»   » ಈ ವಾರ 'ಭರ್ಜರಿ' ಹುಡುಗನಿಗೆ ಪೈಪೋಟಿ ಕೊಡ್ತಾರೆ ಮರಿ ಟೈಗರ್

ಈ ವಾರ 'ಭರ್ಜರಿ' ಹುಡುಗನಿಗೆ ಪೈಪೋಟಿ ಕೊಡ್ತಾರೆ ಮರಿ ಟೈಗರ್

Posted By:
Subscribe to Filmibeat Kannada

ಕನ್ನಡದಲ್ಲಿ ಈ ಶುಕ್ರವಾರ ಎರಡು ಸಿನಿಮಾಗಳು ರಿಲೀಸ್ ಆಗುತ್ತಿವೆ. ಒಂದು ಧ್ರುವ ಸರ್ಜಾ ನಟನೆಯ 'ಭರ್ಜರಿ' ಮತ್ತೊಂದು ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ 'ಕ್ರ್ಯಾಕ್' ಸಿನಿಮಾ.

'ಭರ್ಜರಿ' ಮತ್ತು 'ಕ್ರ್ಯಾಕ್'... ಎರಡೂ ಚಿತ್ರಗಳು ಪಕ್ಕಾ ಕಮರ್ಶಿಯಲ್ ಸಿನಿಮಾಗಳು. ಇವೆರಡೂ ಕೂಡ ಮಾಸ್ ಮತ್ತು ಕ್ಲಾಸ್ ಅಂಶಗಳನ್ನು ಹೊಂದಿವೆ. ಸದ್ಯದ ಮಟ್ಟದಲ್ಲಿ 'ಭರ್ಜರಿ' ಸಿನಿಮಾ 'ಕ್ರ್ಯಾಕ್' ಚಿತ್ರಕ್ಕಿಂತ ಹೆಚ್ಚು ಕ್ರೇಜ್ ಸೃಷ್ಟಿಮಾಡಿದೆ. ಮುಂದೆ ಓದಿ...

'ಭರ್ಜರಿ' ಬಿಡುಗಡೆ

ವರ್ಷಗಳಿಂದ ತಯಾರಾಗುತ್ತಿದ್ದ 'ಭರ್ಜರಿ' ಸಿನಿಮಾಗೆ ಅಂತೂ ಬಿಡುಗಡೆ ಭಾಗ್ಯ ಸಿಕ್ಕಿದೆ. 'ಭರ್ಜರಿ' ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗಲಿದೆ. ಬೆಂಗಳೂರಿನ 'ನರ್ತಕಿ' ಸೇರಿದಂತೆ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಭರ್ಜರಿ' ತೆರೆಗೆ ಬರಲಿದೆ.

ಸಖತ್ ಪವರ್ ಫುಲ್ ಆಗಿರುವ 'ಭರ್ಜರಿ' ಟ್ರೇಲರ್ ಮಿಸ್ ಮಾಡದೆ ನೋಡಿ

ಸಿನಿಮಾದ ವಿಶೇಷತೆ

'ಭರ್ಜರಿ' ಧ್ರುವ ಸರ್ಜಾ ಮತ್ತು ರಚಿತಾ ರಾಮ್ ನಟನೆಯ ಸಿನಿಮಾ. 'ಬಹದ್ದೂರ್' ಖ್ಯಾತಿಯ ಚೇತನ್ ಕುಮಾರ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ ಮತ್ತು ನಟಿ ವೈಶಾಲಿ ಕೂಡ ಕಾಣಿಸಿಕೊಂಡಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ.

'ಭರ್ಜರಿ'ಗಿದ್ದ ಭಯ ಮಾಯ: ಇನ್ನೇನಿದ್ರು 'ಘರ್ಜನೆ' ಮಾತ್ರ ಬಾಕಿ

'ಕ್ರ್ಯಾಕ್' ರಿಲೀಸ್

ವಿನೋದ್‌ ಪ್ರಭಾಕರ್‌ ನಟನೆಯ 'ಕ್ರ್ಯಾಕ್' ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗಲಿದೆ. ಬೆಂಗಳೂರಿನ 'ಅನುಪಮ' ಸೇರಿದಂತೆ ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. 'ಟೈಸನ್' ಸಿನಿಮಾದ ನಂತರ ನಟ ವಿನೋದ್‌ ಪ್ರಭಾಕರ್‌ 'ಕ್ರ್ಯಾಕ್' ಚಿತ್ರವನ್ನು ಮಾಡಿದ್ದಾರೆ. ಮತ್ತೊಮ್ಮೆ ಪೊಲೀಸ್‌ ಅಧಿಕಾರಿಯಾಗಿ ಅವರು ಖದರ್ ತೋರಿಸಿದ್ದಾರೆ.

ಮತ್ತೆ ಒಂದಾದ 'ಟೈಸನ್' ಜೋಡಿ

ವಿಶೇಷ ಅಂದರೆ ಈ ಹಿಂದೆ 'ಟೈಸನ್' ಚಿತ್ರವನ್ನು ನಿರ್ದೇಶನ ಮಾಡಿದ್ದ ರಾಮ್ ನಾರಾಯಣ್ ಅವರೇ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. 'ಆರ್​.ಎಕ್ಸ್.ಸೂರಿ' ಖ್ಯಾತಿಯ ಆಕಾಂಕ್ಷಾ ಚಿತ್ರದ ನಾಯಕಿಯಾಗಿದ್ದು, ಡಾ.ಶಮಿತಾ ಮಲ್ನಾಡ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

English summary
Dhruva sarja starrer 'Bharjari' and Vinod Prabhakar starrer 'Crack' movies are releasing on September 15th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada