For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಗರ್ಲ್ ತಲೆ ದಿಮ್ಮೆನ್ನಿಸಿದ 'ಕಲಕತ್ತಾ ಸಾದಾ'

  By Rajendra
  |

  ರಕ್ಷಿತಾ, ರಾಧಿಕಾ ಕುಮಾರಸ್ವಾಮಿ ನಿರ್ಮಾಪಕಿಯರಾಗಿ ಬದಲಾಗಿದ್ದಾಯಿತು. ಈಗ ಗೋಲ್ಡನ್ ಗರ್ಲ್ ರಮ್ಯಾ ಸರದಿ. ಅವರೂ ಈಗ ನಿರ್ಮಾಪಕಿಯಾಗಿ ಬದಲಾಗಲು ಹೊರಟಿದ್ದಾರೆ. 'ಸಿದ್ಲಿಂಗು' ನಿರ್ದೇಶಿಸಿದ್ದ ವಿಜಯ ಪ್ರಸಾದ್ ಕೈಗೆ ಮತ್ತೊಂದು ಚಿತ್ರವನ್ನು ಕೊಡಲು ತಯಾರಿ ನಡೆದಿದೆ.

  ಚಿತ್ರಕ್ಕೆ 'ಕಲಕತ್ತಾ ಸಾದಾ' ಎಂದು ಹೆಸರಿಡಲಾಗಿದೆ. "ಚಿತ್ರದ ಒನ್ ಲೈನ್ ಕತೆ ಕೇಳಿದ್ದೇನೆ. ತುಂಬ ಇಂಟರೆಸ್ಟಿಂಗ್ ಆಗಿದೆ. ಈ ಚಿತ್ರವನ್ನು ನಾನೇ ನಿರ್ಮಿಸುತ್ತೇನೆ" ಎಂದಿದ್ದಾರೆ ರಮ್ಯಾ.ಎಲ್ಲ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಚಿತ್ರ ಸೆಟ್ಟೇರಲಿದೆಯಂತೆ. ಅಂದಹಾಗೆ 'ಕಲಕತ್ತಾ ಸಾದಾ' ಎಂದರೆ ಲೈಟಾಗಿ ತಲೆ ದಿಮ್ಮೆನ್ನಿಸುವ ಒಂದು ತರಹ ಬೀಡಾ.

  ಚಿತ್ರ ನಿರ್ಮಾಣದ ಜೊತೆಗೆ ನಾಯಕಿ ಪಾತ್ರವನ್ನೂ ರಮ್ಯಾ ಪೋಷಿಸಲಿದ್ದಾರೆ. ಚಿತ್ರದ ನಾಯಕ, ಉಳಿದ ಪಾತ್ರವರ್ಗ, ತಾಂತ್ರಿಕ ಬಳಗದ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. 'ಕಲಕತ್ತಾ ಸಾದಾ' ಚಿತ್ರವನ್ನು ರಮ್ಯಾ ಸ್ವತಂತ್ರವಾಗಿ ನಿರ್ಮಿಸುತ್ತಾರೋ ಅಥವಾ ಬೇರೆಯವರ ಮೂಲಕ ನಿರ್ಮಿಸುತ್ತಾರೋ ಗೊತ್ತಿಲ್ಲ. (ಏಜೆನ್ಸೀಸ್)

  English summary
  Golden Girl Ramya is looking at turning producer soon. “I’ve read a one-liner for a film called Kolkata Saada, to be directed by Vijaya Prasad. I am seriously thinking of producing the film said the actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X