»   »  ಪ್ರೀತ್ಸೆ ಪ್ರೀತ್ಸೆ ಕನವರಿಕೆಯಲ್ಲಿ ಲೂಸ್ ಮಾದ!

ಪ್ರೀತ್ಸೆ ಪ್ರೀತ್ಸೆ ಕನವರಿಕೆಯಲ್ಲಿ ಲೂಸ್ ಮಾದ!

Subscribe to Filmibeat Kannada

ಮೋಹನ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಯೋಗಿಶ್ ಅಭಿನಯದ 'ಪ್ರೀತ್ಸೆ ಪ್ರೀತ್ಸೆ ' ಚಿತ್ರ ಮುಂದಿನ ವಾರ ರಾಜ್ಯಾದ್ಯಂತ ತೆರೆಕಾಣಲಿದೆ. ಸೆನ್ಸಾರ್ ಮಂಡಳಿಯಿಂದ 'ಯು' ಅರ್ಹತಾ ಪತ್ರ ಪಡೆದು ಚಿತ್ರ ಮುಂದಿನ ವಾರ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ ಎಂದು ಚಿತ್ರದ ನಿರ್ಮಾಪಕ ಕೃಷ್ಣಯ್ಯ ತಿಳಿಸಿದ್ದಾರೆ.

ಪ್ರೀತಿ ಪ್ರಧಾನವಾದ ಈ ಚಿತ್ರದಲ್ಲಿ ಯೋಗಿಶ್ ಗೆ ನಾಯಕಿಯಾಗಿ ಉದಯತಾರ ಮತ್ತು ಉಳಿದ ತಾರಾಗಣದಲ್ಲಿ ಪ್ರಜ್ಞಾ, ಜೈಜಗದೀಶ್, ಸಂಗೀತಾ, ರಮೇಶ್ ಭಟ್, ಪಿ ಎನ್ ಸತ್ಯಾ ಮುಂತಾದವರಿದ್ದಾರೆ. ಚಿತ್ರಕ್ಕೆ ಅನುಪ್ ಸೀಳಿನ್ ಅವರ ಸಂಗೀತವಿದೆ. ವೀನಸ್ ಮೂರ್ತಿಯವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರೇಶ ಗೋಸ್ವಾಮಿ ಕಥೆ ಬರೆದಿದ್ದಾರೆ. ಕೆ ವಿ ರಾಜು ಅವರ ಸಂಭಾಷಣೆ, ತಿರುಪತಿ ರೆಡ್ಡಿಯವರ ಸಂಕಲನ ಮತ್ತು ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜಿಸಿದ್ದಾರೆ.

ತಮ್ಮ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವುದರಿಂದ, ಈ ಚಿತ್ರ ಕೂಡ ಜನರ ಮನ್ನಣೆಗೆ ಪಾತ್ರವಾಗಲಿದೆ ಎನ್ನುವುದು ಯೋಗಿಶ್ ಲೆಕ್ಕಾಚಾರ. ಚಿತ್ರದ ಹಾಡುಗಳು ಆಡಿಯೋ ಮೂಲಕ ಕೇಳಿರುವ, ವಾಹಿನಿಗಳ ಮೂಲಕ ನೋಡಿರುವ ಪ್ರೇಕ್ಷಕರಿಂದ ಚಿತ್ರದ ಗೀತೆಗಳು ಪ್ರಶಂಸೆಗೆ ಪಾತ್ರವಾಗಿದ್ದು ಚಿತ್ರಕ್ಕೂ ಉತ್ತಮ ಬೆಂಬಲ ನೀಡುತ್ತಾರೆ ಎಂದು ನಿರ್ದೇಶಕ ಮಾದೇಶ್ ಅಭಿಪ್ರಾಯಪಟ್ಟಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada