For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ಲೋಕದಲ್ಲಿ ಟ್ರೆಂಡ್ ಆದ '2.O' ಸಿನಿಮಾ

  |

  ಸ್ಟೈಲ್ ಕಿಂಗ್ ನಟನೆಯ ಬಹು ನಿರೀಕ್ಷಿತ '2.O' ಸಿನಿಮಾ ಇಂದು ವಿಶ್ವಾದ್ಯಂತ ತೆರೆಗೆ ಬಂದಿದೆ. ಈ ಕಾರಣದಿಂದ ಟ್ವಿಟ್ಟರ್ ಲೋಕದಲ್ಲಿಯೂ ರಜನಿ ಹವಾ ಎಬ್ಬಿಸಿದ್ದಾರೆ.

  ಟ್ವಿಟ್ಟರ್ ನಲ್ಲಿ '2.O' ಟ್ರೆಂಡಿಂಗ್ ನಲ್ಲಿದೆ. ಮೊದಲ ಟ್ರೆಂಡಿಂಗ್ ನಲ್ಲಿ #2Point0FromToday, ಎರಡನೇ ಸ್ಥಾನದಲ್ಲಿ #2Point0FDFS ಹಾಗೂ ಐದನೇ ಸ್ಥಾನದಲ್ಲಿ #2Point0Review ಎಂಬ ಹ್ಯಾಶ್ ಟ್ಯಾಗ್ ಗಳಿವೆ.

  '2.O' ಸಿನಿಮಾದ ನಡುವೆ ದರ್ಶನ ನೀಡಿದ 'KGF'!

  ಸಿನಿಮಾ ನೋಡಿದ ಅಭಿಮಾನಿಗಳು ಹಾಗೂ ವಿಮರ್ಶೆಗಳ ಸುರಿಮಳೆಯಿಂದ ಸಿನಿಮಾ ಟ್ರೆಂಡ್ ಆಗಿದೆ. ಕರ್ನಾಟಕದಲ್ಲಿಯೂ ಸಿನಿಮಾದ ಕ್ರೇಜ್ ಬಹಳ ದೊಡ್ಡದಿದೆ. ಸಿನಿಮಾ ಬೆಂಗಳೂರಿನಲ್ಲಿ ಮೊದಲ ದಿನ 900ಕ್ಕೂ ಹೆಚ್ಚು ಶೋ ಪ್ರದರ್ಶನ ಕಾಣುತ್ತಿದೆ. ಬೆಳಗ್ಗೆ 4 ಗಂಟೆಗೆ ಮೊದಲ ಪ್ರದರ್ಶನ ಶುರುವಾಗಿದೆ.

  ನಿರ್ದೇಶಕ ಶಂಕರ್ ಮತ್ತು ರಜನಿಕಾಂತ್ ಅವರ ಹ್ಯಾಟ್ರಿಕ್ ಸಿನಿಮಾ ಇದಾಗಿದೆ. ಎರಡು ಸೂಪರ್ ಹಿಟ್ ಸಿನಿಮಾಗಳ ರೀತಿ ಈ ಸಿನಿಮಾ ಕೂಡ ಬ್ಲಾಕ್ ಬಾಸ್ಟರ್ ಹಿಟ್ ಆಗಲಿ ಎಂಬ ಆಸೆ ಅಭಿಮಾನಿಗಳದ್ದಾಗಿದೆ. ಬರೋಬ್ಬರಿ 600 ಕೋಟಿ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ.

  English summary
  Super Star Rajinikanth's '2.O' movie trending number 1 in twitter. The movie is released today (November 29th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X