»   » ಯೋಗರಾಜ ಭಟ್ಟರ ಗಾಳಿಪಟ ಭಾವನಾ ಕೈಗೆ!

ಯೋಗರಾಜ ಭಟ್ಟರ ಗಾಳಿಪಟ ಭಾವನಾ ಕೈಗೆ!

Subscribe to Filmibeat Kannada

ಯೋಗರಾಜ ಭಟ್ಟರ ಗಾಳಿಪಟ ಚಿತ್ರಕ್ಕೆ ನಾಯಕನ ಆಯ್ಕೆಯಲ್ಲಿ ಮೂಡಿದ್ದ ಕುತೂಹಲ, ನಾಯಕಿಯರ ಆಯ್ಕೆಯಲ್ಲೂ ಮುಂದುವರೆದಿತ್ತು.

ಪುನೀತ್ ಕಾಲ್‌ಶೀಟ್ ಹೊಂದಾಣಿಕೆಯಾಗದ ಕಾರಣ ಮುಂಗಾರುಮಳೆಯ ಗಣೇಶ್ ಮತ್ತೆ ಭಟ್ಟರ ಗರಡಿಗೆ ಬಂದಿದ್ದಾರೆ.

ಗಣೇಶ್, ಗಾಯಕ ರಾಜೇಶ್ ಕೃಷ್ಣನ್ ಹಾಗೂ ಮಲ್ನಾಡ್ ಹುಡುಗ ದಿಗಂತ್ ಚಿತ್ರದ ಮೂವರು ನಾಯಕರು. ಇವರುಗಳಿಗೆ ನಾಯಕಿಯರು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.

ಮೊದಲಿಗೆ ನೀತು ,ಡೈಸಿ ಜತೆ ಛಾಯಾಸಿಂಗ್ ಎಂದು ಹೇಳಲಾಯಿತು. ನಂತರ, ಛಾಯಾಸಿಂಗ್ ಬದಲು, ಶಾಂತಿ ನಿವಾಸದ ನಾಯಕಿ ದೀಪು ಹೆಸರು ತೇಲಿ ಬಂತು, ಕೊನೆಗೆ ಈ ಪಾತ್ರ ಭಾವನಾ ರಾವ್ ಎಂಬ ಮಾಡೆಲಿಂಗ್ ಲೋಕದ ಕನ್ನಡತಿಗೆ ದಕ್ಕಿದೆ.

ಎಲ್ಲರನ್ನೂ ಪಕ್ಕಕ್ಕೆ ಸರಿಸಿರುವ ಭಾವನಾ ರಾವ್ ಮೂಲತಃ ಭರತನಾಟ್ಯ ಕಲಾವಿದೆ. ಈಗ ಗಾಳಿಪಟ ಹಿಡಿದುಕೊಂಡು ತೀರ್ಥಹಳ್ಳಿ,, ಆಗುಂಬೆ, ಕೊಡಚಾದ್ರಿ ಮುಂತಾದ ಕಡೆ ಚಿತ್ರೀಕರಣದಲ್ಲಿ ತೊಡಗಿದ್ದಾರೆ ಎಂಬ ಸುದ್ದಿ ಬಂದಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada