»   » ಡಾ.ರಾಜ್ ಕಪ್ ಬೆಂಗ್ಳೂರಿಂದ ದಾವಣಗೆರೆಗೆ ಶಿಫ್ಟ್

ಡಾ.ರಾಜ್ ಕಪ್ ಬೆಂಗ್ಳೂರಿಂದ ದಾವಣಗೆರೆಗೆ ಶಿಫ್ಟ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ನೃತ್ಯ ಕಲಾವಿದರ ಸಹಾಯಾರ್ಥ ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ "ಡಾ.ರಾಜ್ ಟ್ವೆಂಟಿ-20" ಕ್ರಿಕೆಟ್ ಪಂದ್ಯಾವಳಿ ದಾವಣಗೆರೆಗೆ ಸ್ಥಳಾಂತರವಾಗಿದೆ. ಕಿಚ್ಚ ಸುದೀಪ್ ಅವರ ಸಲಹೆ ಮೇರೆಗೆ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ದಾವಣಗೆರೆ ಕರ್ನಾಟಕದ ಕೇಂದ್ರ ಬಿಂದು. ದಾನಿಗಳ ತವರೂರು. ಅಲ್ಲೆ ಪಂದ್ಯ ನಡೆಸಿದರೆ ಉತ್ತಮ ಎಂಬುದು ಸುದೀಪ್ ಸಲಹೆ. ಹಾಗಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಡಾ ರಾಜ್ ಕಪ್ ದಾವಣಗೆರೆಗೆ ಸ್ಥಳಾಂತರವಾಗಿದೆ. ತಾರೆಗಳ ರಂಗಿನಾಟಕೆ ದಾವಣಗೆರೆ ಸಜ್ಜಾಗಿದೆ.

"ಡಾ.ರಾಜ್ ಕಪ್" ಗಾಗಿ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಜು.23 ರಿಂದ 25ರವರೆಗೆ ಕನ್ನಡ ಚಿತ್ರರಂಗದ ತಾರೆಗಳ ನಡುವೆ ಸೆಣೆಸಾಟ ನಡೆಯಲಿದೆ. ಆರಂಭದಲ್ಲಿ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಈ ವಿಚಾರವನ್ನು ಅಂತಿಮ ಕ್ಷಣದಲ್ಲಿ ಕೈಬಿಡಲಾಗಿದೆ. ಟಿಕೆಟ್ ದರ ರು.100 ನಿಗದಿಪಡಿಸಲಾಗಿದೆ. ಟಿಕೆಟ್ ಗಳು ಜಿಲ್ಲಾ ಕ್ರೀಡಾಂಗಣದಲ್ಲಿ ದೊರೆಯಲಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada