»   »  ನಿಧಿಯ ಹಿಂದೆ ಕೋಮಲ್ ಮತ್ತು ಗೆಳೆಯರು

ನಿಧಿಯ ಹಿಂದೆ ಕೋಮಲ್ ಮತ್ತು ಗೆಳೆಯರು

Subscribe to Filmibeat Kannada
Komal's new comedy film starts rolling
ಹಣ, ಒಡವೆ, ವಸ್ತುಗಳನ್ನು ಕಂಡರೆ ಇಷ್ಟಪಡದ ವ್ಯಕ್ತಿ ಯಾರಿದ್ದಾರೆ? ಎಲ್ಲರೂ ಅದರ ಮೋಹಕ್ಕೆ ಒಳಗಾದವರೆ. ಆದರೆ ನಟ ಕೋಮಲ್ ಹಾಗೂ ಗೆಳೆಯರಾದ ರಾಹುಲ್, ಗಿರಿದಿನೇಶ್ ಮೋಹಿತರಾಗಿರುವುದು ಭೂಮಿಯಲ್ಲಿ ಅಡವಾಗಿರುವ ನಿಧಿಗಲ್ಲ. ಇಳೆಯ ಸುಂದರಿ ನಿಧಿಸುಬ್ಬಯ್ಯ ಅವರ ಮೆಲೆ.

ಕೋಮಲ್ ಹಾಗೂ ಗೆಳೆಯರು ವಾಸವಿದ್ದ ಮನೆಯ ಎದುರು ಮನೆಗೆ ನಾಯಕಿ ನಿಧಿಸುಬ್ಬಯ್ಯ ವಿದೇಶದಿಂದ ಆಗಮಿಸಿ ನೆಲೆಯೂರುತ್ತಾರೆ. ನಿಧಿಯೊಂದಿಗೆ ಉಮಾಶ್ರೀ ಅವರ ವಾಸ್ತವ್ಯ ಕೂಡ ಅದೇ ಮನೆಯಲ್ಲೇ ಇರುತ್ತದೆ. ನಾಯಕಿಯನ್ನು ಕಂಡು ಬೆರಗಾದ ಈ ಮೂವರು ಅವಳನ್ನು ಪ್ರೇಮಿಸಲು ಆರಂಭಿಸುತ್ತಾರೆ. ಎಂದಿನಂತೆ ಮುಂಜಾವಿನಲ್ಲಿ ವಾಯುವಿಹಾರಕ್ಕೆ ತೆರಳಿದ ನಿಧಿ ಓಟದಲ್ಲಿ ಮಗ್ನಳಾದರೆ ಉಮಾಶ್ರೀ ಕಾರು ಹಿಡಿದು ವ್ಯಾಯಾಮ ಮಾಡುತ್ತಿರುತ್ತಾರೆ.

ಪ್ರೀತಿಯ ಬಲೆಗೆ ಬಿದ್ದ ಯುವಕರು ಕಾರು ಕೆಟ್ಟು ಹೋಗಿರಬಹುದೆಂದು ಯೋಚಿಸಿ ಕಾರನ್ನು ತಳ್ಳಿ ಗುಂಡಿಗೆ ಬೀಳಿಸುವ ಹಾಸ್ಯ ಸನ್ನಿವೇಶವನ್ನು ನಿರ್ದೇಶಕ ಎ.ಆರ್.ಬಾಬು ನಾಮಕರಣಗೊಳ್ಳದ ನೂತನ ಚಿತ್ರಕ್ಕಾಗಿ ಅತ್ತಿಬೆಲೆ ಹಾಗೂ ಜಯನಗರದಲ್ಲಿ ಚಿತ್ರೀಕರಿಸಿಕೊಂಡರು.

ದತ್ತಾತ್ರೇಯ ಮೂವೀಸ್ ಲಾಂಛನದಲ್ಲಿ ಅನಸೂಯ ಹಾಗೂ ಜೀವನ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಎ.ಆರ್.ಬಾಬು ನಿರ್ದೇಶಿಸುತ್ತಿದ್ದಾರೆ. 'ಮಸ್ತ್ ಮಜಾ ಮಾಡಿ' ಚಿತ್ರಕ್ಕೆ ಸಂಗೀತ ನೀಡಿದ್ದ ಬಾಲಾಜಿ ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ. ಅಶೋಕ್‌ಕಶ್ಯಪ್ ಕ್ಯಾಮೆರಾ, ಪ್ರಕಾಶ್ ಸಂಕಲನ, ಡಿಫರೆಂಟ್‌ಡ್ಯಾನಿ ಸಾಹಸ, ಶ್ರೀಧರ್ ಹಾಗೂ ವಿದ್ಯಾ ನೃತ್ಯ, ಅನಿಲ್ ನಿರ್ಮಾಣನಿರ್ವಹಣೆ. ಕೋಮಲ್‌ಕುಮಾರ್, ರಾಹುಲ್, ಕಿರಣ್, ಗಿರಿದಿನೇಶ್, ನೇತಾನಿಯಾ, ನಿಧಿಸುಬ್ಬಯ್ಯ, ಮುಖ್ಯಮಂತ್ರಿಚಂದ್ರು, ಉಮಾಶ್ರೀ, ಹೊನ್ನವಳ್ಳಿಕೃಷ್ಣ, ಪ್ರಮಿಳಾಜೋಷಾಯಿ, ಮಾರಿಮುತ್ತು, ಶ್ರೀನಿವಾಸಗೌಡ, ನಂದ ಈ ನೂತನ ಚಿತ್ರದ ತಾರಾಬಳಗದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕೋಮಲ್ ಗೆ ನಾಯಕ ಪಟ್ಟ ಒಗ್ಗಲ್ಲ: ಸಾಧು
ಕೋಮಲ್ ಜೊತೆಗಿನ ಸಿನಿಮಾಕ್ಕೆ ರಮ್ಯಾ ನಕಾರ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada