»   » ನಾಗತಿ ಚಿತ್ರದಲ್ಲಿ ಸದ್ಯಕ್ಕೆ ಆಕ್ಟ್ ಮಾಡುವ ಮನಸಿಲ್ಲ

ನಾಗತಿ ಚಿತ್ರದಲ್ಲಿ ಸದ್ಯಕ್ಕೆ ಆಕ್ಟ್ ಮಾಡುವ ಮನಸಿಲ್ಲ

Posted By:
Subscribe to Filmibeat Kannada

ನಾಗತೀಹಳ್ಳಿ ಚಂದ್ರಶೇಖರ್ ವಿರುದ್ಧ ಭಯಂಕರ ಆರೋಪ ಮಾಡಿದ ಐಂದ್ರಿತಾ ರೇ ಈಗೇನು ಮಾಡುತ್ತಿದ್ದಾರೆ ಅಂತ ನೇರವಾಗಿ ಅವರಿಗೇ ಪ್ರಶ್ನೆ ಹಾಕಲಾಗಿ, ಅವರು ಹೇಳಿದ್ದಿಷ್ಟು... ಐಮ್ ಕೂಲ್. ಮೊನ್ನೆಯಷ್ಟೆ ಒಂದು ವಾರ ಗೋವಾ ಸುತ್ತಿ ಬಂದೆ. ನನ್ನ ಕ್ಲೋಸ್ ಫ್ರೆಂಡ್ಸ್ ಅಷ್ಟೆ ಜೊತೆಗಿದ್ದರು. ಕಳೆದ ವರ್ಷ ಪೂರ್ತಿ ಬ್ಯುಸಿ ಇದ್ದೆ. ನನಗೂ ಸಣ್ಣ ಬ್ರೇಕ್ ಬೇಕಿತ್ತು. ಅದೀಗ ಸಿಕ್ಕಿತು ಎಂದರು.

ಎಲ್ಲಾ ಕಿರಿಕಿರಿ ಮರೆತು ಒಂದು ವಾರ ಖುಷಿ ಪಟ್ಟೆ. ಮುಂದೆ ಮತ್ತೆ ಚಿತ್ರಗಳ ಸಾಲುಗಳನ್ನು ಇದಿರುಗೊಳ್ಳಲು ಕಾಯಬೇಕು. ಎರಡು ಮೂರು ಸಿನಿಮಾಗಳು ಸಿಕ್ಕಿವೆ. ದೂಳ್ ಬಿಡುಗಡೆಗೆ ಕಾಯುತ್ತಿದ್ದೇನೆ. ಅದರಲ್ಲಿ ಮಜಾ ಪಾತ್ರವಿದೆ. ಕಾಮಿಡಿ ಟಚ್ ಇರುವ ಹುಡುಗಿ ನಾನು.

ಐಂದ್ರಿತಾ ಮಾತಿಗೆ ಸಣ್ಣ ಬ್ರೇಕ್ ಹಾಕಿ, ಮತ್ತೆ ನಾಗತೀ ಸಿನಿಮಾ ಕಡೆಗೆ ಎಳೆಯಲಾಗಿ, ಅವರು ಅದಕ್ಕೂ ಸ್ಪಷ್ಟವಾಗಿಯೇ ಉತ್ತರ ಕೊಟ್ಟರು. ಅದೇನೆಂದರೆ..."ನೂರು ಜನ್ಮಕು" ಚಿತ್ರದಲ್ಲಿ ನನ್ನದು ಮೆಚ್ಯೂರ್‍ಡ್ ಪಾತ್ರ. ನಾನು ಸಿನಿಮಾಗೆ ಮೋಸ ಮಾಡೋಲ್ಲ. ಪ್ರಮೋಷನ್ಸ್‌ಗೆ ಪ್ರೊಡ್ಯೂಸರ್ ಕರೆದರೆ ಖಂಡಿತ ಹೋಗ್ತೀನಿ. ನಮ್ಮ ಸಮಸ್ಯೆ ಸಿನಿಮಾಗೂ ಸಮಸ್ಯೆ ಆಗಬಾರದು. ಬಟ್, ನಾಗತೀಹಳ್ಳಿ ಅವರ ಜೊತೆ ಸದ್ಯಕ್ಕೆ ಇನ್ನೊಂದು ಚಿತ್ರದಲ್ಲಿ ಆಕ್ಟ್ ಮಾಡುವಷ್ಟು ನನ್ನ ಮನಸ್ಸು ಬದಲಾಗಿಲ್ಲ.

ಹೋದ ವರ್ಷದ ಗಳಿಕೆ, ಈ ವರ್ಷದ ಸಂಕಲ್ಪ ಏನು ಎನ್ನಲಾಗಿ...ಕೆಲವು ಮಾಧ್ಯಮ ಹೋದ ವರ್ಷ ನನ್ನನ್ನು ನಂಬರ್ ಒನ್ ಅಂತ ಕರೆದವು. ಖುಷಿಯ ಜೊತೆಗೆ ಭಯವಾಯಿತು. ಈ ವರ್ಷ ನನ್ನ ಗುರಿ ಬೇರೆಯೇ ಇದೆ. ನಂಬರ್ ಒನ್ ಅನ್ನೋದು ಶಾಶ್ವತವೇನೂ ಅಲ್ಲ. ಈ ವರ್ಷ ಕ್ಯೂಪಾ ಜೊತೆ ಕೈಜೋಡಿಸಿ ಒಂದಿಷ್ಟು ಪ್ರಾಣಿಗಳ ಉಳಿವಿಗೆ ಕಾರಣಳಾಗಬೇಕು ಅಂದುಕೊಂಡಿದ್ದೀನಿ. ದಟ್ಸ್ ಇಟ್...ಐಂದ್ರಿತಾ ಮಾತು ಮುಗಿಸಿ ಹಸನಾಗಿ ನಕ್ಕರು. ಮತ್ತೆ ನಾಗತಿ ಎನ್ನಲು, ಪ್ಲೀಸ್ ಆ ವಿಷಯ ಮತ್ತೆ ಮತ್ತೆ ಬೇಡ ಅಂದು ಸುಮ್ಮನಾದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada