಲ್ ವಿದಾಯ; ಅಕ್ಷಯ್ ಕುಮಾರ್

Posted By:
Subscribe to Filmibeat Kannada

ಬಾಲಿವುಡ್ ನಟಿ ಟ್ವಿಂಕಲ್ ಖನ್ನಾ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡು ಬಹಳಷ್ಟು ವರ್ಷಗಳೆ ಉರುಳಿ ಹೋಗಿವೆ. ಆಕೆ ಮತ್ತೆ ಬೆಳ್ಳಿತೆರೆಗೆ ಬರುತ್ತಾರೊ ಇಲ್ಲವೊ ಎಂಬ ಪ್ರಶ್ನೆ ಆಕೆಯ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಆಕೆ ಇನ್ನು ಮುಂದೆ ಚಿತ್ರಗಳಲ್ಲಿ ನಟಿಸುವುದು ಅನುಮಾನ ಎಂದಿದ್ದಾರೆ ಆಕೆಯ ಪತಿ ಅಕ್ಷಯ್ ಕುಮಾರ್.

ಟ್ವಿಂಕಲ್ ಚಿತ್ರರಂಗದಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಆಕೆ ಮತ್ತೆ ಬಣ್ಣ ಹಚ್ಚಿಕೊಳ್ಳುವುದು ದೂರದ ಮಾತು. ಒಂದು ವೇಳೆ ಆಕೆಯ ಅಭಿಮಾನಿಗಳು ಮತ್ತೆ ಆಕೆ ಚಿತ್ರರಂಗಕ್ಕೆ ಮರುಳುತ್ತಾಳೆ ಎಂದು ಭಾವಿಸಿದರೆ ಅವರಿಗೆ ಖಂಡಿತ ನಿರಾಸೆ ಕಾದಿದೆ ಎಂದಿದ್ದಾರೆ ಅಕ್ಷಯ್.

ಈಗಾಗಲೆ ಆಕೆ ಒಳಾಂಗಣ ವಿನ್ಯಾಸಗಾರ್ತಿಯಾಗಿ ನೆಲೆ ಕಂಡುಕೊಂಡಿದ್ದಾರೆ. "ದಿ ವೈಟ್ ವಿಂಡೋ ಸ್ಟೋರ್" ಎಂಬ ಒಳಾಂಗಣ ವಿನ್ಯಾಸ ಸಂಸ್ಥೆಯನ್ನು ನಡೆಸುತ್ತಿದ್ದಾರೆ. 2001ರಲ್ಲಿ ತೆರೆಕಂಡಿದ್ದ 'ಲವ್ ಕೆ ಲಿಯೆ ಕುಚ್ ಬಿ ಕರೆಗ' ಆಕೆ ಅಭಿನಯದ ಕೊನೆಯ ಚಿತ್ರ. ಬಳಿಕ ಆಕೆ ಕ್ಯಾಮೆರಾ ಕಡೆಗೆ ಮುಖ ತಿರುಗಿಸಲೆ ಇಲ್ಲ.

ಡಿಂಪಲ್ ಕಪಾಡಿಯಾ ಹಾಗೂ ರಾಜೇಶ್ ಖನ್ನ ಅವರ ಮುದ್ದಿನ ಮಗಳು ಟ್ವಿಂಕಲ್. 2001ರಲ್ಲಿ ಅಕ್ಷಯ್ ಆಕೆಯ ಕೈಹಿಡಿದ. ಬಳಿಕ ಅಕ್ಷಯ್, ಟ್ವಿಂಕಲ್ ದಂಪತಿಗಳಿಗೆ ಗಂಡು ಮಗುವೂ ಆಯಿತು. 2002ರಿಂದ ಒಳಾಂಗಣ ವಿನ್ಯಾಸಗಾರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಮೊಬೈಲ್ ಫೋನ್ ಜಾಹಿರಾತೊಂದರಲ್ಲಿ ಟ್ವಿಂಕಲ್ ಕಾಣಿಸಿಕೊಂಡಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada