ಕಹೋನಾ ಪ್ಯಾರ್ ಹೈ ಹುಡುಗಿ ಅಮಿಶಾ ಕನ್ನಡಕ್ಕೆ?

ಈಗಾಗಲೇ ತೆಲುಗು ಚಿತ್ರದಲ್ಲಿ ನಟಿಸಿರುವ ಅಮಿತಾ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಆಗಮಿಸಲಿದ್ದಾರೆ. ತೆಲುಗಿನ 'ಅತನೊಕ್ಕಡೆ' ಚಿತ್ರ ಕನ್ನಡಕ್ಕೆ ರೀಮೇಕ್ ಆಗುತ್ತಿದ್ದು ಆ ಚಿತ್ರದಲ್ಲಿ ನಟಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಚಿತ್ರವನ್ನು ಇದೇ ಮೊದಲ ಬಾರಿಗೆ ನವೀನ್ ಎಂಬುವರು ನಿರ್ದೇಶಿಸುತ್ತಿದ್ದಾರೆ. ಚಿತ್ರದ ನಾಯಕ ಹೊಸಬರಂತೆ. ಯುಗಾದಿಗೆ ಹೆಸರಿಡದ ಆ ಚಿತ್ರ ಸೆಟ್ಟೇರಲಿದ್ದು ಏಪ್ರಿಲ್ ನಿಂದ ಚಿತ್ರೀಕರಣ ಆರಂಭವಾಗಲಿದೆ.
ತಮ್ಮ ಸಿನಿಮಾ ವೃತ್ತಿ ಜೀವನವನ್ನು 2000ನೇ ವರ್ಷದಲ್ಲಿ ಅಮಿಶಾ ಪ್ರಾರಂಭಿಸಿದರು. ನಂತರ ಆಕೆ ನಟಿಸಿದ ಕಹೊ ನಾ ಪ್ಯಾರ್ ಹೈ ಮತ್ತು ಗದರ್ ಚಿತ್ರಗಳು ದಾಖಲೆ ನಿರ್ಮಿಸಿದ್ದವು. 2002ರ ನಂತರ ಆಕೆ ನಟಿಸಿದ ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ. ತೋಡಾ ಪ್ಯಾರ್ ತೋಡಾ ಮ್ಯಾಜಿಕ್ ಚಿತ್ರದಲ್ಲಿ ಬಿಕಿನಿ ತೊಟ್ಟ ನಂತರ ಮಾಧ್ಯಮಗಳ ಗಮನ ಸೆಳೆದರು. ಸೈಫ್ ಆಲಿ ಖಾನ್ ರ ಮಾಜಿ ಗೆಳತಿ ಈಗ ಕನ್ನಡಕ್ಕೆ ಬಂದು ಮೋಡಿ ಮಾಡಲಿದ್ದಾರಾ? ಕಾದು ನೋಡೋಣ.
(ದಟ್ಸ್ ಕನ್ನಡ ಚಿತ್ರವಾರ್ತೆ)
More from Filmibeat
ಕನ್ನಡ ಸಿನಿಮಾ kannada movies ಅಮಿಶಾ ಪಟೇಲ್ ತೆಲುಗು ರೀಮೇಕ್ ಅತನೊಕ್ಕ್ಕಡೆ ಕಹೋ ನಾ ಪ್ಯಾರ್ ಹೈ ಗದರ್ ಸೈಫ್ ಆಲಿ ಖಾನ್ amisha patel naveen kaho na pyaar hai gadar thoda pyaar thoda magic


Click it and Unblock the Notifications











