»   » ಸಂತೋಷಕೂಟದಲ್ಲಿ ರಾಧಿಕಾ ಬಗ್ಗೆ ರಮ್ಯಾ ಹೇಳಿದ್ದೇನು?

ಸಂತೋಷಕೂಟದಲ್ಲಿ ರಾಧಿಕಾ ಬಗ್ಗೆ ರಮ್ಯಾ ಹೇಳಿದ್ದೇನು?

Posted By:
Subscribe to Filmibeat Kannada

ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ ರಾಧಿಕಾ ಕುಮಾರಸ್ವಾಮಿ ನಿರ್ಮಾಣದ ಚಿತ್ರ ಲಕ್ಕಿ. ಚಿತ್ರ ಯಶಸ್ವಿಯಾಗಿದ್ದಕ್ಕೆ ಮೊನ್ನೆ ಚಿತ್ರತಂಡ ಹಮ್ಮಿಕೊಂಡಿದ್ದ ಸಂತೋಷಕೂಟದಲ್ಲಿ ರಾಧಿಕಾ ಗೈರುಹಾಜರಾಗಿದ್ದರೂ ಯಶ್ ಮತ್ತು ರಮ್ಯಾ ಚಿತ್ರದ ಬಗ್ಗೆ ಸಾಕಷ್ಟು ಮಾತನಾಡಿದರು. ತಮ್ಮ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.

ಈ ಚಿತ್ರದ ಮೂಲಕ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ 'ಲಕ್ಕಿ' ಆಗಿದೆ. ಮೊದಲವಾರ ಲಕ್ಕಿ ಬಾಕ್ಸ್ ಆಫೀಸ್ ನಲ್ಲಿ ಒಂದೂವರೆ ಕೋಟಿ ರು. ಗಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಾನ್ಸೆರಿ ಪೆವಿಲಿಯನ್ ಪಂಚತಾರಾ ಹೊಟೇಲಿನಲ್ಲಿ ನಡೆದ ಈ ಸಂತೋಷ ಕೂಟದಲ್ಲಿ ರಮ್ಯಾ ಮತ್ತು ಯಶ್‌ ಜೋಡಿ ಅಕ್ಷರಶಃ ಮಿಂಚಿತು. ರಾಧಿಕಾಗೆ ಭಯಂಕರ ಜ್ವರ ಬಂದಿರುವುದರಿಂದ ಬಂದಿಲ್ಲ ಎಂದು ಚಿತ್ರತಂಡ ಘೋಷಿಸಿತು.

ಬಿಳಿ ಸೀರೆಯಲ್ಲಿ ಸಖತ್ ಮಿಂಚುತ್ತಿದ್ದ ರಮ್ಯಾ, ಲಕ್ಕಿ ಚಿತ್ರ ಗೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ನಿರ್ಮಾಪಕಿ ರಾಧಿಕಾ ರಾಧಿಕಾ ತುಂಬಾ ಒಳ್ಳೆಯವರು. ಆಕೆ ಇನ್ನಷ್ಟು ಚಿತ್ರಗಳನ್ನು ಮಾಡಲಿ ಎಂದು ಹಾರೈಸಿದರು. "ಸಾಗರ್ ಚಿತ್ರಮಂದಿರದಲ್ಲಿ ನಾನು ಚಿತ್ರ ನೋಡಿದ್ದೇನೆ. ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿದ್ದರು. ಇನ್ನಷ್ಟು ಪ್ರೇಕ್ಷಕರು ಚಿತ್ರಮಂದಿರತ್ತ ಹೋಗಬೇಕು. ಎಂದರು.

ರಾಕಿಂಗ್ ಸ್ಟಾರ್ ಯಶ್ ಕೂಡ ಇದೇ ಧಾಟಿಯಲ್ಲಿ ಮಾತನಾಡಿದರು. "ನನ್ನ ಹಾಗೂ ರಮ್ಯಾ ಜೋಡಿಯನ್ನು ಜನ ಮೆಚ್ಚಿದ್ದಾರೆ. ತುಂಬಾ ಪ್ರೀತಿಯಿಂದ ಕೆಲಸ ಮಾಡಿದ್ದೇವೆ. ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ. ಲಕ್ಕಿ ಚಿತ್ರದ ಯಶಸ್ಸು ರಾಧಿಕಾ ಇನ್ನಷ್ಟು ಚಿತ್ರ ಮಾಡುವಂತೆ ಪ್ರೇರೇಪಿಸಲಿದೆ" ಎಂದು ಹೇಳಿದರು. (ಒನ್ ಇಂಡಿಯಾ ಕನ್ನಡ)

English summary
Actress Ramya told that Oudience agreed our Lucky pair. Radhika sholud produce more movies. She is great producer.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X