»   » ತಾರಾ ಕನಸುಗಳಿಗೆ ಬಾಗಿಲು ಮುಚ್ಚಿದ ಮೇಲ್ಮನೆ

ತಾರಾ ಕನಸುಗಳಿಗೆ ಬಾಗಿಲು ಮುಚ್ಚಿದ ಮೇಲ್ಮನೆ

Subscribe to Filmibeat Kannada

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾಗೆ ಮತ್ತೊಮ್ಮೆ ಅದೃಷ್ಟ ಕೈಕೊಟ್ಟಿದೆ. ಈ ಬಾರಿ ಅದೃಷ್ಟ ದೇವತೆ ಬಾಗಿಲು ಮುಚ್ಚಿದ್ದು ಚಿತ್ರರಂದಲ್ಲಿ ಅಲ್ಲ ರಾಜಕೀಯ ರಂಗದಲ್ಲಿ. ರಾಜ್ಯ ಬಿಜೆಪಿ ಕಾರ್ಯಕರ್ತೆಯಾಗಿ ತಾರಾ ಸಕ್ರಿಯರಾಗಿದ್ದರೂ ಮೇಲ್ಮನೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ.

ತಾರಾ ಬದಲಾಗಿ ನವರಸ ನಾಯಕ ಜಗ್ಗೇಶ್ ಗೆ ಬಿಜೆಪಿ ಮಣೆಹಾದ್ದು ಗೊತ್ತೆ ಇದೆ. ಕೆಲತಿಂಗಳ ಹಿಂದೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ಥಾನಕ್ಕೆ ತಾರಾ ಅವರ ಹೆಸರು ಕೇಳಿಬಂದಿತ್ತು. ಹಲವಾರು ಕಾರಣಗಳಿಂದ ತಾರಾ ಅವರು ಮಹಿಳಾ ಆಯೋಗಕ್ಕೂ ಆಯ್ಕೆಯಾಗಲಿಲ್ಲ.

ತಾರಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಸಮ್ಮುಖದಲ್ಲಿ ಅಧಿಕೃತವಾಗಿ ಕಳೆದ ವರ್ಷ ಬಿಜೆಪಿ ಸೇರಿದ್ದರು. ಯಾವುದೇ ಷರತ್ತಿಲ್ಲದೆ ಬಿಜೆಪಿ ಸೇರಿರಿರುವ ಅವರು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ಪಕ್ಷದ ಪರವಾಗಿ ರಾಜ್ಯದಾದ್ಯಂತ ಪ್ರವಾಸ ಮಾಡುವುದಾಗಿ ಹೇಳಿದ್ದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada