For Quick Alerts
  ALLOW NOTIFICATIONS  
  For Daily Alerts

  ಪಾಕಿಸ್ತಾನಿ ವೀಣಾ ಮಲಿಕ್ ಕನ್ನಡದ 'ಡರ್ಟಿ' ಹುಡುಗಿ

  |

  ಪಾಕಿಸ್ತಾನದ ನಟಿ ವೀಣಾ ಮಲಿಕ್ ಕನ್ನಡದ 'ಡರ್ಟಿ' ಹುಡುಗಿ ಆಗಲಿದ್ದಾಳೆ. ಹೌದು, ಅಂದುಕೊಂಡಂತೆ ಎಲ್ಲವೂ ನಡೆದರೆ ವೀಣಾ ಮಲಿಕ್ ಸದ್ಯದಲ್ಲೇ ಕನ್ನಡದ ಡರ್ಟಿ ಪಿಕ್ಚರ್ ನಲ್ಲಿ ಅಭಿನಯಸಲಿದ್ದಾಳೆ. ಈ ವಿಷಯ ಸ್ವತಃ ವೀಣಾರಿಂದಲೇ ಬಹಿರಂಗಗೊಂಡಿದೆ ಎನ್ನಲಾಗಿದೆ. ಹತ್ತು ದಿನಗಳ ಮಟ್ಟಿಗೆ ಆಸ್ಟ್ರೇಲಿಯಾಕ್ಕೆ ತೆರಳಿ ಹಿಂದಿರುಗಿದ ಬಳಿಕ ವೀಣಾ, ಕನ್ನಡದ ಡರ್ಟಿ ಚಿತ್ರದಲ್ಲಿ ನಟಿಸಲಿದ್ದಾರೆ.

  ಪಾಕಿಸ್ತಾನದ ನಟಿ ಹಾಗೂ ಹಾಟ್ ಮಾಡೆಲ್ ವೀಣಾ ಆಯ್ಕೆ ಪಕ್ಕಾ ಆಗಿದೆ. ಹಾಗಾಗಿ, ಈ ಮೊದಲು ಕೇಳಿ ಬಂದಿದ್ದ ನಿಖಿತಾ ತುಕ್ರಲ್, ಪೂಜಾ ಗಾಂಧಿ ಹಾಗೂ ಚಾರ್ಮಿ ಹೆಸರುಗಳಿಗೆ ಈಗ ಬ್ರೇಕ್ ಬಿದ್ದಿದೆ. ನಟಿ ಸಿಲ್ಕ್ ಸ್ಮಿತಾ ಜೀವನಕಥೆಯನ್ನಾಧರಿಸಿದ ಹಿಂದಿಯ 'ದಿ ಡರ್ಟಿ ಪಿಕ್ಷರ್'ನಲ್ಲಿ ಮಲೆಯಾಳಿ ಬೆಡಗಿ ವಿದ್ಯಾ ಬಾಲನ್ ನಟಿಸಿ ಪ್ರೇಕ್ಷಕರ ಪ್ರಶಂಸೆಯ ಜೊತೆಗೆ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

  ಈ ಮೂಲಕ ಪಾಕಿಸ್ತಾನ ಮೂಲದ ನಟಿಯೊಬ್ಬಳು ಬಾಲಿವುಡ್ ನಿಂದ ನೇರವಾಗಿ ಸ್ಯಾಂಡಲ್ ವುಡ್ ಅಂಗಳಕ್ಕೆ ಇಳಿದುಬಂದಂತಾಗಿದೆ. ಈ ಹಾಟ್ ಬೆಡಗಿಯ ಹೆಸರು ಕೇಳಿದರೇ ಸಾಕು, ಪಡ್ಡೆಗಳು ನಿದ್ದೆ ಬರದೇ ಒದ್ದಾಡುತ್ತಾರೆ. ಇನ್ನು ಸಿಲ್ಕ್ ಸ್ಮಿತಾ ಪಾತ್ರದಲ್ಲಿ ನೋಡಿದ ಮೇಲೆ ಇನ್ನೇನೇನು ಅವಾಂತರ ಮಾಡಿಕೊಳ್ಳುತ್ತಾರೋ, ಹೇಳಲು ಯಾರಿದ್ದಾರೆ! (ಒನ್ ಇಂಡಿಯಾ ಕನ್ನಡ)

  English summary
  Actress Veena Malik Acts in Kannada Movie, remake of Bollywood movie 'The Dirty Picture'. Veena Malik herself confirmed it. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X