For Quick Alerts
  ALLOW NOTIFICATIONS  
  For Daily Alerts

  ವಿಶ್ವಾದ್ಯಂತ ಅಬ್ಬರಿಸುತ್ತಿರುವ '2.0' ಕರ್ನಾಟಕದಲ್ಲಿ ಗಳಿಸಿದೆಷ್ಟು.?

  |
  Rajanikanth 2.0 movie : ರಜನಿ 2.0 ಕಲೆಕ್ಷನ್ ಇಷ್ಟೆ..? | FILMIBEAT KANNADA

  ಜಗತ್ತಿನಾದ್ಯಂತ ಸುಮಾರು 10 ಸಾವಿರ ಹಾಗೂ ಭಾರತದಲ್ಲಿ 6 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ '2.0' ತೆರೆಕಂಡಿತ್ತು. ಅದರಂತೆ ಕರ್ನಾಟಕದಲ್ಲೂ 900 ಕ್ಕೂ ಹೆಚ್ಚು ತೆರೆಗಳಲ್ಲಿ ತಲೈವಾ ಸಿನಿಮಾ ಬಿಡುಗಡೆಯಾಗಿತ್ತು.

  ಈಗ ಕಲೆಕ್ಷನ್ ನಲ್ಲಿ ದಾಖಲೆ ಮಾಡಿರುವ ರಜನಿ ಸಿನಿಮಾ ನಾಲ್ಕು ದಿನಕ್ಕೆ 400 ಕೋಟಿ ಗಳಿಸಿದೆ. ಭಾರತದಲ್ಲಿ 298 ಕೋಟಿ ಹಾಗೂ ಹೊರದೇಶದಲ್ಲಿ 105 ಕೋಟಿ ಗಳಿಕೆ ಕಂಡಿದೆ.

  'ಬಾಹುಬಲಿ' ಮುಂದೆ ಬಹುದೊಡ್ಡ ಸೋಲು ಕಂಡ ರಜನಿ '2.0'

  ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳಿಗೆ ಭಾರಿ ಬೇಡಿಕೆ ಎಂಬ ಮಾತಿದೆ. ಬೇರೆ ಭಾಷೆಯ ಚಿತ್ರಗಳಿಗೆ ಕರ್ನಾಟಕ, ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚು ಆಧಾಯವಿದೆ ಎನ್ನಲಾಗುತ್ತೆ. ಹಾಗ್ನೋಡಿದ್ರೆ, ರಜನಿಕಾಂತ್ 2.0 ಚಿತ್ರ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು.? ಮುಂದೆ ಓದಿ.....

  ಕರ್ನಾಟಕದ ಕಲೆಕ್ಷನ್.?

  ಕರ್ನಾಟಕದ ಕಲೆಕ್ಷನ್.?

  ರಜನಿಕಾಂತ್ ಚಿತ್ರಗಳಿಗೆ ಕರ್ನಾಟಕದಲ್ಲಿ ಹೆಚ್ಚು ಮಾರ್ಕೆಟ್ ಇದೆ ಎಂಬುದು 2.0 ಚಿತ್ರದಲ್ಲೂ ಸಾಬೀತಾಗಿದೆ. ಮೊದಲ ವಾರಾಂತ್ಯಕ್ಕೆ ಕರ್ನಾಟಕದಲ್ಲಿ ರಜನಿ ಸಿನಿಮಾ ಒಟ್ಟು 28 ಕೋಟಿ ಗಳಿಕೆ ಕಂಡಿದೆ.

  '2.O' ವಿಮರ್ಶೆ: ಗ್ರಾಫಿಕ್ಸ್ ಅಬ್ಬರ, ಶಂಕರ್ ಜಾದುಗಾರ

  ಚೆನ್ನೈನಲ್ಲಿ 10 ಕೋಟಿ ಗಳಿಕೆ

  ಚೆನ್ನೈನಲ್ಲಿ 10 ಕೋಟಿ ಗಳಿಕೆ

  ರಜನಿಕಾಂತ್ ಸಿನಿಮಾ ನಾಲ್ಕು ದಿನಕ್ಕೆ ಚೆನ್ನೈನಲ್ಲಿ 10 ಕೋಟಿಗಳಿದೆ. ಮೊದಲ ದಿನ 2.6 ಕೋಟಿ, ಎರಡನೇ ದಿನ 2.1 ಕೋಟಿ ಮೂರನೇ ದಿನ 2.7 ಕೋಟಿ ಹಾಗೂ ನಾಲ್ಕನೇ ದಿನ 2.7 ಕೋಟಿ ಗಳಿಸುವ ಮೂಲಕ ಒಟ್ಟು 10.9 ಕೋಟಿ ಗಳಿಕೆ ಕಂಡಿದೆ. ಇದು ಚೆನ್ನೈನಲ್ಲಿ ತಮಿಳು ಸಿನಿಮಾ ಅತಿ ಹೆಚ್ಚು ಹಣ ಗಳಿಸಿದ ಮೊದಲ ಸಿನಿಮಾ.

  ರಜನಿ '2.0' ಕಲೆಕ್ಷನ್: ನಿರೀಕ್ಷೆ ಪರ್ವತದಷ್ಟು, ಗಳಿಸಿದ್ದು ಬೆಟ್ಟದಷ್ಟು.!

  ಚೆನ್ನೈಗಿಂತ ಬೆಂಗಳೂರಿನಲ್ಲೇ ಹೆಚ್ಚು

  ಚೆನ್ನೈಗಿಂತ ಬೆಂಗಳೂರಿನಲ್ಲೇ ಹೆಚ್ಚು

  ಹಾಗ್ನೋಡಿದ್ರೆ, ರಜನಿ ಚಿತ್ರಕ್ಕೆ ಚೆನ್ನೈ ಹೃದಯಭಾಗ. ಅಲ್ಲಿಂದ ದೊಡ್ಡ ಮೊತ್ತ ಬರುವ ನಿರೀಕ್ಷೆ ಇರಿತ್ತೆ. ಬಟ್, ರಜನಿ ಚಿತ್ರಕ್ಕೆ ಕಲೆಕ್ಷನ್ ವಿಚಾರದಲ್ಲಿ ಚೆನ್ನೈಗಿಂತ ಬೆಂಗಳೂರು ಮುಖ್ಯವಾಗಿರುತ್ತೆ. ಕರ್ನಾಟಕದಿಂದ ಗಳಿಕೆ ಕಂಡಿರುವ 28 ಕೋಟಿಯಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಬೆಂಗಳೂರಿನಿಂದಲೇ ಹೋಗಿದೆ.

  '2.0' ಚಿತ್ರದ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೀಗಾ ಕಾಲೆಳೆಯೋದು.!

  400 ಕೋಟಿ ಬಾಚಿದ ತಲೈವಾ

  400 ಕೋಟಿ ಬಾಚಿದ ತಲೈವಾ

  ವರ್ಲ್ಡ್ ವೈಡ್ ರಜನಿ ಮತ್ತು ಅಕ್ಷಯ್ ಕುಮಾರ್ ಸಿನಿಮಾ ನಾಲ್ಕು ದಿನಕ್ಕೆ 400 ಕೋಟಿ ಬಾಚಿಕೊಂಡಿದೆ. ಈ ಚಿತ್ರದ ಒಟ್ಟು ಬಜೆಟ್ 545 ಕೋಟಿ. ಪ್ರಿ ರಿಲೀಸ್ ಕಲೆಕ್ಷನ್ ನಲ್ಲಿ ಸುಮಾರು 200 ಕೋಟಿ ಬಿಸಿನೆಸ್ ಮಾಡಿದೆ. ಅಲ್ಲಿಗೆ, ಹಾಕಿ ಬಂಡವಾಳ ವಾಪಸ್ ಬಂದಿರುವ ಸಾಧ್ಯತೆ ಇದೆ. ಆದ್ರೆ, ಅಂತಿಮವಾಗಿ ಈ ಸಿನಿಮಾ ಎಷ್ಟು ಗಳಿಕೆ ಕಾಣಲಿದೆ ಎಂಬುದು ಕುತೂಹಲ.

  English summary
  2.0 Karnataka Box Office Collection: 2.0 has been breaking box office records since its release. The film stars Rajinikanth, Akshay Kumar and Amy Jackson in lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X