»   » 'ಪಂಚರಂಗಿ' ಗಿಳಿ ಹಾರಿಬಿಟ್ಟ ಯೋಗರಾಜ ಭಟ್

'ಪಂಚರಂಗಿ' ಗಿಳಿ ಹಾರಿಬಿಟ್ಟ ಯೋಗರಾಜ ಭಟ್

Posted By:
Subscribe to Filmibeat Kannada

ಚಿತ್ರ ನಿರ್ದೇಶಕ ಯೋಗರಾಜ್ ಭಟ್ ತಮ್ಮ ಚೊಚ್ಚಲ ನಿರ್ಮಾಣದ ಚಿತ್ರಕ್ಕೆ 'ಪಂಚರಂಗಿ'ಎಂದುಹೆಸರಿಟ್ಟಿದ್ದಾರೆ. ಪಂಚರಂಗಿ ಎಂದರೆ ಐದು ಬಣ್ಣಗಳು ಎಂದು ಅರ್ಥ ಬರುತ್ತದೆ. ಐದು ಬಣ್ಣಗಳ ಪ್ರತೀಕವೇ 'ಪಂಚರಂಗಿ' ಚಿತ್ರ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಈ ಐದು ಬಣ್ಣಗಳು ಭಟ್ಟರ ದೃಷ್ಟಿಕೋನದಲ್ಲಿ ಭಿನ್ನವಾಗಿವೆ. ವಿದ್ಯೆ, ಉದ್ಯೋಗ, ಪ್ರೀತಿ, ಪಾಲಕರು ಹಾಗೂ ಮದುವೆ...ಇವು ಭಟ್ಟರ ಕಲ್ಪನೆಯ ಪಂಚರಂಗುಗಳು. ಈ ಐದು ಬಣ್ಣಗಳನ್ನು ಬೆಸೆಯುವ ಕಾರ್ಯ ಫೆಬ್ರವರಿ 3ರಿಂದ ಆರಂಭವಾಗಲಿದೆ. ಚಿತ್ರೀಕರಣ ಬೆಂಗಳೂರು, ಕರಾವಳಿ ಪ್ರದೇಶದ ರಮಣೀಯ ಪ್ರದೇಶಗಳಲ್ಲಿ ಸಾಗಲಿದೆ.

ಚಿತ್ರದ ಕತೆಗೆ ರಮಣೀಯ ದೃಶ್ಯಗಳು ಹೆಚ್ಚು ಸೂಕ್ತ. ಹಾಗಾಗಿ ಈ ಬಾರಿ ಭಟ್ಟರ ಪಯಣ ಕೊಡಗಿನಿಂದ ಕರಾವಳಿ ಕಡೆಗೆ ಸಾಗಲಿದೆಯಂತೆ. ''ಮನುಷ್ಯ ತನ್ನ ಆಸೆಗಳನ್ನು ಐದು ಅಂಶಗಳ ಮೂಲಕವೇ ಪೂರೈಸಿಕೊಳ್ಳಬೇಕ'' ಎಂಬುದು ಚಿತ್ರದ ಒನ್ ಲೈನ್ ಕತೆ.

ಪಂಚರಂಗಿಯ ನಾಯಕ ದಿಗಂತ್. ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಚಿತ್ರದ ನಾಯಕಿ. ಭಟ್ಟರ ಜೊತೆ 'ಮುಂಗಾರು ಮಳೆ' ಹಾಗೂ 'ಮನಸಾರೆ' ಚಿತ್ರಗಳಿಗೆ ಕೆಲಸ ಮಾಡಿದ್ದ ಮನೋಮೂರ್ತಿ ಚಿತ್ರದ ಸಂಗೀತ ನಿರ್ದೇಶಕರು. ಛಾಯಾಗ್ರಾಹಣದ ಜಬಾಬ್ದಾರಿಯನ್ನು ತ್ಯಾಗು ಅವರಿಗೆ ವಹಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada