»   » ತಪ್ಪಿದ ಮಾತಿಗೆ ಕ್ಷಮೆ ಕೇಳಿದ ಓಂ ಪ್ರಕಾಶ್ ರಾವ್

ತಪ್ಪಿದ ಮಾತಿಗೆ ಕ್ಷಮೆ ಕೇಳಿದ ಓಂ ಪ್ರಕಾಶ್ ರಾವ್

Posted By:
Subscribe to Filmibeat Kannada

ಆ ಪದವನ್ನು ನಾನು ಉದ್ದೇಶಪೂರ್ವಕವಾಗಿ ಬಳಸಿಲ್ಲ. ಆ ಸಮಯಕ್ಕೆ ಬಾಯಲ್ಲಿ ಬಂದಿದ್ದನ್ನು ಹೇಳಿದ್ದು ನಿಜ. ನನ್ನ ಆ ಪದದ ಬಳಕೆಯಿಂದ ಆ ಜನಾಂಗಕ್ಕೆ ನೋವಾಗಿದೆ ಎಂಬುದು ಗೊತ್ತಾಗಿದೆ. ನನ್ನಿಂದ ದೊಡ್ಡ ತಪ್ಪಾಗಿದೆ ಕ್ಷಮಿಸಿ" ಹೀಗೆಂದು ಕೊರಮ ಜನಾಂಗದವರ ಕ್ಷಮೆ ಕೇಳಿದ್ದಾರೆ ನಿರ್ದೇಶಕ ಓಂ ಪ್ರಕಾಶ್ ರಾವ್. ಆದ ತಪ್ಪಿಗೆ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ.

ಆಗಿದ್ದಿಷ್ಟು. ಇತ್ತೀಚಿಗೆ ಅಣಜಿ ನಾಗರಾಜ್ ನಿರ್ಮಾಣದ ಬೀಮಾ ತೀರದಲ್ಲಿ ಚಿತ್ರದ ಆಡಿಯೋ ಬಿಡುಗಡೆ ವೇಳೆ ಆ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಕೊಡುತ್ತಾ ನಿರ್ದೇಶಕ ಓಂ ಪ್ರಕಾಶ್ ರಾವ್ ಹಿರಿಯ ನಟ ಲೋಕನಾಥ್ ಬಗ್ಗೆ ಹೇಳುತ್ತಾ "ಏಲ್ಲರೂ ಲೋಕನಾಥ್ ಅಂಕಲ್ ರನ್ನು ತಾತ, ಅಪ್ಪ, ಅಂಕಲ್, ಮಾವ ಈ ತರಹದ ಪಾತ್ರಗಳಲ್ಲೇ ಗುರುತಿಸುತ್ತಿದ್ದಾರೆ. ಆದರೆ ನಾನು ಅವರಿಗೆ ಕಳ್ಳ, ಕೊರಮನ ಪಾತ್ರ ಕೊಟ್ಟು ನೋಡೋಣವೆಂದು ಈ ಚಿತ್ರದಲ್ಲಿ ಕೊಟ್ಟಿದ್ದೇನೆ" ಎಂದಿದ್ದಾರೆ.

ಆದರೆ ಆಗ ಅವರಿಗೆ ಕೊರಮ ಎಂಬ ಹೆಸರಿನ ಜನಾಂಗವೊಂದಿದೆ ಎಂಬ ಸಂಗತಿ ತಿಳಿದಿರಲಿಲ್ಲವಂತೆ. ಕೊರಮ ಜನಾಂಗಕ್ಕೆ ಆದ ಅವಮಾನವನ್ನು ಕುರಿತು ಕೆಲವು ಸ್ನೇಹಿತರು ಬಂದು ಓಂ ಅವರಿಗೆ ಹೇಳಿದ ಮೇಲೆ ಅವರಿಗೆ ಜ್ಞಾನೋದಯವಾಗಿದೆಯಂತೆ. ಅದಕ್ಕಾಗಿ ಅವರು ಕೊರಮ ಜನಾಂಗದವರಲ್ಲಿ ಕ್ಷಮೆ ಕೇಳಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Director Om Prakash Rao asked Apology to Koram Comunity for his words against their Respect. He spoke that words at the stage of Bheema Thiradalli Movie Audio Release.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X