»   » ಕಂಠೀರವ ಸ್ಟುಡಿಯೋದಲ್ಲಿ ಹೆಂಡ್ತೀರ್ ದರ್ಬಾರ್

ಕಂಠೀರವ ಸ್ಟುಡಿಯೋದಲ್ಲಿ ಹೆಂಡ್ತೀರ್ ದರ್ಬಾರ್

Posted By:
Subscribe to Filmibeat Kannada

ಮೂಲತಃ ಕೊಳ್ಳೇಗಾಲದವರಾದ ಜಿ. ರಾಮಚಂದ್ರನ್, ಈಗಾಗಲೇ, ತಮಿಳು ತೆಲುಗಿನಲ್ಲಿ 5 ಚಿತ್ರಗಳನ್ನು ನಿರ್ಮಿಸಿದ್ದಾರೆ. ಇದೀಗ ಕನ್ನಡದಲ್ಲಿ "ಹೆಡ್ತೀರ ದರ್ಬಾರ್" ಎಂಬ ಹಾಸ್ಯ ಪ್ರಧಾನ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ. ತೆಲುಗಿನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ವಿ. ಶೇಖರ್ ಈ ಚಿತ್ರದ ಕಥೆ-ಚಿತ್ರಕಥೆ- ಬರೆದು ನಿರ್ದೇಶಿಸುತ್ತಿದ್ದಾರೆ.

ಸಂಸಾರದಲ್ಲಿ ಅದಾಯಕ್ಕಿಂತ ಮೀರಿ ಖರ್ಚು ಮಾಡಿಕೊಂಡರೆ ಯಾವ ರೀತಿ ತೊಂದರೆ ಅನಾನುಕೂಲಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಹಾಸ್ಯ ಮಿಶ್ರಿತವಾಗಿ ನಿರ್ದೇಶಕ ಶೇಖರ್ ನಿರೂಪಿಸಿದ್ದಾರೆ. ಚಿತ್ರದ ಪ್ರತಿ ಸನ್ನಿವೇಶವೂ ಹಾಸ್ಯದ ಹೊನಲನ್ನೇ ಹರಿಸುತ್ತದೆ ಎನ್ನುವ ನಿರ್ದೇಶಕರು, ಬೆಂಗಳೂರು ಸುತ್ತಮುತ್ತ ಮತ್ತು ಕಂಠೀರವ ಸ್ಟುಡಿಯೋದ ಗಣೇಶ ದೇವಸ್ಥಾನ, ಪೊಲೀಸ್ ಸ್ಟೇಷನ್ ಸೆಟ್ ಹಾಗೂ ಪಾರ್ಕ್‌ನಲ್ಲಿ ಚಿತ್ರೀಕರಣ ನಡೆಸಿ, ಮಾತಿನ ಭಾಗವನ್ನು ಸಂಪೂರ್ಣಗೊಳಿಸಿದ್ದಾರೆ. ಸಧ್ಯದಲ್ಲೇ ಹಾಡುಗಳ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ.

ವರವು ಎತ್ತಣ.. ಸೆಲವು ಪತ್ತಣ ಎಂಬ ತಮಿಳು ಚಿತ್ರದ ಅವತರಣಿಕೆಯಾದ ಈ ಚಿತ್ರದಲ್ಲಿ ನಟ ರಮೇಶ್ ಹಾಗೂ ಮೀನಾ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದು, ಸಾಧುಕೋಕಿಲ, ರಂಗಾಯಣರಘು, ಅಂಬಿಕಾ ಸೋನಿ ಹಾಗೂ ಪ್ರೀತಿ ಪ್ರಮುಖ ತಾರಾಗಣದಲ್ಲಿದ್ದಾರೆ. ರಾಜು ಮಹೇಂದ್ರ ಛಾಯಾಗ್ರಾಹಕರಾದರೆ, ಚಿತ್ರದ 5 ಹಾಡುಗಳಿಗೆ ಸಾಧುಕೋಕಿಲರವರೇ ಸಂಗೀತ ಸಂಯೋಜನೆ ಮಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada