»   » ಅಂತರ್ಜಾಲಕ್ಕೆ ಅಡಿಯಿಟ್ಟ ಲವ್ಲಿ ಸ್ಟಾರ್ ಪ್ರೇಮ್

ಅಂತರ್ಜಾಲಕ್ಕೆ ಅಡಿಯಿಟ್ಟ ಲವ್ಲಿ ಸ್ಟಾರ್ ಪ್ರೇಮ್

Posted By:
Subscribe to Filmibeat Kannada

ಪುಸ್ತಕ ಓದುವುದು, ಸಂಗೀತ ಕೇಳುವುದು, ಪಯಣ ನನಗಿಷ್ಟ ಎನ್ನುತ್ತಾರೆ 'ನೆನಪಿರಲಿ' ಪ್ರೇಮ್. ಹಾಗೆಯೇ ಪ್ರೇಮ್ ಗೆ ವೆಜ್ ಮತ್ತು ನಾನ್ ವೆಜ್ ಎರಡೂ ಇಷ್ಟವಾದ ಆಹಾರಗಳು. ಬಣ್ಣಗಳಲ್ಲಿ ಕಪ್ಪು, ಬಿಳುವು ಮತ್ತು ನೀಲಿ ನೆಚ್ಚಿನವು. ವರನಟ ಡಾ.ರಾಜ್ ಎಂದರೆ ಪ್ರೇಮ್ ಗೆ ಅಚ್ಚುಮೆಚ್ಚ್ಚು...ಹೀಗೆ ಪ್ರೇಮ್ ರ 'ಹೊಂಗನಸು'ಗಳ ಬಾಳ ಬುತ್ತಿ ತೆರೆದುಕೊಳ್ಳುತ್ತದೆ ಲವ್ಲಿ ಪ್ರೇಮ್ ಡಾಡ್ ಕಾಂನಲ್ಲಿ.

ಪ್ರೇಮ್ ಅವರ ಅಭಿಮಾನಿಗಳು ಈ ಅಂತರ್ಜಾಲದಲ್ಲಿ ಅವರೊಂದಿಗೆ ಚಾಟ್ ಮಾಡಬಹುದು, ಅಭಿಮಾನಿ ಬಳಗವನ್ನು ಸೇರಬಹುದು. ಪ್ರೇಮ್ ರ ವೈಯಕ್ತಿಕ ವಿವರಗಳೂ ಈ ಅಂತರ್ಜಾಲ ತಾಣದಲ್ಲಿ ಲಭ್ಯ. ತೆರೆಕಂಡ, ತೆರೆಕಾಣಲಿರುವ ಪ್ರೇಮ್ ಅಭಿನಯದ ಚಿತ್ರಗಳ ವಿವರಗಳು ಸಿಗುತ್ತವೆ.

ಆಂಗ್ಲ ಭಾಷೆಯಲ್ಲಿರುವ ವೆಬ್ ಸೈಟ್ ನ್ನು ರೆಬಲ್ ಸ್ಟಾರ್ ಅಂಬರೀಷ್ ಸಂಕ್ರಾಂತಿ ಹಬ್ಬದ ದಿನ ಅನಾವರಣ ಮಾಡಿದ್ದಾರೆ. ಪ್ರೇಮ್ ರ ವೆಬ್ ಸೈಟ್ ಕನ್ನಡದಲ್ಲೇ ಇದ್ದಿದ್ದರೆ ಇನ್ನೂ ಸೊಗಸಾಗಿರುತ್ತಿತ್ತು ಎಂಬುದು ಅಭಿಮಾನಿಗಳ ಆಸೆ. 'ಜನುಮದ ಗೆಳತಿ' ಮತ್ತು 'ಜೊತೆಗಾರ' ಚಿತ್ರಗಳು ಆದಷ್ಟು ಶೀಘ್ರ ಬಿಡುಗಡೆಯಾಗಲಿ ಎಂದು ಆಶಿಸೋಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada