For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಬರ್ತಿದ್ಯಾ ರಜನಿಯ '2.0'.? ಎಲ್ಲೆಲ್ಲೂ ಹರಿದಾಡ್ತಿದೆ ಕನ್ನಡ ಟೀಸರ್.!

  |

  ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದಲ್ಲಿ ಮೂಡಿ ಬರ್ತಿರುವ ಬಹುಕೋಟಿ ವೆಚ್ಚದ '2.0' ಸಿನಿಮಾದ ಟೀಸರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ.

  ತಮಿಳು, ತೆಲುಗು ಮತ್ತು ಹಿಂದಿಯಲ್ಲಿ '2.0' ಚಿತ್ರದ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಆದ್ರೆ, ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಮೊಬೈಲ್ ವಾಟ್ಸಾಪ್ ಗಳಲ್ಲಿ ಕನ್ನಡ ವರ್ಷನ್ ನ ಟೀಸರ್ ಈಗ ಹರಿದಾಡುತ್ತಿದೆ.

  ಟೀಸರ್ ಮೂಲಕವೇ ವಿಶ್ವವನ್ನ ಬೆರಗುಗೊಳಿಸುತ್ತಿದೆ '2.0' ಟೀಸರ್ ಮೂಲಕವೇ ವಿಶ್ವವನ್ನ ಬೆರಗುಗೊಳಿಸುತ್ತಿದೆ '2.0'

  '2.0' ಚಿತ್ರದ ಟೀಸರ್ ಕನ್ನಡದಲ್ಲೂ ಬಂದಿದೆಯಾ ಎಂಬ ಅನುಮಾನ ಈಗ ಕಾಡುತ್ತಿದೆ. ಸಹಜವಾಗಿ ವೃತ್ತಿಪರ ವ್ಯಕ್ತಿಗಳು ಈ ಚಿತ್ರಕ್ಕೆ ಡಬ್ ಮಾಡಿದ್ದು, ಬಹುಶಃ ಈ ಸಿನಿಮಾ ಡಬ್ಬಿಂಗ್ ಆಗಿದ್ಯಾ ಎಂಬ ಕುತೂಹಲ ಕಾಡುತ್ತಿದೆ. ಹಾಗಿದ್ರೆ, ಕನ್ನಡ ವರ್ಷನ್ ನಲ್ಲಿ 2.0 ಸಿನಿಮಾ ಬರುತ್ತಾ.? ಮುಂದೆ ಓದಿ....

  ಕನ್ನಡದಲ್ಲೂ ಬರುತ್ತಾ 2.0.?

  ಕನ್ನಡದಲ್ಲೂ ಬರುತ್ತಾ 2.0.?

  ರಜನಿಕಾಂತ್ ಅಭಿನಯದ '2.0' ಸಿನಿಮಾ ಕನ್ನಡದಲ್ಲಿ ಬರುತ್ತಾ ಎಂಬ ಅನುಮಾನ ಈಗ ಕಾಡುತ್ತಿದೆ. ಯಾಕಂದ್ರೆ, ಕನ್ನಡ ವರ್ಷನ್ ಎಂದು ಹೇಳಲಾಗುತ್ತಿರುವ ಟೀಸರ್ ವೈರಲ್ ಆಗಿದೆ. ಇದನ್ನ ಗಮನಿಸಿದ್ರೆ, ಬಹುಶಃ ರಜನಿಕಾಂತ್ ಅವರ ಈ ಚಿತ್ರ ಸದ್ದಿಲ್ಲದೇ ಕನ್ನಡಕ್ಕೆ ಡಬ್ ಆಗಿದೆ ಎಂಬ ಕುತೂಹಲ ಉಂಟಾಗಿದೆ.

  ಡಬ್ಬಿಂಗ್ ಹಕ್ಕು ಖರೀದಿಸಿದ್ರಾ.?

  ಡಬ್ಬಿಂಗ್ ಹಕ್ಕು ಖರೀದಿಸಿದ್ರಾ.?

  ಈಗಾಗಲೇ ಡಬ್ಬಿಂಗ್ ಚಿತ್ರಗಳು ಬಿಡುಗಡೆಯಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ದೊಡ್ಡ ದೊಡ್ಡ ಸಿನಿಮಾಗಳು ಕನ್ನಡಕ್ಕೆ ಡಬ್ ಆಗುವ ಹಾದಿಯಲ್ಲಿದೆ. ಹೀಗಿರುವಾಗ, ರಜನಿಯ 2.0 ಸಿನಿಮಾದ ಕನ್ನಡ ಡಬ್ ಹಕ್ಕನ್ನ ಯಾರಾದರೂ ಖರೀದಿಸಿದ್ರಾ.? ಸೈಲೆಂಟ್ ಆಗಿ ಡಬ್ಬಿಂಗ್ ಕೆಲಸ ಆರಂಭಿಸಿದ್ದಾರಾ ಎಂಬ ಪ್ರಶ್ನೆ ಈಗ ಎದುರಾಗಿದೆ.

  ರಜನಿಯ '2.0' ಟೀಸರ್ ನೋಡಿ ಶಿಳ್ಳೆ ಹೊಡೆಯುತ್ತಿದ್ದಾರೆ ಟ್ವೀಟಿಗರು.! ರಜನಿಯ '2.0' ಟೀಸರ್ ನೋಡಿ ಶಿಳ್ಳೆ ಹೊಡೆಯುತ್ತಿದ್ದಾರೆ ಟ್ವೀಟಿಗರು.!

  ಕನ್ನಡಕ್ಕೆ ಬರಲಿ ಎಂದು ಒತ್ತಾಯ

  ಕನ್ನಡಕ್ಕೆ ಬರಲಿ ಎಂದು ಒತ್ತಾಯ

  ಇನ್ನು ರಜನಿಯ '2.0' ಸಿನಿಮಾವನ್ನ ಕನ್ನಡಕ್ಕೆ ಡಬ್ ಮಾಡಲಿ ಎಂದು ಒಂದು ವರ್ಗದ ಅಭಿಮಾನಿಗಳು ಬೇಡಿಕೆಯಿಟ್ಟಿದ್ದಾರೆ. ಇಂತಹ ಸಿನಿಮಾಗಳನ್ನ ಕನ್ನಡ ಭಾಷೆಯಲ್ಲೇ ನೋಡುವ ಅವಕಾಶ ಕನ್ನಡಿಗರಿಗೆ ಸಿಗಲಿ ಎಂದು ಡಬ್ಬಿಂಗ್ ಪರ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಡಬ್ಬಿಂಗ್ ಬೇಕು ಎಂದು ಹೋರಾಟ ಮಾಡುತ್ತಿರುವ ಜನರು ರಜನಿಯ ಈ ಸಿನಿಮಾವನ್ನ ಕನ್ನಡದಲ್ಲಿ ನೋಡಲು ಆಸೆ ಪಡುತ್ತಿದ್ದಾರೆ.

  ರಜನಿಯ '2.0' ಚಿತ್ರದ ಗ್ರಾಫಿಕ್ಸ್ ಗೆ ಖರ್ಚಾಗಿದ್ದು ಬರೋಬ್ಬರಿ 543 ಕೋಟಿ.!ರಜನಿಯ '2.0' ಚಿತ್ರದ ಗ್ರಾಫಿಕ್ಸ್ ಗೆ ಖರ್ಚಾಗಿದ್ದು ಬರೋಬ್ಬರಿ 543 ಕೋಟಿ.!

  ರೀಮೇಕ್ ಮಾಡಲಿ ನೋಡೋಣ

  ರೀಮೇಕ್ ಮಾಡಲಿ ನೋಡೋಣ

  ದಾಖಲೆಗಳ ಪ್ರಕಾರ '2.0' ಸಿನಿಮಾ ಕೇವಲ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಮಾತ್ರ ಬರ್ತಿಲ್ಲ. ಜಗತ್ತಿನ ಸುಮಾರು 15 ಭಾಷೆಯಲ್ಲಿ ಡಬ್ ಆಗಿ ಬಿಡುಗಡೆಯಾಗಲಿದೆ. ಹೀಗಾಗಿ, ಕನ್ನಡದಲ್ಲೂ ಡಬ್ ಆಗಲಿ ಎಂದು ಅಭಿಯಾನ ಮಾಡುತ್ತಿದ್ದಾರೆ. 543 ಕೋಟಿ ಬಜೆಟ್ ಸಿನಿಮಾ ಇದಾಗಿದ್ದು, ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಡಬ್ ಆಗಿಲ್ಲ ಅಂದ್ರೆ ರೀಮೇಕ್ ಮಾಡಲಿ ನೋಡೋಣ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  ರಜನಿಯ 'ಕಾಲಾ' ಮತ್ತು ಜಗ್ಗೇಶ್ '8MM'ಗೂ ಒಂದು ನಂಟಿದೆ ರಜನಿಯ 'ಕಾಲಾ' ಮತ್ತು ಜಗ್ಗೇಶ್ '8MM'ಗೂ ಒಂದು ನಂಟಿದೆ

  ಕಾದುನೋಡಬೇಕಿದೆ...

  ಕಾದುನೋಡಬೇಕಿದೆ...

  ನವೆಂಬರ್ ತಿಂಗಳಲ್ಲಿ ರಜನಿಕಾಂತ್ ಅಭಿನಯದ '2.0' ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ ಕನ್ನಡ ವರ್ಷನ್ ನಲ್ಲಿ ಡಬ್ ಆಗಿದೆ ಎನ್ನಲಾಗುತ್ತಿರುವ ಟೀಸರ್ ಹರಿದಾಡುತ್ತಿದೆ. ಒಂದು ವೇಳೆ ಡಬ್ಬಿಂಗ್ ಆಗ್ತಿರುವುದು ನಿಜವಾದರೇ, ಸಿನಿಮಾನೂ ಬರಬಹುದು. ಅಥವಾ ಅಭಿಮಾನಿಗಳು ಯಾರಾದರೂ ಹೀಗೆ ಕನ್ನಡದಲ್ಲಿ ಡಬ್ ಮಾಡಿ ವೈರಲ್ ಮಾಡುತ್ತಿದ್ದಾರಾ ಗೊತ್ತಿಲ್ಲ. ಕಾದು ನೋಡಬೇಕಿದೆ. ಎಲ್ಲದಕ್ಕೂ ಉತ್ತರ ಸಿಗಲಿದೆ.

  English summary
  Superstar rajinikanth and bollywood actor akshay kumar starrer 2.0 movie kannada version teaser goes viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X