Just In
Don't Miss!
- Automobiles
ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ
- News
ರೈತರ ಹೋರಾಟ ಬೆಂಬಲಿಸಿ ಜ.20ರಂದು ರಾಜ್ ಭವನ ಚಲೋ
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೇವರು ಕೊಟ್ಟ ತಂಗಿ ಮೀರಾ ಜಾಸ್ಮಿನ್ ಸಿನಿಮಾಗೆ ವಿದಾಯ?
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಮೀರಾ ಜಾಸ್ಮಿನ್ ಚಿತ್ರರಂಗಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ. ತಮ್ಮ ಹತ್ತು ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಮೀರಾ ಅವರು ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿ ಹಲವಾರು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದರು. ಇಷ್ಟಕ್ಕೂ ಅವರು ಚಿತ್ರರಂಕ್ಕ್ಕೆ ವಿದಾಯ ಹೇಳಲು ಬಲವಾದ ಕಾರಣ ಏನು?
ಮದುವೆ, ಮದುವೆ, ಮದುವೆ. ಶೀಘ್ರದಲ್ಲೆ ಮೀರಾ ಜಾಸ್ಮಿನ್ ಮದುವೆಯಾಗುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ತಮ್ಮ ಬಹುಕಾಲದಗೆಳೆಯ ಮ್ಯಾಂಡೋಲಿನ್ ರಾಜೇಶ್ ಅವರ ಕೈಹಿಡಿಯಲಿದ್ದಾರೆ ಮೀರಾ. ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ರಾಜೇಶ್ ಸಂಪ್ರದಾಯಬದ್ಧ ಹಿಂದು ಕುಟುಂಬದ ಹಿನ್ನೆಲೆಯವರು.
ಇದೇ ವರ್ಷ ರಾಜೇಶ್ ಮತ್ತು ಮೀರಾ ಮದುವೆಯಾಗಲಿದ್ದು ಯಾವಾಗ ಎಂಬ ಪಕ್ಕಾ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಇತ್ತೀಚೆಗೆ ಮೀರಾ ಅಭಿನಯದ ಮಲಯಾಳಂ ಚಿತ್ರಗಳು ಫ್ಲಾಪ್ ಆಗುತ್ತಿರುವುದು ಆಕೆ ವಿದಾಯ ಹೇಳು ಮತ್ತೊಂದು ಕಾರಣ ಎನ್ನಲಾಗಿದೆ. ತಮಿಳಿನಲ್ಲೂ ಮೀರಾ ಮ್ಯಾಜಿಕ್ ನಡೆಯುತ್ತಿಲ್ಲ. ಹಾಗಾಗಿ ಅವಕಾಶಗಳು ಗಗನ ಕುಸುಮವಾಗುತ್ತಿವೆ.ಅಂದಹಾಗೆ ಮೀರಾ ಜಾಸ್ಮಿನ್ ಕನ್ನಡದಲ್ಲಿ ದೇವರು ಕೊಟ್ಟ ತಂಗಿ, ಮೌರ್ಯ, ಅರಸು, ಹೂ, ಇಜ್ಜೋಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)