Just In
- 21 min ago
ಹಿಂದೂ ಭಾವನೆಗಳಿಗೆ ಧಕ್ಕೆ; ಸೈಫ್ ನಟನೆಯ 'ತಾಂಡವ್' ವೆಬ್ ಸರಣಿ ವಿರುದ್ಧ ಬಿಜೆಪಿ ನಾಯಕರ ದೂರು
- 1 hr ago
ಕಪಾಳಮೋಕ್ಷ ಆರೋಪ; ನಟ ಮಹೇಶ್ ಮಂಜ್ರೇಕರ್ ವಿರುದ್ಧ ದೂರು ದಾಖಲು
- 2 hrs ago
ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ
- 14 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
Don't Miss!
- Finance
ವಿಶ್ವವೇ ಕಂಗಾಲು; ಚೀನಾ ಆರ್ಥಿಕತೆ 2020ರಲ್ಲಿ 2.3% ಬೆಳವಣಿಗೆ ದಾಖಲು
- News
2020ರಲ್ಲಿ ಚೀನಾ ಜಿಡಿಪಿ ಬೆಳವಣಿಗೆ 4 ದಶಕಗಳಲ್ಲೇ ಅತ್ಯಂತ ಕಡಿಮೆ
- Sports
ಸ್ಪಿನ್ ಮಾಂತ್ರಿಕ ಕನ್ನಡಿಗ ಬಿಎಸ್ ಚಂದ್ರಶೇಖರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು
- Lifestyle
ಅಂಡಾಣು ಶೈತ್ಯೀಕರಣ: ಮಗುವನ್ನು ಪಡೆಯಲು ಈ ವಿಧಾನ ಸುರಕ್ಷಿತವೇ?
- Automobiles
ಗ್ರಾಜಿಯಾ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಹೋಂಡಾ ಮೋಟಾರ್ಸೈಕಲ್
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಾಳೆ ರಿಲೀಸ್ : 'ಎಡಕಲ್ಲು ಗುಡ್ಡದ ಮೇಲೆ' 'ಹಲೋ ಮಾಮ'ನ ಪ್ರಣಯ
ನಾಳೆ ಶುಕ್ರವಾರ... ಶುಕ್ರವಾರ ಅಂದರೆ ಹೊಸ ಸಿನಿಮಾ... ಹೀಗಿರುವಾಗ ಈ ವಾರ ಕನ್ನಡದಲ್ಲಿ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿದೆ. 'ಎಡಕಲ್ಲು ಗುಡ್ಡದ ಮೇಲೆ' ಮತ್ತು 'ಹಲೋ ಮಾಮ' ಸಿನಿಮಾ ನಾಳೆ ತೆರೆಗೆ ಬರುತ್ತಿದೆ.
'ಎಡಕಲ್ಲು ಗುಡ್ಡದ ಮೇಲೆ'
1973ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದ 'ಎಡಕಲ್ಲು ಗುಡ್ಡದ ಮೇಲೆ' ಹೆಸರಿನಲ್ಲಿ ಮತ್ತೆ ಒಂದು ಸಿನಿಮಾ ನಿರ್ಮಾಣ ಆಗಿದೆ. ವಿವಿನ್ ಸೂರ್ಯ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಇದೊಂದು ಮಹಿಳಾ ಪ್ರದಾನ ಕಥೆ ಹೊಂದಿರುವ ಚಿತ್ರವಾಗಿದ್ದು, ಕೌಟುಂಬಿಕ ಮೌಲ್ಯಗಳು ಚಿತ್ರದಲ್ಲಿ ಇದೆಯಂತೆ. ಸಿನಿಮಾದಲ್ಲಿ ಹಿರಿಯ ನಟ ಶ್ರೀನಾಥ್, ದತ್ತಣ್ಣ, ನಟಿ ಭಾರತಿ ವಿಷ್ಣುವರ್ಧನ್, ಸಿಹಿಕಹಿ ಚಂದ್ರು, ಪದ್ಮಜಾ ರಾವ್ ಸೇರಿದಂತೆ ಅನೇಕರು ನಟಿಸಿದ್ದಾರೆ. 'ಎಡಕಲ್ಲು ಗುಡ್ಡದ ಮೇಲೆ' ಖ್ಯಾತಿಯ ನಟ ಇತ್ತೀಚಿಗಷ್ಟೆ ನಿಧನರಾದ ಚಂದ್ರಶೇಖರ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮತ್ತೆ ಗಾಂಧಿನಗರದ ಚಿತ್ರಮಂದಿರದಲ್ಲಿ 'ದಾರಿ ತಪ್ಪಿದ ಮಗ'
'ಹಲೋ ಮಾಮ'
ನಟ ಮೋಹನ್ ಮತ್ತೆ ಒಂದು ಸಿನಿಮಾ ಮಾಡಿದ್ದಾರೆ. 'ಹಲೋ ಮಾಮ' ಸಿನಿಮಾದ ಮೂಲಕ ಮೋಹನ್ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದೊಂದು ಕಾಮಿಡಿ ಸಿನಿಮಾವಾಗಿದ್ದು ಇದೇ ಶುಕ್ರವಾರ ಸಿನಿಮಾ ಬಿಡುಗಡೆಯಾಗಲಿದೆ. ಮೋಹನ್ ಈ ಚಿತ್ರದ ನಿರ್ದೇಶನದ ಜೊತೆಗೆ ನಟನೆ ಸಹ ಮಾಡಿದ್ದಾರೆ. ಭೂಮಿಕಾ, ಪೃಥ್ವಿ ಬನವಾಸಿ, ದಿಲೀಪ್, ಅಕ್ರಂ, ಸೌಜನ್ಯಾ ಚಿತ್ರದಲ್ಲಿ ನಟಿಸಿದ್ದಾರೆ.
ಈ ಎರಡು ಸಿನಿಮಾಗಳ ಜೊತೆಗೆ ರಾಜ್ ಕುಮಾರ್ ಅವರ 'ದಾರಿ ತಪ್ಪಿದ ಮಗ' ಸಿನಿಮಾ ನಾಳೆ ಬೆಂಗಳೂರಿನ ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.