For Quick Alerts
  ALLOW NOTIFICATIONS  
  For Daily Alerts

  'ಅಲ್ಲಮ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ: ನಿರ್ದೇಶಕ ಟಿ.ಎಸ್.ನಾಗಾಭರಣ ಸಂತಸ

  By Harshitha
  |

  ಇತಿಹಾಸ ಪುರುಷರನ್ನ ತೆರೆಮೇಲೆ ಕಲಾತ್ಮಕವಾಗಿ ಕಟ್ಟಿಕೊಡುವುದು ನಿಜಕ್ಕೂ ಸವಾಲಿನ ಕೆಲಸ. ಆ ಸವಾಲನ್ನ ಸ್ವೀಕರಿಸಿ 'ಅಲ್ಲಮ' ಚಿತ್ರವನ್ನ ತೆರೆಮೇಲೆ ಅದ್ಭುತವಾಗಿ ಕಟ್ಟಿಕೊಟ್ಟ ನಿರ್ದೇಶಕ ಟಿ.ಎಸ್.ನಾಗಾಭರಣ ಮೊಗದಲ್ಲಿ ಇಂದು ಮಂದಹಾಸ ಮೂಡಿದೆ. ಕಾರಣ, 'ಅಲ್ಲಮ' ಚಿತ್ರಕ್ಕೆ ಸಂದ ಎರಡು ರಾಷ್ಟ್ರೀಯ ಪ್ರಶಸ್ತಿಯ ಗರಿ.

  ಹೌದು, ಪ್ರತಿಷ್ಟಿತ 64ನೇ ರಾಷ್ಟ್ರೀಯ ಪ್ರಶಸ್ತಿ ಇಂದು ಪ್ರಕಟವಾಗಿದೆ. ಅದರಲ್ಲಿ ಕನ್ನಡದ 'ಅಲ್ಲಮ' ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶಕ ಹಾಗೂ ಮೇಕಪ್ ವಿಭಾಗಗಳಲ್ಲಿ ಪ್ರಶಸ್ತಿಗಳು ದೊರಕಿವೆ.['ಅಲ್ಲಮ' ಚಿತ್ರಕ್ಕೆ ರಾಷ್ಟ್ರ ಮನ್ನಣೆ: ಕನ್ನಡಕ್ಕೆ 4 ರಾಷ್ಟ್ರ ಪ್ರಶಸ್ತಿ]

  ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಜೊತೆ ಪ್ರತಿಕ್ರಿಯೆ ನೀಡಿದ 'ಅಲ್ಲಮ' ಚಿತ್ರದ ನಿರ್ದೇಶಕ ಟಿ.ಎಸ್.ನಾಗಾಭರಣ, ''ನನ್ನ ವೃತ್ತಿ ಜೀವನದಲ್ಲಿಯೇ 'ಅಲ್ಲಮ' ಒಂದು ಅತ್ಯದ್ಭುತ ಚಿತ್ರ. ನಾನು ಇದಕ್ಕಿಂತ ಹೆಚ್ಚು ನಿರೀಕ್ಷಿಸಿದ್ದೆ. ಸಂಗೀತ ಹಾಗೂ ಮೇಕಪ್ ಗೆ ಪ್ರಶಸ್ತಿ ಲಭಿಸಿರುವುದು ಸಂತೋಷ ಆಗಿದೆ ನಿಜ.. ಆದರೆ, ಯಾವಾಗಲೂ Content is the King. ಈ ರೀತಿ ಮೇಕಿಂಗ್ ಮಾಡಿದಾಗ ಕ್ರಿಟಿಕ್ಸ್ ಇನ್ನೂ ಚೆನ್ನಾಗಿ ಜಡ್ಜ್ ಮಾಡಬಹುದಿತ್ತೇನೋ ಅಂತ ಅನಿಸ್ತು. Allama deserved much more than this'' ಎಂದರು.['ಅಲ್ಲಮ' ವಿಮರ್ಶೆ: ಸಿನಿಮಾ ಮಾಯೆಯೆಂಬರು, ಮಾಯೆ ಅಲ್ಲ ಗುಹೇಶ್ವರ!]

  ''ಅಲ್ಲಮ' ಚಿತ್ರದಲ್ಲಿ ಆರ್ಟ್ ಡಿಪಾರ್ಟ್ಮೆಂಟ್ ಮತ್ತು ಕಾಸ್ಟ್ಯೂಮ್ ಬಹಳ ಚೆನ್ನಾಗಿ ಕೆಲಸ ಮಾಡಿದೆ. ಸಂಗೀತ ಹಾಗೂ ಮೇಕಪ್ ನ ಗುರುತಿಸಿದ್ರಲ್ಲ ಎನ್ನುವ ಖುಷಿ ಖಂಡಿತ ನನಗಿದೆ'' ಅಂತ ಟಿ.ಎಸ್.ನಾಗಾಭರಣ ಹೇಳಿದರು.

  English summary
  Director TS Nagabharana is happy as his directorial 'Allama' wins 2 National Awards in 'Best Music' and 'Make-up' category.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X